Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL ಆರೆಂಜ್‌ ಕ್ಯಾಪ್‌, ಪರ್ಪಲ್‌ ಕ್ಯಾಪ್‌ ಯಾರ ಬಳಿ ಇದೆ?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಆರಂಭವಾಗಿದೆ. ಈ ಲೀಗ್‌ನಲ್ಲಿ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ ಆಟಗಾರರು ಟ್ರೋಫಿಯಷ್ಟೇ ಮಹತ್ವದ ಆ ಎರಡು ಪ್ರಶಸ್ತಿಗೆ ನೀಡುತ್ತಾರೆ. ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಹಾಗೂ ಪರ್ಪಲ್‌ ಕ್ಯಾಪ್‌ಗಳನ್ನು ನೀಡಲಾಗುತ್ತದೆ. ಗರಿಷ್ಠ ರನ್‌ ಸಾಧಕರಿಗೆ ಆರೆಂಜ್ ಕ್ಯಾಪ್‌ ನೀಡಲಾಗುತ್ತದೆ. ಇನ್ನು ಪರ್ಪಲ್‌ ಕ್ಯಾಪ್‌ನ್ನು ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳಿಗೆ ನೀಡಲಾಗುತ್ತದೆ. ಈ ಬಾರಿಯೂ ಈ ಕ್ಯಾಪ್‌ಗಳನ್ನು ಪಡೆಯಲು ಆಟಗಾರರ ಶ್ರಮಿಸುತ್ತಿದ್ದಾರೆ.

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಅನುಭವಿ ಹಾಗೂ ಯುವ ಆಟಗಾರರು ಕಂಡು ಕೊಳ್ಳುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಮೀರ್ ರಿಜ್ವಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು ಆಡಿದ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಸಮೀರ್‌ ಆಡಿದ 2 ಪಂದ್ಯಗಳಲ್ಲಿ 160 ರನ್‌ ಬಾರಿಸಿ ಸದ್ಯ ಆರೆಂಜ್ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ.

IPL

ಇದೇ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರು ಸಹ ಕಾಣಿಸಿಕೊಳ್ಳುತ್ತಾರೆ. ಇವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ಆಡಿದ 3 ಪಂದ್ಯಗಳಲ್ಲಿ 145 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 2 ಪಂದ್ಯಗಳಲ್ಲಿ 113 ರನ್‌ ಸಿಡಿಸಿದ್ದಾರೆ. ಇದರಲ್ಲಿ 1 ಅರ್ಧಶತಕ ಸೇರಿದೆ.

ದೇವದತ್ ಪಡಿಕ್ಕಲ್‌ ಅಬ್ಬರ

ಆರ್‌ಸಿಬಿ ತಂಡದ ಭರವಸೆಯ ಬ್ಯಾಟರ್‌ ದೇವದತ್ ಪಡಿಕ್ಕಲ್ ಸಹ ಆರೆಂಜ್‌ ಕ್ಯಾಪ್ ರೇಸ್‌ನಲ್ಲಿದ್ದಾರೆ. ಇವರು ಆಡಿದ 2 ಪಂದ್ಯಗಳಲ್ಲಿ 111 ರನ್‌ ಸಿಡಿಸಿದ್ದಾರೆ. ಪಂಜಾಬ್ ಕಿಂಗ್ಸ್‌ ತಂಡದ ಕೂಪರ್ ಕಾನೋಲಿ 108 ರನ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿರುವುದು ಯಾರು?

ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿ ಯುವ ಬೌಲರ್‌ಗಳು ಮುಂಚೂಣಿಯಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್‌ ತಂಡದ ರವಿ ಬಿಷ್ಣೋಯಿ ಸದ್ಯ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿದ 2 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ 5 ವಿಕೆಟ್‌ ಪಡೆದ ಬೌಲರ್‌ಗಳು ಹೆಚ್ಚಿದ್ದಾರೆ. ಆದರೆ ರವಿ ಬಿಷ್ಣೋಯಿ ಎಕಾನಮಿ ಬೇರೆ ಬೌಲರ್‌ಗಳಿಗಿಂತ ಚೆನ್ನಾಗಿದೆ. ಹೀಗಾಗಿ ಇವರು ಮೊದಲ ಸ್ಥಾನದಲ್ಲಿದ್ದಾರೆ.

ಪರ್ಪಲ್‌ ಕ್ಯಾಪ್ ರೇಸ್‌ನಲ್ಲಿರುವ ಟಾಪ್ 5 ಬೌಲರ್ಸ್‌

ರವಿ ಬಿಷ್ಣೋಯಿ, ರಾಜಸ್ಥಾನ್ ರಾಯಲ್ಸ್‌, 2 ಪಂದ್ಯ, 5 ವಿಕೆಟ್‌
ವಿಜಯ್‌ಕುಮಾರ್‌ ವೈಶಾಖ್‌, ಪಂಜಾಬ್‌ ಕಿಂಗ್ಸ್‌, 2 ಪಂದ್ಯ, 5 ವಿಕೆಟ್‌
ಜೇಕಬ್ ಡಫಿ, ಆರ್‌ಸಿಬಿ, 2 ಪಂದ್ಯ, 5 ವಿಕೆಟ್‌
ಅಂಶುಲ್‌ ಕಂಬೋಜ್‌, ಸಿಎಸ್‌ಕೆ, 2 ಪಂದ್ಯ, 5 ವಿಕೆಟ್‌
ಟಿ.ನಟರಾಜನ್‌, ಡೆಲ್ಲಿ ಕ್ಯಾಪಿಟಲ್ಸ್‌, 2 ಪಂದ್ಯ, 4 ವಿಕೆಟ್‌

Story first published: Monday, April 6, 2026, 14:30 [IST]
Other articles published on Apr 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+