IPL Orange Cap: ಸಂಜು ಸ್ಯಾಮ್ಸನ್ ಭರ್ಜರಿ ಎಂಟ್ರಿ, ಕನ್ನಡಿಗ ಮುಡಿಗೆ ಆರೆಂಜ್ ಕ್ಯಾಪ್: ಇಲ್ಲಿದೆ ಟಾಪ್ 10 ರನ್ ಸಾಧಕರ ಪಟ್ಟಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ರೋಚಕತೆ ಹೆಚ್ಚಿಸಿವೆ. ಈ ವೇಳೆ ತಂಡಗಳು ಪ್ಲೇ ಆಫ್ ಲೆಕ್ಕಾಚಾರವನ್ನು ಆರಂಭಿಸಿವೆ. ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡಗಳು ಸೋಲು ಕಂಡು ನಿರಾಸೆ ಅನುಭವಿಸುತ್ತಿವೆ. ಇದೇ ವೇಳೆ ಭರವಸೆಯ ಹಾಗೂ ಅನುಭವಿ ಆಟಗಾರರು ಅಬ್ಬರದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ವೈಯಕ್ತಿಕ ಸಾಧನೆಯನ್ನು ಸಹ ಮಾಡುತ್ತಿದ್ದಾರೆ. ಈ ಬಾರಿಯ ಲೀಗ್‌ನಲ್ಲಿ ಆರೆಂಜ್ ಕ್ಯಾಪ್ ರೇಸ್‌ಗೆ ಭರ್ಜರಿ ಜಿದ್ದು ಕಂಡು ಬಂದಿದೆ. ಈ ರೇಸ್‌ಗೆ ಮಂಗಳವಾರ ಸಂಜು ಸ್ಯಾಮ್ಸನ್ ಭರ್ಜರಿ ಎಂಟ್ರಿ ನೀಡಿದ್ದಾರೆ.
ಮಂಗಳವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಡೆಲ್ಲಿ ನೀಡಿದ್ದ 156 ರನ್‌ಗಳ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಸಮರ್ಥವಾಗಿ ಮೆಟ್ಟಿನಿಲ್ಲುವಲ್ಲಿ ನೆರವಾದರು. ಮಹತ್ವದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಸಂಜು ಆತಿಥೇಯ ತಂಡದ ಬೌಲರ್‌ಗಳನ್ನು ಕಾಡಿದರು. ಇವರು ಆಡಿದ 52 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 87 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಈ ಸೊಗಸಾದ ಇನಿಂಗ್ಸ್ ಮೂಲಕ ಈಗ ಸಂಜು ಆರೆಂಜ್ ಕ್ಯಾಪ್ ರೇಸ್‌ಗೆ ಭರ್ಜರಿ ಎಂಟ್ರಿ ನೀಡಿದ್ದಾರೆ.

ಸಂಜು ಸ್ಯಾಮ್ಸನ್ ಈ ಅಮೋಘ ಇನಿಂಗ್ಸ್ ಮೂಲಕ ಟಾಪ್ 5 ರನ್ ಸಾಧಕರ ಪಟ್ಟಿಯಲ್ಲಿ ನೇರವಾಗಿ ಎಂಟ್ರಿ ಪಡೆದಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 402 ರನ್ ಕಲೆ ಹಾಕಿದ್ದಾರೆ. ಈ ವೇಳೆ 2 ಶತಕ ಹಾಗೂ 1 ಅರ್ಧಶತಕಗಳು ಸೇರಿವೆ. ಸಂಜು ಅವರ ಇನಿಂಗ್ಸ್‌ನಲ್ಲಿ 42 ಬೌಂಡರಿ, 21 ಸಿಕ್ಸರ್‌ಗಳು ಸೇರಿವೆ.
ರಾಹುಲ್ ಮುಡಿಗೆ ಆರೆಂಜ್ ಕ್ಯಾಪ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 180ರ ಸ್ಟ್ರೈಕ್ ರೇಟ್‌ನಲ್ಲಿ 445 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ.
ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅನುಭವಿ ಹಾಗೂ ಯುವ ಆಟಗಾರರ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಸ್ಥಾನ ಪಡೆದಿದ್ದಾರೆ. ಇವರು ಆಡಿದ 9 ಪಂದ್ಯಗಳಲ್ಲಿ 379 ರನ್ ಕಲೆ ಹಾಕಿದ್ದಾರೆ.
19ನೇ ಆವೃತ್ತಿಯ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟರ್ಸ್
- ಕೆ.ಎಲ್. ರಾಹುಲ್ (ಡಿಸಿ), 10 ಪಂದ್ಯ, 445 ರನ್
- ಅಭಿಷೇಕ್ ಶರ್ಮಾ (ಎಸ್‌ಆರ್‌ಎಚ್), 10 ಪಂದ್ಯ, 440 ರನ್
- ಹೆನ್ರಿಕ್ ಕ್ಲಾಸನ್ (ಎಸ್‌ಆರ್‌ಎಚ್), 10 ಪಂದ್ಯ, 425 ರನ್
- ವೈಭವ್ ಸೂರ್ಯವಂಶಿ (ಆರ್‌ಆರ್), 10 ಪಂದ್ಯ, 404 ರನ್
- ಸಂಜು ಸ್ಯಾಮ್ಸನ್ (ಸಿಎಸ್‌ಕೆ), 10 ಪಂದ್ಯ, 402 ರನ್
- ಸಾಯಿ ಸುದರ್ಶನ್ (ಜಿಟಿ), 10 ಪಂದ್ಯ, 385 ರನ್
- ರಯಾನ್ ರಿಕಲ್ಟನ್ (ಎಂಐ), 8 ಪಂದ್ಯ, 380 ರನ್
- ವಿರಾಟ್ ಕೊಹ್ಲಿ (ಆರ್‌ಸಿಬಿ), 9 ಪಂದ್ಯ, 379 ರನ್
- ಶುಭ್‌ಮನ್ ಗಿಲ್ (ಜಿಟಿ), 9 ಪಂದ್ಯ, 378 ರನ್
- ಪ್ರಭ್‌ಸಿಮ್ರಾನ್ ಸಿಂಗ್ (ಪಿಬಿಕೆಎಸ್), 9 ಪಂದ್ಯ, 361 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications