IPL Orange Cap: ಮೂರು ಬ್ಯಾಟರ್‌ಗಳಿಂದ 700ಕ್ಕೂ ಹೆಚ್ಚು ರನ್, ಅಗ್ರಸ್ಥಾನದಲ್ಲಿ ವೈಭವ್ ಸೂರ್ಯವಂಶಿ
ಪ್ರಸಕ್ತ ಸಾಲಿನ ಐಪಿಎಲ್ನ ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದೇ ವೇಳೆ ಈ ಸಾಲಿನ ಆರೆಂಜ್ ಕ್ಯಾಪ್‌ಗಾಗಿ ಜಿದ್ದಾಜಿದ್ದು ಕಂಡು ಬಂದಿದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಅಗ್ರ ಮೂವರು ಬ್ಯಾಟರ್‌ಗಳು 700ಕ್ಕೂ ಹೆಚ್ಚು ರನ್ ಬಾರಿಸುವುದು ನಿಜಕ್ಕೂ ರೋಚಕತೆ ಹುಟ್ಟಿಸಿದೆ.
ಪ್ರತಿ ಬಾರಿಯ ಐಪಿಎಲ್‌ನಲ್ಲಿ ಗರಿಷ್ಠ ರನ್ ಸಾಧಕರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ಈ ಬಾರಿ ಯುವ ಹಾಗೂ ಅನುಭವಿ ಆಟಗಾರರ ಎದ್ದು ಕಾಣುತ್ತಾರೆ. ಫೈನಲ್‌ಗೂ ಮುನ್ನ ಈ ಕ್ಯಾಪ್ ಸದ್ಯ ವೈಭವ್ ಸೂರ್ಯವಂಶಿ ಬಳಿ ಇದೆ.

ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಗುಜರಾತ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಾಯದಿಂದ 96 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇವರ ಈ ಇನಿಂಗ್ಸ್‌ನ ಸಹಾಯದಿಂದ ಇವರ ಮುಡಿಗೆ ಆರೆಂಜ್ ಕ್ಯಾಪ್ ಸಂದಿದೆ.
ವೈಭವ್‌ಗೆ ಆರೆಂಜ್ ಕ್ಯಾಪ್
ಈ ಲೀಗ್‌ನಲ್ಲಿ 16 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 776 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 237 ಆಗಿತ್ತು. ವೈಭವ್ 1 ಶತಕ ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಆವೃತ್ತಿಯಲ್ಲಿ ವೈಭವ್ 63 ಬೌಂಡರಿ, 72 ಸಿಕ್ಸರ್ ಬಾರಿಸಿದ್ದಾರೆ.
ಶುಭಮನ್ ಗಿಲ್
ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ಸಹ ಈ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 15 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 722 ರನ್ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ, 6 ಅರ್ಧಶತಕ ಸಿಡಿಸಿದ್ದಾರೆ.
ಸಾಯಿ ಸುದರ್ಶನ್
ಗುಜರಾತ್ ತಂಡದ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಸಹ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಈ ಆವೃತ್ತಿಯಲ್ಲಿ ಆಡಿದ 16 ಪಂದ್ಯಗಳಲ್ಲಿ 159ರ ಸ್ಟ್ರೈಕ್ ರೇಟ್‌ನಲ್ಲಿ 710 ರನ್ ಕಲೆ ಹಾಕಿದ್ದಾರೆ. ಈ ಆವೃತ್ತಿಯಲ್ಲಿ ಸುದರ್ಶನ್ 1 ಶತಕ, 8 ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ.
ಟಾಪ್ 10 ರನ್ ಸಾಧಕರು
- ವೈಭವ್ ಸೂರ್ಯವಂಶಿ (ಆರ್‌ಆರ್), 16 ಪಂದ್ಯ, 776 ರನ್
- ಶುಭಮನ್ ಗಿಲ್ (ಜಿಟಿ), 15 ಪಂದ್ಯ, 722 ರನ್
- ಸಾಯಿ ಸುದರ್ಶನ್ (ಜಿಟಿ), 16 ಪಂದ್ಯ, 710 ರನ್
- ಹೆನ್ರಿಚ್ ಕ್ಲಾಸೆನ್ (ಎಸ್ಆರ್‌ಹೆಚ್), 15 ಪಂದ್ಯ, 624 ರನ್
- ಇಶಾನ್ ಕಿಶನ್ (ಎಸ್ಆರ್‌ಹೆಚ್), 15 ಪಂದ್ಯ, 602 ರನ್
- ವಿರಾಟ್ ಕೊಹ್ಲಿ (ಆರ್‌ಸಿಬಿ), 15 ಪಂದ್ಯ, 600 ರನ್
- ಕೆ.ಎಲ್. ರಾಹುಲ್ (ಡಿಸಿ), 14 ಪಂದ್ಯ, 593 ರನ್
- ಅಭಿಷೇಕ್ ಶರ್ಮಾ (ಎಸ್ಆರ್‌ಹೆಚ್), 15 ಪಂದ್ಯ, 563 ರನ್
- ಮಿಚೆಲ್ ಮಾರ್ಷ್ (ಎಲ್‌ಎಸ್‌ಜಿ), 13 ಪಂದ್ಯ, 563 ರನ್
- ಧ್ರುವ್ ಜುರೇಲ್ (ಆರ್‌ಆರ್), 16 ಪಂದ್ಯ, 515 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

