Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL: ಈ ಸ್ಫೋಟಕ ಬ್ಯಾಟರ್‌ಗೆ ಬಹು-ವರ್ಷದ ಒಪ್ಪಂದ ಆಫರ್ ನೀಡಿದ ರಾಜಸ್ಥಾನ ರಾಯಲ್ಸ್

ಉದ್ಘಾಟನಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಇಂಗ್ಲೆಂಡ್‌ನ ವೈಟ್-ಬಾಲ್ ನಾಯಕ ಹಾಗೂ ಸ್ಫೋಟಕ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಬಹು-ವರ್ಷಗಳ ಒಪ್ಪಂದದ ಆಫರ್ ನೀಡಲು ಬಯಸಿದೆ ಎಂದು ವರದಿಯಾಗಿದೆ.

SA20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ಮತ್ತು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಜೋಸ್ ಬಟ್ಲರ್ ನಿಸ್ಸಂದೇಹವಾಗಿ ಫ್ರಾಂಚೈಸಿ ಹಾಗೂ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿದ್ದಾರೆ.

IPL 2023

ಈ ಒಪ್ಪಂದದ ಹಿಂದಿನ ಕಾರಣವೆನೆಂದರೆ, ಬ್ಯಾಟ್‌ನೊಂದಿಗೆ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಜೋಸ್ ಬಟ್ಲರ್ ಅವರಲ್ಲಿದೆ. ಈಗಾಗಲೇ 2022ರ ಇಂಡಿಯನ್ ಪ್ರೀಮಿಯರ್ ಲೀಗ್ 2022 ವೇಳೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಈ ಅನುಭವ ಪಡೆದುಕೊಂಡಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಜೋಸ್ ಬಟ್ಲರ್‌ಗೆ ಬಹುಕೋಟಿ ಮೊತ್ತದ ಗುತ್ತಿಗೆ ನೀಡಲು ಗಂಭೀರವಾಗಿ ಯೋಚಿಸುತ್ತಿದೆ ಎಂದು ಹೇಳಿದೆ.

ಆದರೆ, ಭವಿಷ್ಯದಲ್ಲಿ ಪರಿಸ್ಥಿತಿಯು ಹೇಗೆ ಇರಲಿದೆ ಮತ್ತು ಜೋಸ್ ಬಟ್ಲರ್ ಒಪ್ಪಂದವನ್ನು ಒಪ್ಪಿಕೊಳ್ಳುತ್ತಾರಾ ಅಥವಾ ತಿರಸ್ಕರಿಸುತ್ತಾರಾ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

ಜೋಸ್ ಬಟ್ಲರ್ ಐಪಿಎಲ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. 2022ರ ಐಪಿಎಲ್ ಋತುವಿನಲ್ಲಿ 17 ಪಂದ್ಯಗಳಲ್ಲಿ 863 ರನ್ ಗಳಿಸಿ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು.

IPL 2023

ತಮ್ಮ ಏಕಾಂಗಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್‌ಗೆ ಮುನ್ನಡೆಸಿದರು. ಈವರೆಗಿನ 96 ಐಪಿಎಲ್ ಪಂದ್ಯಗಳಲ್ಲಿ ಜೋಸ್ ಬಟ್ಲರ್ 37.92ರ ಸರಾಸರಿಯಲ್ಲಿ 5 ಶತಕ ಮತ್ತು 19 ಅರ್ಧಶತಕಗಳೊಂದಿಗೆ 148.32 ಸ್ಟ್ರೈಕ್‌ರೇಟ್‌ನಲ್ಲಿ 3,223 ರನ್ ಬಾರಿಸಿದ್ದಾರೆ.

ಇಂಗ್ಲೆಂಡ್ ವೈಟ್-ಬಾಲ್ ತಂಡದ ನಾಯಕ 2018ರ ಐಪಿಎಲ್‌ನಿಂದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾರೆ ಹಾಗೂ ತಂಡದ ಪ್ರಮುಖ ಸದಸ್ಯನಾಗಿದ್ದಾರೆ.

ಜೋಸ್ ಬಟ್ಲರ್ ಈ ವರ್ಷ ಆರಂಭವಾದ ದಕ್ಷಿಣ ಆಫ್ರಿಕಾದ SA20 ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ಒಡೆತನದ ಪಾರ್ಲ್ ರಾಯಲ್ಸ್ ತಂಡಕ್ಕಾಗಿ ಆಡುತ್ತಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡವನ್ನೂ ಹೊಂದಿದೆ.

"ಇಂಗ್ಲೆಂಡ್ ಫ್ರಾಂಚೈಸಿಗಳು ಹೆಚ್ಚು ಬಲಿಷ್ಠವಾಗಿರುವುದರಿಂದ ತಮ್ಮ ಆಟಗಾರರ ಮೇಲೆ ಸ್ವಲ್ಪ ಮಟ್ಟಿನ ನಿಯಂತ್ರಣವನ್ನು ಇಟ್ಟುಕೊಳ್ಳುವ ಮಾರ್ಗಗಳನ್ನು ಹುಡುಕುತ್ತದೆ. ಆಟಗಾರರು ಬಹು-ವರ್ಷದ ಒಪ್ಪಂದಗಳನ್ನು ಪರಿಗಣಿಸುತ್ತಿದ್ದಾರೆ. ಜೊತೆಗೆ ಎಲ್ಲಾ ಮೂರು ಅಂತಾರಾಷ್ಟ್ರೀಯ ಸ್ವರೂಪಗಳಿಗೆ ಪಂದ್ಯದ ಶುಲ್ಕವನ್ನು ಹೆಚ್ಚಿಸುತ್ತಿದ್ದಾರೆ," ಎಂದು ಟೆಲಿಗ್ರಾಫ್ ವರದಿ ಹೇಳಿದೆ.

ಜೋಸ್ ಬಟ್ಲರ್ ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ 10,000 ಪೂರೈಸಿದ ಸಾಧನೆ ಮಾಡಿದರು. ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಈ ಸಾಧನೆ ಮಾಡಿದ ವಿಶ್ವದ 9ನೇ ಬ್ಯಾಟರ್ ಎನಿಸಿಕೊಂಡರು.

ಒಬ್ಬ ಆಟಗಾರನು ಫ್ರಾಂಚೈಸ್ ಸರ್ಕ್ಯೂಟ್‌ನಲ್ಲಿ ಮತ್ತು ಇಂಗ್ಲೆಂಡ್ ಸೆಂಟ್ರಲ್ ಒಪ್ಪಂದದಲ್ಲಿ ಬಹು-ವರ್ಷದ ಒಪ್ಪಂದವನ್ನು ಹೊಂದಲು ಸಾಧ್ಯವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರು ಮುಂಬೈ ಇಂಡಿಯನ್ಸ್ ಜೊತೆಗೆ ಇಂಗ್ಲೆಂಡ್ ಪರ ಆಡಲು ತನ್ನ ಫ್ರಾಂಚೈಸಿಯಿಂದ ಅನುಮತಿ ಪಡೆಯುವ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಡೈಲಿ ಮೇಲ್ ಈ ವರ್ಷದ ಆರಂಭದಲ್ಲಿ ವರದಿ ಮಾಡಿತ್ತು.

"ಇಂಗ್ಲೆಂಡ್‌ನ ಇತರ ಆಟಗಾರರಾದ ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್‌ಸ್ಟೋನ್ (ಪಂಜಾಬ್ ಕಿಂಗ್ಸ್) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಜೇಸನ್ ರಾಯ್ ಕೂಡ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಬಹುದು," ಎಂದು ವರದಿ ತಿಳಿಸಿದೆ.

Story first published: Thursday, June 29, 2023, 12:09 [IST]
Other articles published on Jun 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+