Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಪುಣೆ ತಂಡದ ನಾಯಕತ್ವದಿಂದ ಧೋನಿ ಔಟ್!

ಪುಣೆ, ಫೆಬ್ರವರಿ 19: ಇಂಡಿಯನ್ ಪ್ರೀಮಿಯರ್ ಲೀಗ್ ನ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ತೆಗೆದು ಹಾಕಲಾಗಿದೆ. ಅವರ ಸ್ಥಾನಕ್ಕೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ರನ್ನು ನೇಮಿಸಲಾಗಿದೆ.

ಕಳೆದ ಬಾರಿ ಐಪಿಎಲ್ ನಲ್ಲಿ ಆಡಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಧೋನಿ ನಾಯಕರಾಗಿದ್ದರು. ಆದರೆ, ಅತ್ಯಂತ ಕಳಪೆ ಪ್ರದರ್ಶನ ನೀಡಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

MS Dhoni removed as Rising Pune Supergiants captain, Steve Smith to replace him

ಧೋನಿ ಅವರು ಈ ಮುಂಚೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದರು. ಆದರೆ, ಐಪಿಎಲ್ 9ರಲ್ಲಿ ಧೋನಿ ನಾಯಕತ್ವದ ಪುಣೆ ತಂಡ 14 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಜತೆಗೆ ಆಟಗಾರನಾಗಿ ಕೂಡಾ ಒಂದು ಅರ್ಧಶತಕದೊಂದಿಗೆ 12 ಇನ್ನಿಂಗ್ಸ್ ಗಳಲ್ಲಿ 284 ರನ್ ಮಾತ್ರ ಗಳಿಸಿದ್ದರು.

35 ವರ್ಷ ವಯಸ್ಸಿನ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಎರಡು ಬಾರಿ ಕಪ್ ಎತ್ತಿದ್ದರು. 2010 ಹಾಗೂ 2011ರಲ್ಲಿ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ 2010 ಹಾಗೂ 2014ರಲ್ಲಿ ಗೆದ್ದುಕೊಂಡಿತ್ತು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+