ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ

IPL: Most Runouts in Indian Premier League history

ಚೆನ್ನೈ: ಟೀಮ್ ಇಂಡಿಯಾದ ಆಲ್ ರೌಂಡರ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಲ್ ರೌಂಡರ್ ರವೀಂದ್ರ ಜಡೇಜಾ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ವಿರುದ್ಧ ಜಡೇಜಾ ಈ ಸಾಧನೆ ಮಾಡಿದ್ದಾರೆ.

ಮೋರಿಸ್‌ಗೆ ಸಿಂಗಲ್ ನಿರಾಕರಣೆ ಸಮರ್ಥಿಸಿದ ಸ್ಯಾಮ್ಸನ್: ಇಲ್ಲಿದೆ ಅಸಲಿ ಕಾರಣ!ಮೋರಿಸ್‌ಗೆ ಸಿಂಗಲ್ ನಿರಾಕರಣೆ ಸಮರ್ಥಿಸಿದ ಸ್ಯಾಮ್ಸನ್: ಇಲ್ಲಿದೆ ಅಸಲಿ ಕಾರಣ!

ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಕಾದಾಡಿದ್ದವು. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಪಂಜಾಬ್‌ ಕಿಂಗ್ಸ್‌ ಕಡಿಮೆ ರನ್‌ಗೆ (106) ಇನ್ನಿಂಗ್ಸ್‌ ಮುಗಿಸಿತ್ತು.

ಈ ವೇಳೆ ಜಡೇಜಾ, ಪಂಜಾಬ್‌ ನಾಯಕ ಕೆಎಲ್ ರಾಹುಲ್ ಅವರನ್ನು ರನ್ ಔಟ್‌ ಮೂಲಕ ಔಟ್ ಮಾಡಿದರು. 2.5ನೇ ಓವರ್‌ನಲ್ಲಿ ರಾಹುಲ್ ಚಾಹಲ್ ಎಸೆತಕ್ಕೆ ಕ್ರಿಸ್ ಗೇಲ್ ಬ್ಯಾಟ್ ಬೀಸಿ ಸಿಂಗಲ್‌ಗೆ ಮುಂದಾದರು. ಈ ವೇಳೆ ರವೀಂದ್ರ ಜಡೇಜಾ ಡೈರೆಕ್ಟ್ ಹಿಟ್‌ ಮೂಲಕ ರಾಹುಲ್ ಅವರನ್ನು ರನ್‌ಔಟ್ ಮಾಡಿದರು.

ಎಂಎಸ್ ಧೋನಿಗೆ ಶೇನ್ ವಾಟ್ಸನ್ ಕಡೆಯಿಂದ ವಿಶೇಷ ಸಂದೇಶಎಂಎಸ್ ಧೋನಿಗೆ ಶೇನ್ ವಾಟ್ಸನ್ ಕಡೆಯಿಂದ ವಿಶೇಷ ಸಂದೇಶ

ಇದರೊಂದಿಗೆ ಜಡೇಜಾ ಐಪಿಎಲ್‌ನಲ್ಲಿ ಹೆಚ್ಚು ಬಾರಿ ಎದುರಾಳಿ ತಂಡದ ಆಟಗಾರರನ್ನು ರನ್‌ ಔಟ್ ಮಾಡಿದ ದಾಖಲೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಜಡೇಜಾ ಒಟ್ಟಾರೆ 22 ಸಾರಿ ಹೀಗೆ ರನ್‌ ಔಟ್ ಮಾಡಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಎದುರಾಳಿ ಆಟಗಾರನನ್ನು ಅತೀ ಹೆಚ್ಚುಬಾರಿ ರನ್‌ ಔಟ್ ಮಾಡಿರುವ ಆಟಗಾರರು
* ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ, 22* ಬಾರಿ ರನ್‌ಔಟ್
* ವಿರಾಟ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, 17 ಬಾರಿ ರನ್‌ಔಟ್
* ಸುರೇಶ್ ರೈನಾ, ಚೆನ್ನೈ ಸೂಪರ್ ಕಿಂಗ್ಸ, 15 ಬಾರಿ ರನ್‌ಔಟ್

Story first published: Saturday, April 17, 2021, 8:26 [IST]
Other articles published on Apr 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X