Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾದ ಸಹಾಯಕ ಕೋಚ್‌ ಬದಲಾವಣೆ: ಏಕೆ?

ಟೀಮ್ ಇಂಡಿಯಾ ಕಳೆದ ಎರಡು ವಾರದಲ್ಲಿ ನೀಡಿರುವ ಪ್ರದರ್ಶನ ನೀರಸವಾಗಿದ್ದು, ಟೀಕೆಗೆ ಗುರಿಯಾಗಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ವಿರುದ್ಧದ ಸರಣಿಗಳಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ನೀಡಿದೆ. ಕಳೆದ ಆರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸದೆ ನಿರಾಸೆಗೊಂಡಿದೆ. ಈ ಮಧ್ಯೆ ಈಗ ಬರುತ್ತಿರುವ ಸುದ್ದಿಗಳ ಪ್ರಕಾರ ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್‌ನಲ್ಲಿ ಬದಲಾವಣೆ ಸಾಧ್ಯತೆ ದಟ್ಟವಾಗಿದೆ.

ಟೀಮ್ ಇಂಡಿಯಾದ ಸಹಾಯಕ ಸಿಬ್ಬಂದಿಗಳು 2+1 ವರ್ಷದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಅಂದರೆ ಇವರ ಅವಧಿ 2 ವರ್ಷವಾಗಿರುತ್ತದೆ. ಒಂದು ವೇಳೆ ಬಿಸಿಸಿಐ ಹಾಗೂ ತರಬೇತುದಾರರು ಇಬ್ಬರೂ ಬಯಸಿದಲ್ಲಿ ಈ ಒಪ್ಪಂದವನ್ನು ಒಂದು ವರ್ಷ ವಿಸ್ತರಿಸಬಹುದು. ಈ ಸಹಾಯಕ ಸಿಬ್ಬಂದಿಯಲ್ಲಿ ಒಬ್ಬರು ಈಗಾಗಲೇ ವಿಶ್ವದ ನಾನಾ ದೇಶಗಳಲ್ಲಿ ತಂಡವನ್ನು ಹೊಂದಿರುವ ಐಪಿಎಲ್‌ನ ಫ್ರಾಂಚೈಸಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

IPL Over Country

ಸಹಾಯಕ ಸಿಬ್ಬಂದಿ ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್‌ ತಂಡವನ್ನು ಸೇರಲಿದ್ದಾರೆ. ಇನ್ನ ಒಬ್ಬ ಕೋಚಿಂಗ್ ಸಿಬ್ಬಂದಿ ಸಹ ಟೀಮ್ ಇಂಡಿಯಾವನ್ನು ತೊರೆಯಲು ಸಿದ್ಧರಾಗಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳನ್ನು ನಂಬುವುದಾದರೆ ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಸಹಾಯಕ ಸಿಬ್ಬಂದಿಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಆಯ್ಕೆ ಸಮಿತಿ ಹಾಗೂ ಸಹಾಯಕ ಸಿಬ್ಬಂಧಿಗಳ ನಡುವೆ ಭಿನ್ನಾಭಿಪ್ರಾಯ ಈಗಿನಿಂದ ಹದಗೆಟ್ಟಿಲ್ಲ. ಬದಲಿಗೆ ಈ ವರ್ಷದ ಆರಂಭದಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹದಗೆಟ್ಟಿವೆ ಎಂದು ತಿಳಿದು ಬಂದಿದೆ.

ಗಂಭೀರ್‌ ಕೋಚಿಂಗ್ ಸಾಧನೆ

ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಚಾಂಪಿಯನ್ ಆದ ಬಳಿಕ ಗೌತಮ್ ಗಂಭೀರ್ ಅವರು ಕೋಚ್ ಸ್ಥಾನವನ್ನು ಅಲಂಕರಿಸಿದರು. ಇವರ ಮೊದಲ ಪ್ರವಾಸ ನಿರಾಶಾದಾಯಕವಾಗಿತ್ತು. ಈ ಪ್ರವಾಸದಲ್ಲಿ ಭಾರತ ಏಕದಿನ ಸರಣಿಯನ್ನು ಸೋತು ನಿರಾಸೆ ಅನುಭವಿಸಿತ್ತು. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿತ್ತು. ಆದರೆ ಗಂಭೀರ್ ಅವರ ಮುಂದಾಳತ್ವದಲ್ಲಿ ಭಾರತ ಏಷ್ಯಾ ಕಪ್‌ 2025, ಚಾಂಪಿಯನ್ಸ್‌ ಟ್ರೋಫಿ, ಟಿ20 ವಿಶ್ವಕಪ್ 2026 ಗೆದ್ದು ಬೀಗಿದೆ.

Story first published: Saturday, July 11, 2026, 16:30 [IST]
Other articles published on Jul 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+