Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ತವರು ತಂಡಗಳಿಗೆ ಪಿಚ್ ಲಾಭ ಸಿಗುತ್ತಿಲ್ಲ ಏಕೆ? ಇಲ್ಲಿದೆ ಅಸಲಿ ಕಾರಣ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಎಂದ ಬಳಿಕ ಎಲ್ಲರಿಗೂ ಬ್ಯಾಟಿಂಗ್ ಸ್ವರ್ಗ ಎಂದೇ ನೆನಪಾಗುತ್ತದೆ. ಈ ಮೈದಾನದಲ್ಲಿ ಯಾವುದೇ ಪಂದ್ಯಗಳು ನಡೆದರೂ ಸಹ ಹೌಸ್‌ ಫುಲ್ ಆಗಿರುತ್ತವೆ. ಆಟಗಾರರ ಬಿಗ್‌ ಹಿಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಈ ಪಿಚ್‌ ವರ್ತನೆ ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದರ ಹಿಂದಿನ ಕಾರಣ ಏನು ಇಲ್ಲಿದೆ ವರದಿ.

19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಿತು. ಈ ಪಂದ್ಯ ಸಹ 200ಕ್ಕೂ ಹೆಚ್ಚು ರನ್‌ ಕಂಡಿತ್ತು. ಇನ್ನು ಇದೇ ಅಂಗಳದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ 3 ವಿಕೆಟ್‌ಗೆ 250 ರನ್‌ ಸಿಡಿಸಿತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟರ್‌ಗಳು ರನ್‌ ಕಲೆ ಹಾಕಲು ಪರದಾಟ ನಡೆಸಿದ್ದಾರೆ. ಬ್ಯಾಟರ್‌ಗಳು ಈ ಮೈದಾನದಲ್ಲಿ ದೊಡ್ಡ ಹೊಡೆತಗಳಿಗೆ ಪರದಾಡುತ್ತಿದ್ದಾರೆ.

IPL Pitch

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಎಲ್‌ಎಸ್‌ಜಿ 146 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಆರ್‌ಸಿಬಿ 15.1 ಓವರ್‌ಗಳಲ್ಲಿ ಮುಟ್ಟಿ ಬೀಗಿತು. ಈ ಪಂದ್ಯದಲ್ಲಿ ವಿರಾಟ್‌ 49 ಎಸೆತಗಳಲ್ಲಿ 34 ರನ್‌ ಸಿಡಿಸಿದರು. ಇದೇ ರೀತಿಯ ಚಿತ್ರಣ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಕಂಡು ಬಂದಿತು. ಚಿನ್ನಸ್ವಾಮಿ ಮೈದಾನ ಬ್ಯಾಟರ್‌ಗಳಿಗೆ ಅನುಕೂಲ ಮಾಡುತ್ತಿಲ್ಲ ಎಂದು ತಿಳಿದು ಬರುತ್ತಿದೆ.

ತವರಿನ ತಂಡಗಳಿಗೆ ಸಿಗುತ್ತಿಲ್ಲ ಲಾಭ

ಈ ಪಿಚ್‌ ಸಾಕಷ್ಟು ವಿಭಿನ್ನವಾಗಿ ವರ್ತಿಸುತ್ತಿದೆ. ಈ ಆವೃತ್ತಿಯಲ್ಲಿ ನಾವು ಅದನ್ನು ಗಮನಿಸಿದ್ದೇವೆ. ಆದರೆ ಈಗ ಕೆಲವು ಪಂದ್ಯಗಳಲ್ಲಿ ಪಿಚ್ ತುಂಬಾ ಸ್ಲೋ ಆಗಿದ್ದು, ಬೌನ್ಸ್ ಕೂಡ ಕಡಿಮೆ ಇತ್ತು. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ಪಿಚ್ ತುಂಬಾ ನಿಧಾನವಾಗಿತ್ತು, ಚೆಂಡು ಬ್ಯಾಟ್‌ಗೆ ಸರಿಯಾಗಿ ಬರುತ್ತಿರಲಿಲ್ಲ ಎಂದು ಆರ್.ಸಿ.ಬಿ ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ತಿಳಿಸಿದ್ದಾರೆ.

IPL Pitch

ತವರಿನ ಪಿಚ್‌ ಲಾಭ ಸಿಗುತ್ತಿಲ್ಲ ಎಂದು ಹೇಳುತ್ತಿರುವುದು ಬರೀ ಆರ್‌ಸಿಬಿ ಅಷ್ಟೇ ಅಲ್ಲ. ಬೇರೆ ತಂಡಗಳು ಸಹ ಇದನ್ನೇ ಹೇಳುತ್ತಿವೆ. ಇದಕ್ಕೆ ಕಾರಣ ಬಿಸಿಸಿಐ 2019ರಿಂದ ಪಿಚ್‌ ಕ್ಯುರೇಟರ್‌ಗಳು ನೇಮಿಸುತ್ತದೆ. 'ತಟಸ್ಥ ಕ್ಯುರೇಟರ್‌ಗಳಿಂದ' ಪಂದ್ಯದ ಪಿಚ್‌ ಸಿದ್ಧ ಪಡಿಸುತ್ತಿರುವುದರಿಂದ ತವರು ತಂಡಗಳಿಗೆ ಸಹಾಯ ಸಿಗುತ್ತಿಲ್ಲ. ಇದರಿಂದ ತವರು ತಂಡಗಳಿಗೆ ನಷ್ಟವಾಗುತ್ತಿದೆ. ಈ ಮೊದಲು ಚೆನ್ನೈ ಹಾಗೂ ಕೋಲ್ಕತ್ತಾ ತಂಡಗಳು ಸ್ಪಿನ್ ಸ್ನೇಹಿ ಪಿಚ್ ಹೊಂದಿದ್ದವು. ಆದರೆ ಈಗ ಈ ಲೆಕ್ಕಾಚಾರ ಬದಲಾಗಿದೆ. ಈ ಬಗ್ಗೆ ತಂಡಗಳು ಈಗಾಗಲೇ ಧ್ವನಿ ಎತ್ತಿವೆ.

ತಟಸ್ಥ ಕ್ಯುರೇಟರ್‌ ನೇಮಿಸುವ ಕ್ರಮವನ್ನು ಆರಂಭದಲ್ಲಿ ನವದೆಹಲಿ, ಕೋಲ್ಕತ್ತಾ, ಚೆನ್ನೈ ಮೈದಾನಗಳಿಗೆ ಅನುಸರಿಸಲಾಯಿತು. ಪಿಚ್‌ ನಿರ್ಮಾಣ ಅತ್ಯಂತ ಕಷ್ಟದ ಕೆಲಸ. ಇಲ್ಲಿ ಮಳೆ, ತಾಪಮಾನ, ಮಣ್ಣು ಮುಂತಾದ ಹಲವು ಅಂಶಗಳು ಚಿತ್ರಕ್ಕೆ ಬರುತ್ತವೆ. ಈ ಪಿಚ್‌ ನಿರ್ಮಾಣದ ವೇಳೆ ಸ್ಥಳೀಯ ವ್ಯಕ್ತಿಯಿಂದ ಸಲಹೆ ಪಡೆಯುತ್ತಾರೆ. ಅಂತಿಮವಾಗಿ ಬಿಸಿಸಿಐ ನೇಮಿಸಿದ ವ್ಯಕ್ತಿ ನಿರ್ಧಾರ ತೆಗೆದುಕೊಳ್ಳುತ್ತಾನೆ.

Story first published: Tuesday, April 21, 2026, 8:38 [IST]
Other articles published on Apr 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+