ಭಾರತದ ಹೊರಗೆ ಈ ದಿನ ನಡೆಯಲಿದೆ IPL 2026 ಹರಾಜು
ನವೆಂಬರ್ 14 ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕಿಂತಲೂ ಅಭಿಮಾನಿಗಳ ಚಿತ್ತ ಕದ್ದಿರುವುದು ಮಾತ್ರ ಐಪಿಎಲ್ ರಿಟೇನ್ಷನ್ ಲೀಸ್ಟ್. ನವೆಂಬರ್ 15ರ ಸಂಜೆ 5ರೊಳಗೆ ಐಪಿಎಲ್‌ನಲ್ಲಿ ಭಾಗವಹಿಸುವ 10 ತಂಡಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಬೇಕಿದೆ. ಹೀಗಾಗಿ ಅಭಿಮಾನಿಗಳ ಕಣ್ಣು ತಮ್ಮ ತಮ್ಮ ಫೆವರೀಟ್ ತಂಡಗಳ ಮೇಲೆ ನೆಟ್ಟಿದೆ.
ಈ ಬಾರಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಅಂದರೆ ಮಾಲೀಕರು ತಮಗೆ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂದು ಅನಿಸುವುದೋ ಅಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು. ಕೈ ಬಿಟ್ಟ ಆಟಗಾರರ ಮೊತ್ತ ಹಾಗೂ ಫ್ರಾಂಚೈಸಿ ಪರ್ಸ್‌ಗೆ ಸೇರ್ಪಡೆ ಆಗುತ್ತದೆ. ಇನ್ನು ಈ ಬಾರಿಯ ಐಪಿಎಲ್ ಸೀಜನ್ ಮಾರ್ಚ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಅಲ್ಲದೆ ಈ ಬಾರಿಗೆ ಮಿನಿ ಹರಾಜಿಗೆ ಭರದ ಸಿದ್ಧತೆಗಳು ನಡೆಸಲಾಗಿದೆ. ಈ ಬಾರಿಯ ಹರಾಜು ಎಲ್ಲಿ ನಡೆಯುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಐಪಿಎಲ್ ಹರಾಜು ಯಾವಾಗ?
ಅಂದಹಾಗೆ 18ನೇ ಆವೃತ್ತಿಗೆ ನಡೆದ ಮೆಗಾ ಹರಾಜು ಸೌದಿಯಲ್ಲಿ ನಡೆದಿತ್ತು. ಈ ಬಾರಿಯ ಮಿನಿ ಹರಾಜು ಅಬುದಾಬಿಯಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಬಿಸಿಸಿಐ ಪಿಟಿಐಗೆ ಮಾಹಿತಿ ನೀಡಿದೆ. ಈ ಬಾರಿಯೂ ಐಪಿಎಲ್ ಹರಾಜು ಭಾರತದ ಹೊರಗೆ ನಡೆದಲ್ಲಿ ಸತತ ಮೂರನೇ ಬಾರಿಗೆ ಹರಾಜು ಭಾರತದ ಹೊರಗೆ ನಡೆಯಲಿದೆ. 2023ರ ಹರಾಜು ದುಬೈನಲ್ಲಿ, 2024ರ ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಈ ಬಾರಿ ಐಪಿಎಲ್ ಹರಾಜು ಡಿಸೆಂಬರ್ 15 ಅಥವಾ 16 ರಂದು ನಡೆಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪಕಟಣೆ ಬಂದಿಲ್ಲ.
ಅಭಿಮಾನಿಗಳು ಈಗಾಗಲೇ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಇನ್ನು ತಂಡಗಳು ಸಹ ರಿಟೇನ್ಷನ್ ಡೇಟ್ ಹತ್ತಿರ ಬರುತ್ತಿರುವುದರಿಂದ ಇದಕ್ಕಾಗಿ ಸಕಲ ಸಿದ್ಧತೆ ನಡೆಸಿವೆ. ನವೆಂಬರ್ 15 ರಂದಿ ರಿಲೀಸ್ ಆಗುವ ಪಟ್ಟಿಯಲ್ಲಿ ಯಾವೆಲ್ಲಾ ಆಟಗಾರರನ್ನು ತಂಡ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ ಎಂಬ ಬಗ್ಗೆ ಮಾಹಿತಿ ಲಭಿಸುತ್ತದೆ. ಇನ್ನು ಇದೇ ನವೆಂಬರ್ 27 ರಂದು ಮಹಿಳಾ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಐದು ತಂಡಗಳು ತಮ್ಮ ತಂಡಗಳನ್ನು ಬಲ ಪಡಿಸಿಕೊಳ್ಳಲು ಆಟಗಾರ್ತಿಯರಿಗೆ ಬಾಜಿ ಕಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications