For Quick Alerts
ALLOW NOTIFICATIONS  
For Daily Alerts
 

IPL 2026: RCB 8 ಸ್ಥಾನ ತುಂಬಲು ಟಾಪ್‌ 5 ಆಟಗಾರರಿಗೆ ಒತ್ತು

ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2026) ಹರಾಜಿಗೆ ತಯಾರಿಗಳು ನಡೆದಿವೆ. ಈಗಾಗಲೇ ಐಪಿಎಲ್‌ನಲ್ಲಿ ಭಾಗವಹಿಸುವ ಎಲ್ಲ 10 ತಂಡಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಿದೆ. ಈಗ ಫ್ರಾಂಚೈಸಿಗಳು ಮಿನಿ ಹರಾಜಿನ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ಹಾರಜಿನಲ್ಲಿ ಆಟಗಾರರ ಸಾಮರ್ಥ್ಯಕ್ಕೆ ತಕ್ಕಂತೆ ಫ್ರಾಂಚೈಸಿಗಳು ಹಣವನ್ನು ಹೂಡಲಿದ್ದಾರೆ. ಆರ್‌ಸಿಬಿ ಸಹ ಈ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸಲಿದೆ. ಹರಾಜಿನಲ್ಲಿ ಆರ್‌ಸಿಬಿ ಗುರಿಯಾಗಿಸಲಿರುವ 5 ಆಟಗಾರರ ಪಟ್ಟಿ ಇಲ್ಲಿದೆ.

ಆರ್‌ಸಿಬಿ 18ನೇ ಆವೃತ್ತಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಪಟ್ಟವನ್ನು ಉಳಿಸಿಕೊಳ್ಳಲು ಆರ್‌ಸಿಬಿ, ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಕೊಂಡು, ತಂಡವನ್ನು ಮತ್ತಷ್ಟು ಬಲಿಷ್ಠ ಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದೆ. ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಗುರಿಯಾಗಿಸಲಿರುವ ಆಟಗಾರರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಅನ್ರಿಕ್ ನೋಕಿಯೆ (Anrich Nortje) ಮೊದಲ ಸ್ಥಾನ.

IPL Mini Auction 2026 Who Are the 5 Main Players RCB Can Buy and What Are the Reasons

ಅನ್ರಿಕ್ ನೋಕಿಯೆ ತಮ್ಮ ಬಿಗುವಿನ ದಾಳಿಯಿಂದಲೇ ಹೆಸರು ಮಾಡಿರುವ ಆಟಗಾರ. ಇವರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ವೇಗದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿಕೊಳ್ಳುತ್ತಿದೆ. ಈಗಾಗಿ ಜೋಶ್‌ ಹ್ಯಾಜಲ್‌ವುಡ್‌ ವಿದೇಶಿ ಬೌಲರ್‌ಗಳ ಕೋಟಾದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರಿಗೆ ಬ್ಯಾಕ್‌ ಅಪ್‌ ಆಗಿ ಇವರಿಗೂ ಆರ್‌ಸಿಬಿ ಹಣವನ್ನು ಹೂಡಬಹುದಾಗಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಲುಂಗಿ ಎನ್‌ಗಿಡಿ ಅವರನ್ನು ಆರ್‌ಸಿಬಿ ಕೈ ಬಿಟ್ಟಿದ್ದು, ಇವರ ಸ್ಥಾನವನ್ನು ಅನ್ರಿಕ್ ನೋಕಿಯೆ ತುಂಬಬಹುದಾಗಿದೆ.

ಸಿಮರ್‌ಜೀತ್ ಸಿಂಗ್

ಆರ್‌ಸಿಬಿ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತೀಯ ವೇಗದ ಬೌಲರ್‌ಗಳ ಕೊರತೆ ಇತ್ತು. ಆದರೆ ಈ ಕೊರತೆ ಕಳೆದ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕಾರಣ ಯಶ್‌ ದಯಾಳ್‌ ಅವರಿಗೆ ಭುವನೇಶ್ವರ್ ಕುಮಾರ್‌ ಉತ್ತಮ ಸಾಥ್ ನೀಡಿದ್ದರು. ಈಗ ಇನ್ನು ಈ ವಿಭಾಗವನ್ನು ಬಲಪಡಿಸಲು ಆರ್‌ಸಿಬಿ ಸಿಮರ್‌ಜೀತ್ ಸಿಂಗ್ (Simarjeet Singh) ಅವರಿಗೆ ಗಾಳ ಹಾಕುವ ಸಾಧ್ಯತೆ ಇದೆ.

ರವಿ ಬಿಷ್ಣೋಯ್

ಆರ್‌ಸಿಬಿ ತಂಡ ನುರಿತ ಸ್ಪಿನ್ ಬೌಲರ್‌ ಕೊರತೆಯನ್ನು ಕಳೆದ ವರ್ಷ ಅನುಭವಿಸಿತ್ತು. ಈ ಕೊರತೆಯನ್ನು ಹೋಗಲಾಡಿಸಲು ಆರ್‌ಸಿಬಿ ಈ ಬಾರಿಯ ಹರಾಜಿನಲ್ಲಿ ಭಾರತೀಯ ಸ್ಪಿನ್ ಬೌಲರ್‌ 25 ವರ್ಷದ ರವಿ ಬಿಷ್ಣೋಯ್‌ ಅವರಿಗೆ ಗಾಳ ಹಾಕುವ ಸಾಧ್ಯತೆ ಇದೆ. ಇವರು ಕಳೆದ ಆವೃತ್ತಿಯ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. ಇವರನ್ನು ಎಲ್‌ಎಸ್‌ಜಿ ರಿಲೀಸ್‌ ಮಾಡಿದ್ದರಿಂದ ಇವರಿಗೂ ಆರ್‌ಸಿಬಿ ಬಾಜಿ ಕಟ್ಟುವ ಸಾಧ್ಯತೆ ಇದೆ.

ವನಿಂದು ಹಸರಂಗ

ಆರ್‌ಸಿಬಿ ತಂಡದ ಪರ ಈ ಹಿಂದೆ ಆಡಿದ್ದ ವನಿಂದು ಹಸರಂಗ (Wanindu Hasaranga) ಅವರಿಗೂ ಆರ್‌ಸಿಬಿ ಮಣೆ ಹಾಕಿ ಹಣದ ಹೊಳೆಯನ್ನು ಹರಿಸಬಹುದು. ಈ ವೇಳೆ ಇವರು ಮಿಡ್ಲ್‌ ಓವರ್‌ಗಳಲ್ಲಿ ಹಸರಂಗ ಬಿಗುವಿನ ದಾಳಿ ನಡೆಸಿ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು. ಇವರನ್ನು ರಾಜಸ್ಥಾನ ರಾಯಲ್ಸ್‌ ಹರಾಜಿನ ಅಂಗಳಕ್ಕೆ ಬಿಟ್ಟಿದ್ದು, ಆರ್‌ಸಿಬಿ ಇವರಿಗೂ ಹಣ ಹೂಡುವ ಸಂಭವವಿದೆ.

ಪೃಥ್ವಿ ಶಾ

ಕಳೆದ ಬಾರಿಯ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದಿದ್ದ ಪೃಥ್ವಿ ಶಾ (Prithvi Shaw) ಅವರು ಈ ಬಾರಿ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಇವರ ಪ್ರದರ್ಶನ ಗಮನಿಸಿದರೆ, ಆರ್‌ಸಿಬಿ ಇವರನ್ನು ಬ್ಯಾಕ್‌ ಅಪ್‌ ವಿಕೆಟ್‌ ಕೀಪರ್ ಆಗಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

Story first published: Saturday, November 22, 2025, 12:29 [IST]
Other articles published on Nov 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+