For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಅಂಕಪಟ್ಟಿ: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?

IPL Points table: which team finished at the bottoms

ಅತ್ಯಂತ ಸ್ಪರ್ಧಾತ್ಮಕ ಕ್ರೀಡಾಕೂಟ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಲೀಗ್ ಹಂತ ಮುಗಿದು ಪ್ಲೇ ಆಫ್ ಹಂತ ಶುರುವಾಗುವ ಕಾಲ ಬಂದಿದೆ. ಈ ಸಂದರ್ಭದಲ್ಲಿ ನವೆಂಬರ್ 01ರಂದು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೋಲು ಕಂಡಿದ್ದಲ್ಲದೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ ಜೊತೆಗೆ ಟೂರ್ನಮೆಂಟ್ ನಿಂದಲೂ ಹೊರ ನಡೆದಿದೆ.

ಈ ಸಂದರ್ಭದಲ್ಲಿ ಐಪಿಎಲ್ ಇತಿಹಾಸದಲ್ಲೇ ಅಂಕಪಟ್ಟಿಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು? ಎಂಬ ಪ್ರಶ್ನೆ ಟ್ವಿಟ್ಟರ್ ನಲ್ಲಿ ಹೆಚ್ಚು ಕೇಳಿ ಬಂದಿದೆ. ಇದಕ್ಕೆ ಉತ್ತರ ಡೆಲ್ಲಿ ಡೇರ್ ಡೆವಿಲ್ಸ್(ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಈ ತಂಡ ಒಟ್ಟು 4 ಬಾರಿ ಕೊನೆ ಸ್ಥಾನ ಪಡೆದುಕೊಂಡಿದೆ.

ಯಾವ ತಂಡ ಎಷ್ಟು ಬಾರಿ ಕೊನೆ ಸ್ಥಾನ ಪಡೆದಿದೆ?
ಡೆಲ್ಲಿ ಕ್ಯಾಪಿಟಲ್ಸ್ : 4 ಬಾರಿ
ಕಿಂಗ್ಸ್ ಎಲೆವನ್ ಪಂಜಾಬ್: 3 ಬಾರಿ
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು: 2 ಬಾರಿ
ಡೆಕ್ಕನ್ ಚಾರ್ಜರ್ಸ್: ಒಂದು ಬಾರಿ
ಕೋಲ್ಕತಾ ನೈಟ್ ರೈಡರ್ಸ್: ಒಂದು ಬಾರಿ
ಪುಣೆ ವಾರಿಯರ್ಸ್ ಇಂಡಿಯನ್ಸ್: ಒಂದು ಬಾರಿ
ರಾಜಸ್ಥಾನ ರಾಯಲ್ಸ್ : ಒಂದು ಬಾರಿ

ಇದೇ ಮೊದಲ ಬಾರಿಗೆ ರಾಜಸ್ಥಾನ ಕೊನೆ ಸ್ಥಾನಕ್ಕೆ ಕುಸಿದಿದ್ದು, ಮೊದಲ ಬಾರಿಗೆ ಮಾಜಿ ಚಾಂಪಿಯನ್ ತಂಡವೊಂದು ಕೊನೆ ಸ್ಥಾನಕ್ಕೆ ಕುಸಿದ ಕಳಪೆ ಸಾಧನೆ ಮಾಡಿದೆ.

ವರ್ಷದಿಂದ ವರ್ಷಕ್ಕೆ ಕೊನೆ ಸ್ಥಾನ ಪಡೆದ ತಂಡಗಳು:
2008: ಡೆಕ್ಕನ್ ಚಾರ್ಜರ್ಸ್ (4 ಅಂಕಗಳು)
2009: ಕೋಲ್ಕತಾ ನೈಟ್ ರೈಡರ್ಸ್ (7)
2010: ಕಿಂಗ್ಸ್ ಎಲೆವನ್ ಪಂಜಾಬ್ (8)
2011: ಡೆಲ್ಲಿ ಡೇರ್ ಡೆವಿಲ್ಸ್(ಕ್ಯಾಪಿಟಲ್ಸ್) (9)
2012: ಪುಣೆ ವಾರಿಯರ್ಸ್ ಇಂಡಿಯನ್ಸ್ (8)
2013: ಡೆಲ್ಲಿ ಡೇರ್ ಡೆವಿಲ್ಸ್(ಕ್ಯಾಪಿಟಲ್ಸ್) (6)
2014: ಡೆಲ್ಲಿ ಡೇರ್ ಡೆವಿಲ್ಸ್(ಕ್ಯಾಪಿಟಲ್ಸ್) (4)
2015: ಕಿಂಗ್ಸ್ ಎಲೆವನ್ ಪಂಜಾಬ್ (6)
2016: ಕಿಂಗ್ಸ್ ಎಲೆವನ್ ಪಂಜಾಬ್ (8)
2017: ರಾಯಲ್ ಚಾಲೆಂಜರ್ಸ್ ಬೆಂಗಳೂರು (7)
2018: ಡೆಲ್ಲಿ ಡೇರ್ ಡೆವಿಲ್ಸ್(ಕ್ಯಾಪಿಟಲ್ಸ್) (10)
2019: ರಾಯಲ್ ಚಾಲೆಂಜರ್ಸ್ ಬೆಂಗಳೂರು (11)
2020: ರಾಜಸ್ಥಾನ ರಾಯಲ್ಸ್ (12)

ಇದೇ ಮೊದಲ ಬಾರಿಗೆ ಕೊನೆ ಸ್ಥಾನ ಪಡೆದ ತಂಡವೊಂದು ಈ ಹಿಂದಿನ ವರ್ಷಗಳಿಗೆ ಹೋಲಿಸಿದೆ ಹೆಚ್ಚು ಅಂಕ(12) ಗಳಿಸಿದೆ.

Story first published: Monday, November 2, 2020, 9:56 [IST]
Other articles published on Nov 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+