Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Orange Cap: ಆರೆಂಜ್‌ ಕ್ಯಾಪ್‌ಗಾಗಿ ವಿರಾಟ್‌ ಕೊಹ್ಲಿ, ಕೆಎಲ್ ರಾಹುಲ್ ಫೈಟ್‌

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) 19ನೇ ಆವೃತ್ತಿಯ 39ನೇ ಪಂದ್ಯದಲ್ಲಿ ಎರಡನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಕನ್ನಡಿಗ ಕೆಎಲ್ ರಾಹುಲ್ ಹಾಗೂ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಈ ಇಬ್ಬರೂ ಆಟಗಾರರು ಇಂದಿನ ಪಂದ್ಯದಲ್ಲಿ ಆರೆಂಜ್ ಕ್ಯಾಪ್‌ಗಾಗಿ ಫೈಟ್ ನಡೆಸಲಿದ್ದಾರೆ.

ಈ ಲೀಗ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಇದೇ ಫಾರ್ಮ್‌ ಮುಂದುವರಿಸುವ ಇರಾದೆಯನ್ನು ಹೊಂದಿದ್ದಾರೆ. ವಿರಾಟ್‌ ಕೊಹ್ಲಿ ತಮ್ಮ ತವರು ಮೈದಾನದಲ್ಲಿ ಆಡಲಿದ್ದು ಬಿಗ್ ಇನಿಂಗ್ಸ್ ಕಟ್ಟುವ ಇರಾದೆಯನ್ನು ಹೊಂದಿದ್ದಾರೆ. ಇವರು ಮತ್ತೊಮ್ಮೆ ತಮ್ಮ ಮುಡಿಗೆ ಆರೆಂಜ್ ಕ್ಯಾಪ್‌ ಪಡೆಯುವ ಕನಸು ಕಾಣುತ್ತಿದ್ದಾರೆ.

IPL Orange Cap

ರಾಯಲ್‌ ಚಾಲೆಂಜರ್ಸ್‌ ತಂಡದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಈ ಲೀಗ್‌ನಲ್ಲಿ ಆಡಿದ 7 ಪಂದ್ಯಗಳಲ್ಲಿ 163ರ ಸ್ಟ್ರೈಕ್‌ ರೇಟ್‌ನಲ್ಲಿ 328 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 36 ಬೌಂಡರಿ, 12 ಸಿಕ್ಸರ್ ಸಿಡಿಸಿದ್ದಾರೆ. ತವರು ಮೈದಾನದಲ್ಲಿ ವಿರಾಟ್‌ ಬ್ಯಾಟ್ ಮಾಡಲಿದ್ದು, ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಆರೆಂಜ್‌ ಕ್ಯಾಪ್‌ಗಾಗಿ ಫೈಟ್‌

ಕೆಎಲ್ ರಾಹುಲ್‌ ಅವರು ಸಹ ಈ ಬಾರಿ ಭರ್ಜರಿ ಲಯದಲ್ಲಿದ್ದಾರೆ. ಇವರು ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದರು. ಇದೇ ಲಯವನ್ನು ಮುಂದುವರೆಸುವ ಕನಸು ಕನ್ನಡಿಗ ರಾಹುಲ್ ಅವರದ್ದಾಗಿದೆ. ಇವರು ಆಡಿದ 7 ಪಂದ್ಯಗಳಲ್ಲಿ 59ರ ಸರಾಸರಿಯಲ್ಲಿ 357 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 36 ಬೌಂಡರಿ, 19 ಸಿಕ್ಸರ್ ಸೇರಿವೆ.

IPL Orange Cap

ಈ ಇಬ್ಬರೂ ಸ್ಟಾರ್ ಆಟಗಾರರು ಆರೆಂಜ್‌ ಕ್ಯಾಪ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಸದ್ಯ ಆರೆಂಜ್ ಕ್ಯಾಪ್ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಅಭಿಷೇಕ್‌ ಶರ್ಮಾ ಅವರ ಬಳಿ ಇದೆ. ಇವರು ಆಡಿದ 8 ಪಂದ್ಯಗಳಲ್ಲಿ 54ರ ಸರಾಸರಿ, 212 ಸ್ಟ್ರೈಕ್‌ ರೇಟ್‌ನಲ್ಲಿ 380 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 3 ಅರ್ಧಶತಕ ಸಿಡಿಸಿದ್ದಾರೆ. ಅಭಿಷೇಕ್ ಶರ್ಮಾ ಅವರಿಂದ ಆರೆಂಜ್‌ ಕ್ಯಾಪ್‌ ಕಸಿದುಕೊಳ್ಳಲು ಕೆಎಲ್ ರಾಹುಲ್‌ ಅವರಿಗೆ ಇನ್ನು 24 ರನ್‌ ಅವಶ್ಯಕತೆ ಇದೆ. ಇನ್ನು ವಿರಾಟ್‌ ಕೊಹ್ಲಿಗೆ ಇದೇ ಸಾಧನೆ ಮಾಡಲು 53 ರನ್‌ ಬೇಕಿದೆ. ಸೋಮವಾರ ಆರೆಂಜ್‌ ಕ್ಯಾಪ್‌ ಯಾರ ಮುಡಿಗೆ ಏರಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Monday, April 27, 2026, 11:25 [IST]
Other articles published on Apr 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+