Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಫಿಕ್ಸಿಂಗ್ ಭೂತ ಎಬ್ಬಿಸಿದ ಲಲಿತ್ ಮೋದಿ

ಬೆಂಗಳೂರು, ಜೂ.28: ಐಪಿಎಲ್ ಸ್ಥಾಪಕ, ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಮತ್ತೊಂದು ಬಾಂಬ್ ಹಾಕಿದ್ದಾರೆ. ನಿದ್ದೆಯಲ್ಲಿ ಮಲಗಿದ್ದ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಭೂತವನ್ನು ಎಬ್ಬಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನ ಮೂವರು ಆಟಗಾರರನ್ನು ಹೆಸರಿಸಿರುವ ಲಮೋ ಮತ್ತೊಬ್ಬ ಆಟಗಾರನ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

ಐಪಿಎಲ್ 8ನೇ ಆವೃತ್ತಿ ಆರಂಭದ ಸಮಯದಲ್ಲಿ, ಫಿಕ್ಸಿಂಗ್​ನಲ್ಲಿ ಭಾಗಿಯಾಗಿರುವ ಆಟಗಾರರ ಹೆಸರನ್ನು ಸುಪ್ರೀಂ ಕೋರ್ಟ್ ಬಹಿರಂಗ ಪಡಿಸಿದರೆ ಅದರಲ್ಲಿ ಸಿಎಸ್​ಕೆ ತಂಡದ ನಾಲ್ವರು ಆಟಗಾರರ ಹೆಸರು ಇರುತ್ತದೆ ಎಂದು ಟ್ವೀಟ್ ಮಾಡಿದ್ದರು. ಅದರೆ, ಈಗ ಮೂವರ ಹೆಸರನ್ನು ಮಾತ್ರ ಹೇಳಿದ್ದಾರೆ. ನಾಲ್ಕನೇ ಆಟಗಾರರ ಯಾರು ಎಂಬುದು ಇನ್ನೂ ತಿಳಿಯಬೇಕಿದೆ.

 Raina, Jadeja, Bravo bribing

ಟ್ವಿಟ್ಟರ್ ನಲ್ಲಿ ಲಲಿತ್ ಮೋದಿ ಸರಣಿ ಟ್ವೀಟ್ ಗಳು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕ, ನಾಯಕಿಯರ ನಿದ್ದೆಗೆಡಿಸಿದೆ. ಈಗ ಕ್ರಿಕೆಟರ್ಸ್ ಗಳ ಸರದಿ.

ಚೆನ್ನೈ ತಂಡದ ಪ್ರಮುಖ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ವೆಸ್ಟ್ ಇಂಡೀಸ್ ನ ಡ್ವಾಯ್ನೆ ಬ್ರಾವೋ ಅವರಿಗೆ ರಿಯಲ್ ಎಸ್ಟೇಟ್ ಉದ್ಯಮಿ ಕಮ್ ಬುಕ್ಕಿಯೊಬ್ಬ ಭಾರಿ ಮೊತ್ತ ಹಣ ನೀಡಿದ್ದಾನೆ. ಇವರೆಲ್ಲ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದಾರೆ ಎಂದು ಲಮೋ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಡೇವ್ ರಿಚರ್ಡ್ ಸನ್ ​ಅವರಿಗೆ ಬರೆದಿದ್ದ ಪತ್ರವನ್ನು ಮೋದಿ ಬಹಿರಂಗ ಪಡಿಸಿದ್ದಾರೆ. ಸಿಎಸ್​ಕೆ ತಂಡದ ಈ ಮೂರು ಆಟಗಾರರಿಗೆ ಬುಕ್ಕಿ ಬಾಬಾ ದಿವಾನ್​ನಿಂದ ಲಂಚದ ರೂಪದಲ್ಲಿ ಒಟ್ಟಾರೆ 20 ಕೋಟಿ ರೂ. ಮೊತ್ತದ ನಗದು ಮತ್ತು ಫ್ಲ್ಯಾಟ್​ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಪ್ರತಿ ಪಂದ್ಯಕ್ಕೂ 50-110 ಕೋಟಿ ರು ಬೆಟ್ಟಿಂಗ್ ನಡೆಸಲಾಗುತ್ತದೆ ಎಂದಿದ್ದಾರೆ.

ಬುಕ್ಕಿ ದಿವಾನ್ ಹಾಗೂ ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾಗೂ ಗೆಳೆತನವಿತ್ತು. ದಿವಾನ್ ಒಡೆತನದ ಎಚ್​ಡಿಐಎಲ್ ಕಂಪನಿಯಿಂದ ಜಡೇಜಾಗೆ ಬಾಂದ್ರಾದ ಫ್ಲ್ಯಾಟ್ ಸಿಕ್ಕಿದ್ದರೆ, ರೈನಾ ಗೆ ದೆಹಲಿಯ ವಸಂತ್ ವಿಹಾರ್ ಹಾಗೂ ನೋಯ್ಡಾದಲ್ಲಿ ಹೊಸ ಮನೆಗಳು ಸಿಕ್ಕಿದೆ. ಬ್ರಾವೋ ನಗದು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+