For Quick Alerts
ALLOW NOTIFICATIONS  
For Daily Alerts
 

2 ಕೋಟಿ ಮೂಲ ಬೆಲೆಯ 5 ಆಟಗಾರರೇ RCB ಟಾರ್ಗೆಟ್‌

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಬಳಿಕ ಟಿ20 ಸರಣಿ ನಡೆಯಲಿದೆ. ಈ ವೇಳೆ ಎಲ್ಲರ ಚಿತ್ತ ಐಪಿಎಲ್‌ ಮಿನಿ ಹರಾಜಿನ ಮೇಲೆ ನೆಟ್ಟಿರಲಿದೆ. ಐಪಿಎಲ್‌ ಮಿನಿ ಹರಾಜು ಡಿ.16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಈ ವೇಳೆ ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಸಹ ಈ ಹರಾಜಿನಲ್ಲಿ ಬಿಗ್‌ ಪ್ಲೇಯರ್‌ಗಳಿಗೆ ಗಾಳ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ವರದಿ ಇಲ್ಲಿದೆ.

ಇತ್ತೀಚಿಗೆ ಐಪಿಎಲ್‌ ಮಿನಿ ಹರಾಜಿಗೆ ಹೆಸರು ನೊಂದಣಿ ಮಾಡಿಕೊಂಡ ಆಟಗಾರರ ಸಂಖ್ಯೆ 1300ಕ್ಕೂ ಹೆಚ್ಚು ಎಂದು ತಿಳಿದು ಬಂದಿದೆ. ಇದರಲ್ಲಿ ದೇಶೀಯ ಹಾಗೂ ವಿದೇಶಿ ಆಟಗಾರರು ಸಹ ಸೇರಿದ್ದಾರೆ. ಆರ್‌ಸಿಬಿ ಮಿನಿ ಹರಾಜಿನಲ್ಲಿ ತನ್ನಲ್ಲಿ ಲಭ್ಯ ಇರುವ 16.40 ಕೋಟಿ ರೂ.ಗಳನ್ನು ಹೂಡಿ ಸ್ಟಾರ್ ಆಟಗಾರರನ್ನು ತನ್ನ ತಂಡಕ್ಕೆ ಬರಮಾಡಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಆರ್‌ಸಿಬಿ 5 ಮಾರ್ಕಿ ಪ್ಲೇಯರ್‌ಗಳನ್ನು ಟಾರ್ಗೆಟ್‌ ಮಾಡಿ ಹರಾಜಿನಲ್ಲಿ ಹಣವನ್ನು ಹೂಡಲಿದೆ. ಈ ಮೂಲಕ ಆರ್‌ಸಿಬಿ ಐಪಿಎಲ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

IPL Mini-Auction RCB Targets Green Hasaranga Bishnoi and two others with 16 4 Cr purse

ಆರ್‌ಸಿಬಿ ಹರಾಜಿನಲ್ಲಿ ಗುರಿಯಾಗಿಸಲಿರುವ ಆಟಗಾರರಲ್ಲಿ ಆಸ್ಟ್ರೇಲಿಯಾ ಕ್ಯಾಮರೂನ್‌ ಗ್ರೀನ್‌ ಅಗ್ರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಈಗಾಗಲೇ ಆರ್‌ಸಿಬಿ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಇವರು ಆಲ್‌ರೌಂಡರ್‌ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದ ಆಟಗಾರ. ಇವರು ತಂಡಕ್ಕೆ ಎಂಟ್ರಿ ನೀಡಿದರೆ, ತಂಡದ ಸಮತೋಲನ ಉತ್ತಮವಾಗುತ್ತದೆ ಎಂಬ ಲೆಕ್ಕಾಚಾರ ಆರ್‌ಸಿಬಿ ಮ್ಯಾನೇಜ್ಮೆಂಟ್‌ನದ್ದಾಗಿದೆ. ಹೀಗಾಗಿ ಆರ್‌ಸಿಬಿ ಇವರನ್ನು ಗುರಿಯಾಗಿಸಿ ಹರಾಜಿನಲ್ಲಿ ಹಣ ಹೂಡಲಿದೆ.

ಅಲ್ಜಾರಿ ಜೋಸೆಫ್‌

ಆರ್‌ಸಿಬಿ ಈ ಬಾರಿ ಹರಾಜಿನಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚಾಗಿ ಹಣ ಹೂಡಬಹುದಾಗಿದೆ. ಈ ವೇಳೆ ಆರ್‌ಸಿಬಿ ವಿಂಡೀಸ್‌ ತಂಡದ ಸ್ಟಾರ್ ಆಟಗಾರ ಅಲ್ಜಾರಿ ಜೋಸೆಫ್‌ ಆರ್‌ಸಿಬಿ ಕಣ್ಣು ದೃಷ್ಟಿಯಲ್ಲಿ ಇರುವ ಆಟಗಾರ. ಇವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ತುಂಬುವುದಲ್ಲದೆ, ವೇಗದ ಬೌಲಿಂಗ್‌ನಿಂದಲೂ ತಂಡಕ್ಕೆ ನೆರವಾಗಬಲ್ಲರು. ಲುಂಗಿ ಎನ್‌ಗಿಡಿ ಅವರನ್ನು ಕೈ ಬಿಟ್ಟಿರುವ ಆರ್‌ಸಿಬಿ ಅವರ ಬದಲಿಗೆ ಇನ್ನೊಬ್ಬ ವೇಗದ ಬೌಲರ್‌ ಆಲ್‌ರೌಂಡರ್‌ ಹುಡುಕಾಟ ನಡೆಸಲಿದೆ.

ವನಿಂದು ಹಸರಂಗ

ಈಗಾಗಲೇ ಆರ್‌ಸಿಬಿ ಪರ ಆಡಿರುವ ಆಟಗಾರರ ಶ್ರೀಲಂಕಾದ ವನಿಂದು ಹಸರಂಗ ಅವರನ್ನು ಆರ್‌ಸಿಬಿ ಹರಾಜಿನಲ್ಲಿ ಬಾಜಿ ಕಟ್ಟಲಿದೆ. ಇವರು ತಂಡಕ್ಕೆ ಆಗಮಿಸಿದರೆ ತಂಡದ ಸ್ಪಿನ್ ಬೌಲಿಂಗ್ ವಿಭಾಗ ಬಲಾಢ್ಯವಾಗುತ್ತದೆ. ಇವರು ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಹಸರಂಗ ಆಡಿದ 14 ಪಂದ್ಯಗಳಲ್ಲಿ 8 ವಿಕೆಟ್‌ ಪಡೆದಿದ್ದರು. ಹೀಗಾಗಿ ರಾಜಸ್ಥಾನ ಇವರನ್ನು ಕೈ ಬಿಟ್ಟಿತ್ತು. ಇವರನ್ನು ತಂಡಕ್ಕೆ ಸೇರಿಸಿಕೊಂಡಲ್ಲಿ ಆರ್‌ಸಿಬಿ ಕಪ್‌ ಡಿಫೆಂಡ್ ಮಾಡಿಕೊಳ್ಳುವ ಆಸೆಗೆ ಪುಷ್ಠಿ ಬರುತ್ತದೆ.

ಮುಷ್ತಾಫಿಜುರ್ ರಹಮಾನ್‌

ಆರ್‌ಸಿಬಿ ಹರಾಜಿನಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ಮುಷ್ತಾಫಿಜುರ್ ರಹಮಾನ್‌ ಅವರಿಗೂ ಹಣವನ್ನು ಹೂಡಬಹುದು. ಇವರು ಬೌಲಿಂಗ್‌ನಲ್ಲಿ ವಿವಿಧತೆಯನ್ನು ತರುತ್ತಾರೆ. ಅಲ್ಲದೆ ಇವರು ಎಸೆಯುವ ಸ್ಲೋವರ್ ಒನ್, ಕಟರ್‌ ಎಸೆತಗಳಿಗೆ ಉತ್ತರ ನೀಡಲು ಬ್ಯಾಟರ್‌ಗಳು ಹೈರಾಣಾಗುತ್ತಾರೆ. ಹೀಗಾಗಿ ಇವರಿಗೂ ಆರ್‌ಸಿಬಿ ಟಾರ್ಗೆಟ್‌ ಮಾಡಬಹುದು.

ರವಿ ಬಿಷ್ಣೋಯಿ

ಆರ್‌ಸಿಬಿ ಹರಾಜಿನಲ್ಲಿ ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ಹಣವನ್ನು ಹೂಡಲಿದೆ. ಈ ವೇಳೆ ಟೀಮ್ ಇಂಡಿಯಾದ ಯುವ ಸ್ಪಿನ್ ಬೌಲರ್ ರವಿ ಬಿಷ್ಣೋಯಿ ಸೇರಿದ್ದಾರೆ. ಇವರು ತಮ್ಮ ಪಿರ್ಕಿಯಿಂದ ಎದುರಾಳಿಗಳಿಗೆ ಕಾಟ ನೀಡುವ ಆಟಗಾರ. ಇವರು ಕಳೆದ ಬಾರಿಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದರು. ಈ ಬಾರಿ ಎಲ್‌ಎಸ್‌ಜಿ ಇವರನ್ನು ರಿಲೀಸ್ ಮಾಡಿದ್ದು ಆರ್‌ಸಿಬಿ ಇವರಿಗೆ ಹಣದ ಹೊಳೆಯನ್ನು ಹರಿಸಬಹುದಾಗಿದೆ.

Story first published: Thursday, December 4, 2025, 10:17 [IST]
Other articles published on Dec 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+