Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರುವ ಕಾರಣವನ್ನು ಬಹಿರಂಗಪಡಿಸಿದ ಕೇನ್ ರಿಚರ್ಡ್ಸನ್

Ipl Pull-out Was Difficult But Right Decision: Kane Richardson

ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ ಇದೀಗ ಈ ನಿರ್ಧಾರಕ್ಕೆ ಕಾರಣವೇನೆಂದು ಅವರು ಹೇಳಿದ್ದಾರೆ. ಈ ನಿರ್ಧಾರವನ್ನು ತೆಗದುಕೊಳ್ಳುವುದು ನನಗೆ ಕಠಿಣವಾಗಿತ್ತು ಆದರೆ ಇದು ಉತ್ತಮ ನಿರ್ಧಾರವೆಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೇನ್ ರಿಚರ್ಡ್ಸನ್ ಇದೇ ಸಂದರ್ಭದಲ್ಲಿ ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಮಗುವಿನ ಜನನದ ಸಂದರ್ಭದಲ್ಲಿ ಜೊತೆಯಾಗಿರುವುದನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕೇನ್ ರಿಚರ್ಡ್ಸನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದರು. 4 ಕೋಟಿಗೆ ಆರ್‌ಸಿಬಿ 29ರ ಹರೆಯದ ಆಸ್ಟ್ರೇಲಿಯಾದ ವೇಗಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಅವರು ಪಾಲ್ಗೊಳ್ಳದಿರುವ ಕಾರಣ ಅವರ ಸ್ಥಾನಕ್ಕೆ ಆಸಿಸ್ ಸ್ಪಿನ್ನರ್ ಆಡಂ ಜಂಪಾ ಅವರನ್ನು ಸೇರ್ಪಡೆಗೊಳಿಸಿದೆ.

'ಐಪಿಎಲ್‌ನಂತಾ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿಯುವುದು ನಿಜಕ್ಕೂ ತುಂಬಾ ಕಠಿಣ. ವಿಶ್ವ ಕ್ರಿಕೆಟ್‌ನಲ್ಲಿ ದೇಶಿಯ ಸ್ಪರ್ಧೆಯ ಕಿರೀಟದಂತಿರುವ ಈ ಕೂಟದಿಂದ ಹೊರಬರುವುದು ನಿಜಕ್ಕೂ ಸುಲಭವಲ್ಲ. ಆದರೆ ಈ ಬಗ್ಗೆ ಕುಳಿತು ಯೋಚಿಸಿದರೆ ಇದು ನಿಜಕ್ಕೂ ಸರಿಯಾದ ನಿರ್ಧಾರ' ಎಂದು ಮಾಧ್ಯಮಕ್ಕೆ ಕೇನ್ ರಿಚರ್ಡ್ಸನ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ನಾನು ಖಂಡಿತಾ ನಿರಾಸೆಗೊಂಡಿದ್ದೇನೆ. ಅದರೆ ಭವಿಷ್ಯದಲ್ಲಿ ಈ ಅವಕಾಶ ಮತ್ತೆ ದೊರೆಯಬಹುದೆಂಬ ಆಶಾವಾದದಲ್ಲಿದ್ದೇನೆ ಎಂದಿ ರಿಚರ್ಡ್ಸನ್ ಹೇಳಿದ್ದು ತನ್ನ ಮೊದಲ ಮಗುವಿನ ಜನನದ ಕ್ಷಣವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

Story first published: Thursday, September 3, 2020, 15:38 [IST]
Other articles published on Sep 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+