Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ಭೀತಿ : ಐಪಿಎಲ್‌ನಿಂದ ಕಡೆಗೂ ಬಿತ್ತು ಬಹುದೊಡ್ಡ ಬ್ರೇಕಿಂಗ್ ನ್ಯೂಸ್!

Ipl Postponed Till April 15 Due To Coronavirus
IPL 2020 postponed to April 15 due to coronavirus | IPL2020 | Cricket | Oneindia Kannada

ಐಪಿಎಲ್ ವೀಕ್ಷಕರಿಗೆ ದೊಡ್ಡ ನಿರಾಸೆಯ ಸುದ್ಧಿ ಇದೀಗ ಹೊರ ಬಿದ್ದಿದೆ. ಕೊರೊನಾ ಭೀತಿಯಿಂದ ಐಪಿಎಲ್ ನಡೆಯುತ್ತೋ ಇಲ್ಲವೋ ಎಂಬ ತೂಗುಯ್ಯಾಲೆಯಲ್ಲಿತ್ತು. ಇದೀಗ ಈ ವಿಚಾರವಾಗಿ ಐಪಿಎಲ್ ಆಯೋಜಕರು ಬಹುದೊಡ್ಡ ತೀರ್ಮಾನಕ್ಕೆ ಬಂದಿದ್ದಾರೆ.

ಮಾರ್ಚ್ 29ಕ್ಕೆ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಎಲ್ಲಾ ಸಿದ್ಧತೆಗಳನ್ನೂ ನಡೆಸಲಾಗಿತ್ತು. ಆದರೆ ಸದ್ಯ ವಿಶ್ವಾದ್ಯಂತ ಕೊರೊನಾ ಭೀತಿ ಹಬ್ಬಿದ್ದು ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಐಪಿಎಲ್‌ಅನ್ನು ಮುಂದೂಡುವ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ.

ಏಪ್ರಿಲ್ 15ರ ವರೆಗೆ ಐಪಿಎಲ್ ಮುಂದೂಡಿಕೆ

ಏಪ್ರಿಲ್ 15ರ ವರೆಗೆ ಐಪಿಎಲ್ ಮುಂದೂಡಿಕೆ

ಐಪಿಎಲ್ ಮುಂದೂಡುವ ನಿರ್ಧಾರಕ್ಕೆ ಆಯೋಜಕರು ಬಂದಿದ್ದಾರೆ. ಐಪಿಎಲ್ ಆರಂಭವನ್ನು ಏಪ್ರಿಲ್ 15ರ ವರೆಗೆ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ. ಈ ಮೂಲಕ ಐಪಿಎಲ್ ನಡೆಯುತ್ತಾ ಇಲ್ವಾ ಅನ್ನುವ ಅನುಮಾನಕ್ಕೆ ಒಂದು ಹಂತದ ತೆರೆ ಬಿದ್ದಂತಾಗಿದೆ.

29ಕ್ಕೆ ಆರಂಭವಾಗಬೇಕಿತ್ತು ಐಪಿಎಲ್

29ಕ್ಕೆ ಆರಂಭವಾಗಬೇಕಿತ್ತು ಐಪಿಎಲ್

ಇದೇ ತಿಂಗಳ 29ಕ್ಕೆ ಐಪಿಎಲ್ ಆರಂಭಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ ಸದ್ಯ ಕೊರೊನಾ ವೈರಸ್ ವೇಗವಾಗಿ ದೇಶದಲ್ಲಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ಪ್ರಮುಖ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದೆ.

ಸೌರವ್ ಗಂಗೂಲಿ ನೇತೃತ್ವದಲ್ಲಿ ಸಭೆ

ಸೌರವ್ ಗಂಗೂಲಿ ನೇತೃತ್ವದಲ್ಲಿ ಸಭೆ

ಇಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಉಪಾಧ್ಯಕ್ಷ ಜೈ ಶಾ, ಐಪಿಎಲ್‌ನ ಪ್ರಮುಖರು ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಏಪ್ರಿಲ್ 15ರವರೆಗೆ ಮುಂದೂಡಿಕೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ

ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ

ಮಾಧ್ಯಮ ಪ್ರಕಟಣೆಯ ಮೂಲಕ ಈ ವರದಿಯನ್ನು ಬಿಸಿಸಿಐ ಖಚಿತಪಡಿಸಿದೆ. ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಮುಂದೂಡಿಕೆಯ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಡೆಸಿಯೇ ತೀರುತ್ತೇವೆ ಎಂದಿದ್ದ ಬಿಸಿಸಿಐ

ನಡೆಸಿಯೇ ತೀರುತ್ತೇವೆ ಎಂದಿದ್ದ ಬಿಸಿಸಿಐ

ಕೊರೊನಾ ಭೀತಿ ಭಾರತಕ್ಕೂ ಹಬ್ಬುತ್ತಿದ್ದಂತೆಯೇ ಐಪಿಎಲ್ ಮುಂದೂಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗತೊಡಗಿತು. ಆದರೆ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಯಾವುದೇ ಕಾರಣಕ್ಕೂ ಐಪಿಎಲ್ ಮುಂದೂಡಿಕೆಯಾಗುವುದಿಲ್ಲ. ನಿಗದಿಯಂತೆಯೇ ನಡೆಲಿದೆ. ಕೊರೊನಾ ವೈರಸ್‌ ತಡೆಗಟ್ಟಲು ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದರು.

ರಾಜ್ಯ ಸರ್ಕಾರಗಳಿಂದ ವಿರೋಧ

ರಾಜ್ಯ ಸರ್ಕಾರಗಳಿಂದ ವಿರೋಧ

ಐಪಿಎಲ್ ಆಯೋಜನೆಯ ಬಗ್ಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ವಿರೋಧವನ್ನು ವ್ಯಕ್ತಪಡಿಸಿದ್ದವು. ಮಹಾರಾಷ್ಟ್ರ ಸರ್ಕಾರ ಮತ್ತು ದೆಹಲಿ ರಾಜ್ಯ ಸರ್ಕಾರಗಳೂ ಐಪಿಎಲ್ ಆಯೋಜನೆಗೆ ವಿರೋಧವನ್ನು ವ್ಯಕ್ತಪಡಿಸಿತ್ತು.

Story first published: Friday, March 13, 2020, 16:21 [IST]
Other articles published on Mar 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+