Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಪ್ಲೇ-ಆಫ್ ಒಂದು ಚಿಕ್ಕ ಟೂರ್ನಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ

IPL play-off is a small little tournament: MI skipper Rohit Sharma

ದುಬೈ: ಗಾಯಕ್ಕೀಡಾಗಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್ ಮುಗಿಯುವುದರೊಳಗೆ ಚೇತರಿಸಿ ಮೈದಾನಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ಆದರೆ ರೋಹಿತ್ ಉನ್ನುಳಿದ ಪಂದ್ಯ ಆಡುವ ಸಾಧ್ಯತೆ ಕಡಿಮೆ. ರೋಹಿತ್ ಈಚೆಗೆ ನೀಡಿರುವ ಹೇಳಿಕೆ ಇಂಥದ್ದೊಂದು ಸುಳಿವು ನೀಡಿದೆ.

ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಆಡಿರುವ 13 ಪಂದ್ಯಗಳಲ್ಲಿ 9ರಲ್ಲಿ ಗೆದ್ದು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದೆ. ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್‌ಗಳ ಜಯ ಕಂಡಿದ್ದ ಎಂಐ ಅಗ್ರಸ್ಥಾನದಲ್ಲಿ ಗಟ್ಟಿಯಾಗಿತ್ತು. ಅಂತೂ ಲೀಗ್‌ ಎಲ್ಲಾ ಪಂದ್ಯಗಳು ಮುಗಿಯುವಾಗ ಮುಂಬೈ ಅಗ್ರ ಎರಡರಲ್ಲಿ ಕಾಣಿಸಿಕೊಳ್ಳುವುದಂತೂ ಗ್ಯಾರಂಟಿಯಾಗಿದೆ.

'ನಾವು ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದೇವೆ ಅನ್ನೋದು ನಮಗೆ ಗೊತ್ತಿದೆ. ಇದು ಒಳ್ಳೆಯ ಸಾಧನೆ. ಈ ಮೊದಲು ನಾವು ಏನೆಲ್ಲಾ ಶ್ರಮ ಹಾಕಿದ್ದೇವೋ ಅದಕ್ಕೇ ನಾವಿಲ್ಲಿಗೆ ಬಂದಿದ್ದೇವೆ. ನಾವು ಅಡೆತಡೆಗಳನ್ನು ದಾಟಿಯಾಗಿದೆ. ಇನ್ನು ಆಡಲು ಪ್ಲೇ ಆಫ್ ಅನ್ನೋ ಸಣ್ಣ ಟೂರ್ನಿ ಬಾಕಿಯಿದೆ. ಇದಕ್ಕೂ ಮುನ್ನ ನಮಗೆ ಸನ್ ರೈಸರ್ಸ್ ಮುಂದೆ ಇನ್ನೊಂದು ಪಂದ್ಯವಿದೆ,' ಎಂದು ರೋಹಿತ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ಇನ್ನು ನವೆಂಬರ್ 3ರಂದು ಲೀಗ್‌ ಹಂತದ ಕೊನೇ ಪಂದ್ಯವಿದೆ. ಹೈದರಾಬಾದ್ ವಿರುದ್ಧದ ಪಂದ್ಯವಿದು. ಆ ಬಳಿಕ ನವೆಂಬರ್ 5ಕ್ಕೆ ಪ್ಲೇ ಆಫ್‌ನ ಪಂದ್ಯವಿದೆ. ಕ್ವಾಲಿಫೈಯರ್ 1ರಲ್ಲಿ ಗೆದ್ದು ಬರುವ ತಂಡ ಮುಂಬೈ ಜೊತೆ ಅಂದು ಕಾದಾಡಲಿವೆ. ಎರಡೂ ಪಂದ್ಯಗಳೂ 7.30 pmಗೆ ಆರಂಭವಾಗಲಿವೆ.

Story first published: Monday, November 2, 2020, 9:57 [IST]
Other articles published on Nov 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+