ಮಳೆಗಾಲದ ಬಳಿಕ ಐಪಿಎಲ್ ನಡೆಸಲು ಸಾಧ್ಯ: ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ

ಮುಂಬೈ, ಮೇ 20: ಕೊರೊನಾವೈರಸ್ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಯೋಜನೆಗಳನ್ನು ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಅಧ್ಯಕ್ಷ ರಾಹುಲ್ ಜೋಹ್ರಿ ಹೇಳಿದ್ದಾರೆ.
ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಲಿದೆಯೋ ಎಂದು ಬಿಸಿಸಿಐ ಎದುರು ನೋಡುತ್ತಿದೆ. ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ಟರೆ ವಿಶ್ವಕಪ್ ವೇಳಾಪಟ್ಟಿಯ ಜಾಗದಲ್ಲಿ ಐಪಿಎಲ್ ನಡೆಸುವ ಆಲೋಚನೆಯಲ್ಲಿ ಬಿಸಿಸಿಐ ಇದೆ.
'ಚುನಾವಣೆಯಲ್ಲಿ ಓಟ್ ಹಾಕಿದವರಿಗಿಂತ ಹೆಚ್ಚಿನ ಜನ ಕಳೆದ ಬಾರಿಯ ನಡೆದ ಐಪಿಎಲ್ ವೀಕ್ಷಿಸಿದ್ದಾರೆ. ಪ್ರಾಯೋಜಕರಿಗೆ, ಕ್ರಿಕೆಟ್ ಒಂದು ನಾಯಕ ಮತ್ತು ಅದು ಮುಂದುವರೆಯಲು ದಾರಿ ಮಾಡಿಕೊಡುತ್ತದೆ. ಕೊರೊನಾದಿಂದಾಗಿರುವ ಹೊಡೆತ ಬೇಗ ಸುಧಾರಿಸಲು ಸಾಧ್ಯವಿಲ್ಲ,' ಎಂದು ರಾಹುಲ್ ಜೋಹ್ರಿ ಹೇಳಿದ್ದಾರೆ.
'ವಿಮಾನ ಯಾನಗಳು ಪುನರಾರಂಭಗೊಂಡಾಗ ಬರುವ ಆಟಗಾರರು ಆಡೋದಕ್ಕೆ ಮುನ್ನ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇದು ವೇಳಾಪಟ್ಟಿಯಲ್ಲಿ ಹೇಗೆ ಪ್ರಭಾವ ಬೀರಲಿದೆ ಎಂದು ನಾವು ನೋಡಬೇಕಾಗುತ್ತದೆ,' ಎಂದು ಜೋಹ್ರಿ ವಿವರಿಸಿದ್ದಾರೆ.
ಮಾತು ಮುಂದುವರೆಸಿದ ಜೋಹ್ರಿ, 'ಆಡಲು ಬಂದ ಆಟಗಾರರು ಪ್ರ್ಯಾಕ್ಟೀಸ್ ಕೂಡ ಬದಿಗಿಟ್ಟು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಇಲ್ಲಿ ಬದಲಾವಣೆಗೆ ಸಾಕಷ್ಟು ಸಾಧ್ಯತೆಗಳಿರುತ್ತವೆ. ಆದರೆ ನಮಗಿನ್ನೂ ಆಶಾಭಾವನೆಯಿದೆ. ಮಳೆಗಾಲದ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂಬ ನಿರೀಕ್ಷೆ ನಮ್ಮದು,' ಎಂದು ಜೋಹ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications