ಲಲಿತ್ ಮೋದಿ ವಿರುದ್ಧ ಜಾಮೀನು ರಹಿತ ವಾರೆಂಟ್
ಮುಂಬೈ, ಆಗಸ್ಟ್ 05: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಣಕಾಸು ಅವ್ಯವಹಾರ ಮಾಡಿರುವ ಆರೋಪ ಹೊತ್ತಿರುವ ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ವಿಶೇಷ ನ್ಯಾಯಾಲಯದಿಂದ ಬುಧವಾರ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ಹಣಕಾಸು ಅವ್ಯವಹಾರದ ಬಗ್ಗೆ ಉತ್ತರ ಕೋರಿ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ಗೆ ಲಲಿತ್ ಮೋದಿ ಅವರು ಇದುವರೆವಿಗೂ ಪ್ರತಿಕ್ರಿಯೆ ನೀಡಿಲ್ಲ ಹೀಗಾಗಿ ಅವರ ವಿರುದ್ಧ ಬಂಧನ ರಹಿತ ವಾರೆಂಟ್ ನೀಡುವಂತೆ ಕೋರಲಾಯಿತು ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಹಿತೇನ್ ವೆಣೆಗಾಂವ್ಕರ್ ಅವರು ಹೇಳಿದ್ದಾರೆ.[ಲಲಿತ್ ಮೋದಿ ವಿರುದ್ಧ ಮಾನಹಾನಿ ದೂರು]

Prevention of Money Laundering Act (PMLA) ನ್ಯಾಯಾಲಯದಲ್ಲಿ ಜುಲೈ 27ರಂದು ಈ ಬಗ್ಗೆ ಜಾರಿ ನಿರ್ದೇಶನಾಲಯ ಅರ್ಜಿ ಹಾಕಿತ್ತು. ಲಲಿತ್ ಮೋದಿ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಕರಣ ಸಂಬಂಧ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಲು ಸಿದ್ದ ಎಂದು ಮೋದಿ ಪರ ವಕೀಲರು ಹೇಳಿದ್ದಾರೆ.[ಲಂಡನ್ನಿಗೆ ಹೋಗಿಲ್ಲ, ಲಮೋ ಭೇಟಿ ಮಾಡಿಲ್ಲ: ಶಾರುಖ್]
ಲಲಿತ್ ಮೋದಿ ಅವರು ಕೂಡಾ ಜಾರಿ ನಿರ್ದೇಶನಾಲಯ ನನಗೆ ವಾರೆಂಟ್ ಹೊರಡಿಸಲಿ ಎಂದು ಈ ಹಿಂದೆ ಟ್ವೀಟ್ ಮಾಡಿ ಆಹ್ವಾನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಮೋದಿ ಅವರು ಐಪಿಎಲ್ ಪಂದ್ಯ ಪ್ರಸಾರ ಹಕ್ಕು ಮಾರಾಟ ಸೇರಿದಂತೆ ಅನೇಕ ಹಣಕಾಸು ಅವ್ಯವಹಾರಗಳಲ್ಲಿ ಸಿಲುಕಿದ್ದಾರೆ. ಈ ಸುದ್ದಿಯನ್ನು ವಿಡಿಯೋದಲ್ಲಿ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications