IPL Orange Cap ಪಡೆಯಲು ಜಿದ್ದು: 24 ಗಂಟೆಗಳಲ್ಲಿ ರನ್‌ಗಳಿಕೆಯಲ್ಲಿ ಅಗ್ರಸ್ಥಾನಕ್ಕೇರಿದ ಮೂವರು ಸ್ಟಾರ್ಸ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ಹೆಚ್ಚಿದೆ. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ನೀಡಲಾಗುವ ಆರೆಂಜ್ ಕ್ಯಾಪ್ ಪಡೆಯಲು ಬಿರುಸಿನ ಕಾಳಗ ನಡೆಯುತ್ತಿದೆ. ಯುವ ಆಟಗಾರರು ಹಾಗೂ ಅನುಭವಿ ಆಟಗಾರರು ಈ ಗೌರವವನ್ನು ತಮ್ಮದಾಗಿಸಿಕೊಳ್ಳಲು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಶನಿವಾರ ಆರೆಂಜ್ ಕ್ಯಾಪ್ ಒಂದೇ ದಿನ ಮೂವರು ಆಟಗಾರರ ಮುಡಿಗೆ ಅಲಂಕರಿಸಿತು. ಕೊನೆಯಲ್ಲಿ ಯಾರ ಬಳಿ ಈಗ ಆರೆಂಜ್ ಕ್ಯಾಪ್ ಇದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಶನಿವಾರ ಐಪಿಎಲ್‌ನಲ್ಲಿ ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಕೆಎಲ್ ರಾಹುಲ್ ಅಮೋಘ ಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಪರಿಣಾಮ ಆರೆಂಜ್ ಕ್ಯಾಪ್ ಒಡೆಯರಾದರು. ಕೆಎಲ್ ರಾಹುಲ್ ಈ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 59ರ ಸರಾಸರಿಯಲ್ಲಿ 357 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ.

ಶನಿವಾರ ಸಂಜೆ ಇನ್ನೊಂದು ಪಂದ್ಯ ನಡೆಯಿತು. ಆ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಟಾಸ್ ಸೋತ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿತು. 15 ವರ್ಷದ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದರು. ಪರಿಣಾಮ ಕೆಎಲ್ ರಾಹುಲ್ ತಲೆಯ ಮೇಲಿನಿಂದ ಆರೆಂಜ್ ಕ್ಯಾಪ್ ತಮ್ಮ ತಲೆಗೆ ಪಡೆದರು. ಇವರು ಈ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 234ರ ಸ್ಟ್ರೈಕ್ ರೇಟ್‌ನಲ್ಲಿ 357 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 2 ಅರ್ಧಶತಕಗಳು ಸೇರಿವೆ.
ಇದೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಬ್ಯಾಟಿಂಗ್ ಮಾಡಿದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಸಹ ಭರ್ಜರಿ ಪ್ರದರ್ಶನ ನೀಡಿದರು. ಇವರು ಆರ್‌ಆರ್ ವಿರುದ್ಧ 57 ರನ್ ಇನಿಂಗ್ಸ್ ಕಟ್ಟಿದರು. ಪರಿಣಾಮ ಆರೆಂಜ್ ಕ್ಯಾಪ್ ಒಡೆಯರಾದರು. ಅಭಿಷೇಕ್ ಆಡಿದ 8 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 380 ರನ್ ಕಲೆ ಹಾಕಿದ್ದಾರೆ. ಈ ವೇಳೆ 3 ಅರ್ಧಶತಕ ಹಾಗೂ 1 ಶತಕವನ್ನು ಬಾರಿಸಿದ್ದಾರೆ.
ಆರೆಂಜ್ ಕ್ಯಾಪ್ ಮೇಲೆ ಕಣ್ಣಿಟ್ಟ ಟಾಪ್ 10 ಬ್ಯಾಟರ್ಸ್
- ಅಭಿಷೇಕ್ ಶರ್ಮಾ, ಎಸ್‌ಆರ್‌ಎಚ್, 8 ಪಂದ್ಯ, 380 ರನ್
- ವೈಭವ್ ಸೂರ್ಯವಂಶಿ, ಆರ್‌ಆರ್, 8 ಪಂದ್ಯ, 357 ರನ್
- ಕೆ.ಎಲ್. ರಾಹುಲ್, ಡಿಸಿ, 7 ಪಂದ್ಯ, 357 ರನ್
- ಹೆನ್ರಿಚ್ ಕ್ಲಾಸೆನ್, ಎಸ್‌ಆರ್‌ಎಚ್, 8 ಪಂದ್ಯ, 349 ರನ್
- ವಿರಾಟ್ ಕೊಹ್ಲಿ, ಆರ್‌ಸಿಬಿ, 7 ಪಂದ್ಯ, 328 ರನ್
- ಇಶಾನ್ ಕಿಶನ್, ಎಸ್‌ಆರ್‌ಎಚ್, 8 ಪಂದ್ಯ, 312 ರನ್
- ಶುಭ್‌ಮನ್ ಗಿಲ್, ಜಿಟಿ, 6 ಪಂದ್ಯ, 297 ರನ್
- ಸಂಜು ಸ್ಯಾಮ್ಸನ್, ಸಿಎಸ್‌ಕೆ, 7 ಪಂದ್ಯ, 293 ರನ್
- ಪ್ರಭ್‌ಸಿಮ್ರಾನ್ ಸಿಂಗ್, ಪಿಬಿಕೆಎಸ್, 7 ಪಂದ್ಯ, 287 ರನ್
- ಶ್ರೇಯಸ್ ಅಯ್ಯರ್, ಪಿಬಿಕೆಎಸ್, 7 ಪಂದ್ಯ, 279 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications