For Quick Alerts
ALLOW NOTIFICATIONS  
For Daily Alerts
 

IPL 2023: ಮಯಾಂಕ್ ಅಗರ್ವಾಲ್ ಮತ್ತೆ ಪಂಜಾಬ್ ಕಿಂಗ್ಸ್ ಸೇರಬಹುದು ಎಂದ ಕೊಹ್ಲಿ ಬಾಲ್ಯದ ಕೋಚ್

IPL Player Auction 2023: PBKS Can Bid For Thier Former Skipper Mayank Agarwal - Rajkumar Sharma

2023ರ ಮಿನಿ ಹರಾಜಿಗೆ ಮುನ್ನ ಪಂಜಾಬ್ ಕಿಂಗ್ಸ್ ನಾಯಕ ಮಯಾಂಕ್ ಅಗರ್ವಾಲ್‌ರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಶಿಖರ್ ಧವನ್ ಈಗ ಪಂಜಾಬ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

ಮಯಾಂಕ್ ಅಗರ್ವಾಲ್ ಈಗ ಮತ್ತೆ ಹರಾಜಿಗೆ ಬಂದಿದ್ದೆ ಹಲವು ತಂಡಗಳು ಅವರಿಗಾಗಿ ಬಿಡ್ ಮಾಡುವ ಸಾಧ್ಯತೆ ಇದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಮಯಾಂಕ್‌ ಅಗರ್ವಾಲ್‌ಗಾಗಿ ಬಿಡ್ ಮಾಡುವ ಸಾಧ್ಯತೆ ಇದೆ.

ಆದರೆ, ಪಂಜಾಬ್ ಕಿಂಗ್ಸ್ ಮಯಾಂಕ್ ಅಗರ್ವಾಲ್‌ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ನ್ಯೂಸ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ರಾಜ್‌ಕುಮಾರ್ ಶರ್ಮಾ, ಕಳೆದ ಆವೃತ್ತಿಯ ಹರಾಜಿನಲ್ಲಿ ಪಿಬಿಕೆಎಸ್ 12 ಕೋಟಿ ರುಪಾಯಿ ನೀಡಿ ಮಯಾಂಕ್ ಅಗರ್ವಾಲ್‌ರನ್ನು ಖರೀದಿ ಮಾಡಿತ್ತು. ಇದೇ ಕಾರಣಕ್ಕೆ ಪಂಜಾಬ್ ಕಿಂಗ್ಸ್ ಮಯಾಂಕ್‌ ಅಗರ್ವಾಲ್‌ರನ್ನು ಬಿಡಗಡೆ ಮಾಡಿದೆ ಎಂದು ಹೇಳಿದರುವ ಶರ್ಮಾ, ಈ ಬಾರಿ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಮತ್ತೆ ಬಿಡ್ ಮಾಡುವ ಸಾಧ್ಯತೆ ಎಂದು ಹೇಳಿದರು.

IPL Player Auction 2023: PBKS Can Bid For Thier Former Skipper Mayank Agarwal - Rajkumar Sharma

ಆತ ಅತ್ಯುತ್ತಮ ಆಟಗಾರ ಎಂದ ಶರ್ಮಾ

ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಮಯಾಂಕ್‌ರನ್ನು ಪಂಜಾಬ್ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ರಾಜ್‌ಕುಮಾರ್ ಶರ್ಮಾ ಹೇಳಿದ್ದಾರೆ.

"ಮಯಾಂಕ್ ಅದ್ಭುತ ಆಟಗಾರ ಮತ್ತು ಅತ್ಯುತ್ತ ದಾಖಲೆ ಹೊಂದಿದ್ದಾರೆ. ದೊಡ್ಡ ಬೆಲೆಯ ಕಾರಣದಿಂದಾಗಿ ಅವರನ್ನು ಬಿಡುಗಡೆ ಮಾಡಿರಬಹುದು. ಆದರೆ ಅವರು ಅವನನ್ನು ಕಡಿಮೆ ಬೆಲೆಗೆ ಮತ್ತೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂಧು ಹೇಳಿದ್ದಾರೆ.

"ಪಿಬಿಕೆಎಸ್ ಮಿನಿ ಹರಾಜಿಗೆ ಮುಂಚಿತವಾಗಿ ಮಯಾಂಕ್ ಅಗರ್ವಾಲ್ ಅವರನ್ನು ಬಿಡುಗಡೆ ಮಾಡುವುದನ್ನು ನೋಡುವುದು ತುಂಬಾ ಆಶ್ಚರ್ಯಕರವಾಗಿದೆ" ಎಂದು ಅವರು ಹೇಳಿದರು.

ತಂಡದ ನಾಯಕತ್ವ ವಹಿಸಿಕೊಂಡ ನಂತರ ಕಳೆದ ಸೀಸನ್‌ನಲ್ಲಿ ಅಗರ್ವಾಲ್‌ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. 13 ಪಂದ್ಯಗಳಲ್ಲಿ 16.33 ಸರಾಸರಿಯಲ್ಲಿ ಕೇವಲ 196 ರನ್‌ಗಳನ್ನು ಮಾತ್ರ ಗಳಿಸಿದ್ದರು.

ಪಂಜಾಬ್ ತಂಡದ ಪರ್ಸ್‌ನಲ್ಲಿ 32.2 ಕೋಟಿ ರುಪಾಯಿ ಉಳಿಸಿಕೊಂಡಿದೆ. ಕೆಲವು ದೊಡ್ಡ ಆಟಗಾರರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಸಿದ್ಧತೆ ಮಾಡಿಕೊಂಡಿದೆ. ಬೆನ್‌ ಸ್ಟೋಕ್ಸ್, ಸ್ಯಾಮ್ ಕರನ್, ಕ್ಯಾಮರೊನ್ ಗ್ರೀನ್ ಸೇರಿದಂತೆ ಹಲವು ಆಟಗಾರರಿಗಾಗಿ ಬಿಡ್ ಮಾಡುವ ಸಾಧ್ಯತೆ ಇದೆ.

Story first published: Wednesday, December 21, 2022, 2:30 [IST]
Other articles published on Dec 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+