ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ತಂಡಗಳು: ಪಂದ್ಯಗಳ ಸಂಖ್ಯೆಯಲ್ಲಿ ಮುಂಬೈ ನಂ.1, ಆರ್‌ಸಿಬಿ ನಂ.2
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಿ 19 ವರ್ಷಗಳೇ ಕಳೆದಿವೆ. ಈ ಲೀಗ್ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಖ್ಯಾತಿ ಪಡೆದಿದೆ. ಈ ಲೀಗ್‌ನಲ್ಲಿ ಆಡಲು ದೇಶ ಹಾಗೂ ವಿದೇಶದ ಆಟಗಾರರು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಹಲವು ಯುವ ಆಟಗಾರರಿಗೆ ಈ ಲೀಗ್ ತಮ್ಮ ಪ್ರದರ್ಶನವನ್ನು ವಿಶ್ವಕ್ಕೆ ತೋರಿಸಲು ದೊಡ್ಡ ವೇದಿಕೆ ಆಗಿದೆ. ರಾತ್ರೋ ರಾತ್ರಿ ಈ ಲೀಗ್‌ನಲ್ಲಿ ಆಡಿದ ಆಟಗಾರರು ಸ್ಟಾರ್ ಗಿರಿ ಪಡೆಯುತ್ತಾರೆ. ಈ ಶ್ರೀಮಂತ ಲೀಗ್ ಈಗ ಮತ್ತೊಂದು ಆವೃತ್ತಿಯ ಚಾಂಪಿಯನ್ ತಂಡದ ಹುಡುಕಾಟದಲ್ಲಿದೆ. ಈ ವೇಳೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಐಪಿಎಲ್ ಆರಂಭವಾದಾಗಿನಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ (ಮೊದಲು ಡೆಲ್ಲಿ ಡೇರ್‌ಡೆವಿಲ್ಸ್) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (ಮೊದಲು ಡೆಕ್ಕನ್ ಚಾರ್ಜಸ್) ತಂಡಗಳು ಕಣಕ್ಕೆ ಇಳಿದಿವೆ. ಆರಂಭದಲ್ಲಿ ಕೇವಲ 8 ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆ ಆಗಿದ್ದ ಈ ಲೀಗ್ ಕ್ರಮೇಣ 10 ತಂಡಗಳು ಸೇರಿಕೊಂಡಿವೆ.

ಮುಂಬೈಗೆ ಅಗ್ರಸ್ಥಾನ
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಲ್ಲುತ್ತದೆ. ಮುಂಬೈ ಈ ವರೆಗೆ ಐಪಿಎಲ್‌ನಲ್ಲಿ 288 ಪಂದ್ಯಗಳನ್ನು ಆಡಿದೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಆರ್‌ಸಿಬಿ ತಂಡದ್ದಾಗಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಲೀಗ್‌ನಲ್ಲಿ ಒಟ್ಟು 282 ಪಂದ್ಯಗಳನ್ನು ಆಡಿದೆ. ಮೂರನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಇದ್ದು 278 ಪಂದ್ಯಗಳನ್ನು ಆಡಿದೆ.
ಇನ್ನು ಮೊದಲ ಪ್ರಶಸ್ತಿಯ ಹುಡುಕಾಟದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕನೇ ಸ್ಥಾನದಲ್ಲಿದ್ದು, ಡೆಲ್ಲಿ 276 ಪಂದ್ಯಗಳನ್ನು ಆಡಿದೆ. ಐದನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ (274) ಇದೆ. ಇನ್ನು ಆರನೇ ಸ್ಥಾನದಲ್ಲಿ ಐದು ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ತಂಡಗಳ ಮಾಹಿತಿ
ಮುಂಬೈ ಇಂಡಿಯನ್ಸ್, 288
ರಾಯಲ್ ಚಾಲೆಂಜರ್ಸ್ ಬೆಂಗಳೂರು, 282
ಕೋಲ್ಕತ್ತಾ ನೈಟ್ ರೈಡರ್ಸ್, 278
ಡೆಲ್ಲಿ ಕ್ಯಾಪಿಟಲ್ಸ್, 276
ಪಂಜಾಬ್ ಕಿಂಗ್ಸ್, 274
ಚೆನ್ನೈ ಸೂಪರ್ ಕಿಂಗ್ಸ್, 264
ರಾಜಸ್ಥಾನ್ ರಾಯಲ್ಸ್, 247
ಸನ್ ರೈಸರ್ಸ್ ಹೈದರಾಬಾದ್, 208
ಗುಜರಾತ್ ಟೈಟಾನ್ಸ್, 72
ಲಕ್ನೋ ಸೂಪರ್ ಜೈಂಟ್ಸ್, 69
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications