ಕೇಳ್ರಪ್ಪೋ ಕೇಳಿ ಮಲ್ಯ ಆರ್ ಸಿಬಿ ಮಾರುತ್ತಾರಂತೆ !
ಬೆಂಗಳೂರು, ಜು.02: ಮದ್ಯದ ದೊರೆ ವಿಜಯ್ ಮಲ್ಯ ಅವರ ಒಡೆತನ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಮ್ಮೆ ಹರಾಜಿನ ಅಖಾಡಕ್ಕೆ ಬಂದು ನಿಂತಿದೆ. ಇದೇನು ಹೊಸ ಸುದ್ದಿಯಲ್ಲ, ಆದರೆ, ಈ ಬಾರಿ ಜಿಂದಾಲ್ ಸಂಸ್ಥೆ ಒಡೆಯ ಸಜ್ಜನ್ ಅವರು ಖರೀದಿಸುತ್ತಾರಂತೆ, 2016ರಲ್ಲಿ ಫುಲ್ ಹೊಸ ಟೀಂ ಕಣಕ್ಕಿಳಿದೆ ಎಂಬ ಸುದ್ದಿ ಹಬ್ಬಿದೆ.
ಜಿಂದಾಲ್ ಸ್ಟೀಲ್ಸ್ ಸಂಸ್ಥೆಯ ಸಜ್ಜನ್ ಜಿಂದಾಲ್ ಅವರು ಈಗಾಗಲೇ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಖರೀದಿಸಿದ್ದಾರೆ. ಈಗ ಕ್ರಿಕೆಟ್ ನತ್ತ ಮುಖ ಮಾಡಿದ್ದು, ಮಲ್ಯ ಅವರ ಆರ್ ಸಿಬಿಯನ್ನು ಡಿಯಾಜಿಯೋ ಸಂಸ್ಥೆ ಮೂಲಕ 250 ರಿಂದ 300 ಕೋಟಿ ರು ನೀಡಿ ಪಡೆಯುತ್ತಾರೆ ಎಂಬ ಸುದ್ದಿ ಪಿಟಿಐಗೆ ಸಿಕ್ಕಿದೆ. [ಪಾರ್ಟ್ನರ್ ವಿರುದ್ಧ ತಿರುಗಿ ಬಿದ್ದ ವಿಜಯ್ ಮಲ್ಯ]
ಆರ್ ಸಿಬಿ ತಂಡ ವಿಜಯ್ ಮಲ್ಯ ಅವರ ಒಡೆತನದಲ್ಲಿದ್ದರೂ ಯುನೈಟೆಡ್ ಸ್ಪಿರೀಟ್ಸ್ ಲಿಮಿಟೆಡ್ (ಯುಎಸ್ ಎಲ್) ನ ಮಾಲೀಕತ್ವಕ್ಕೆ ಬರುತ್ತದೆ. ಈಗ ಯುಎಸ್ ಎಲ್ ಸಂಪೂರ್ಣವಾಗಿ ಡಿಯಾಜಿಯೋ ಕಂಪನಿ ವಶವಾಗಿದೆ. [ಸುಸ್ತಿದಾರನಾದರೂ ಸುಸ್ತಾಗದ ಮಲ್ಯ]
ಮಲ್ಯ ಅವರು ಬೋರ್ಡ್ ನಲ್ಲಿದ್ದರೂ ಬೆಲೆ ಕಳೆದುಕೊಂಡಿದ್ದಾರೆ. ಹಾಗಾಗಿ, ಐಪಿಎಲ್ ನಲ್ಲಿ 8 ಋತುಗಳನ್ನು ಕಂಡಿರುವ ಆರ್ ಸಿಬಿ ಟ್ವೆಂಟಿ ಕ್ರಿಕೆಟ್ ತಂಡವನ್ನು ಮಾರಾಟ ಮಾಡಲು ಡಿಯಾಜಿಯೋ ಸಿದ್ಧತೆ ನಡೆಸಿದೆ.

ಮತ್ತೊಮ್ಮೆ ಹರಾಜಿನ ಅಖಾಡಕ್ಕೆ ಆರ್ ಸಿಬಿ
ಐಪಿಎಲ್ ನಲ್ಲಿ ಅಂಬಾನಿ ಅವರ ಮುಂಬೈ ಇಂಡಿಯನ್ಸ್ ತಂಡ ಬಿಟ್ಟರೆ ಅತ್ಯಂತ ಹೆಚ್ಚು ಮೌಲ್ಯದ ತಂಡವಾಗಿರುವ ಬೆಂಗಳೂರು ತಂಡವನ್ನು 2008ರಲ್ಲಿ 10 ವರ್ಷ ಅವಧಿಗೆ ಮಲ್ಯ ಅವರು 111.6 ಮಿಲಿಯನ್ ಡಾಲರ್ ಮೊತ್ತಕ್ಕೆ ತಮ್ಮದಾಗಿಸಿಕೊಂಡಿದ್ದರು. ಈ ಹಿಂದೆ ಕೂಡಾ ಕಳೆದ ಮೂರು ಸೀಸನ್ ನಿಂದ ಆರ್ ಸಿಬಿ ಮಾರಾಟ, ಆರ್ ಸಿಬಿ ಷೇರುಗಳನ್ನು ಮಾರುವ ಬಗ್ಗೆ ಮಾತುಕತೆ ನಡೆಯುತ್ತಲೇ ಇದೆ.

ಎಂಟು ಸೀಸನ್ ನಲ್ಲಿ ಒಮ್ಮೆಯೂ ಕಪ್ ಎತ್ತಿಲ್ಲ
ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ರಂಥ ಜನಪ್ರಿಯ ಆಟಗಾರರನ್ನು ಹೊಂದಿದ್ದರೂ ಕಳೆದ ಎಂಟು ಸೀಸನ್ ನಲ್ಲಿ ಒಮ್ಮೆಯೂ ಕಪ್ ಎತ್ತಿಲ್ಲ.
2009, 2011ರಲ್ಲಿ ಐಪಿಎಲ್ ಫೈನಲ್ ಹಾಗೂ 2011ರ ಚಾಂಪಿಯನ್ಸ್ ಲೀಗ್ ಟಿ20 ರನ್ನರ್ ಅಪ್ ಆಗಿದ್ದು ಆರ್ ಸಿಬಿ ಸಾಧನೆ, ಕಳೆದ ಐಪಿಎಲ್ ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಐಪಿಎಲ್ ನಲ್ಲಿ ಎರಡನೇ ತಂಡ ಹರಾಜಿಗೆ
ಸಾಲದ ಸಮಸ್ಯೆಯಿಂದ ಐಪಿಎಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಮಾಲೀಕತ್ವ ಬದಲಾಗಿ ಸನ್ ರೈಸರ್ಸ್ ಹೈದರಾಬಾದ್ ಆಗಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ಆರ್ ಸಿಬಿ ಮಾಲೀಕತ್ವ ಬದಲಾವಣೆ ಸುದ್ದಿ ಬಂದಿದೆ. ಅದರೆ, ಎಂದಿನಂತೆ ವಿಜಯ್ ಮಲ್ಯ ಪಟ್ಟು ಬಿಡದೆ ಆಟ ಮುಂದುವರೆಸಿದ್ದಾರೆ.

ಆರ್ ಸಿಬಿ ಖರೀದಿಸಲು ಜಿಂದಾಲ್ ಸಿದ್ಧ
ಮಲ್ಯ ತಮ್ಮ ಹೆಮ್ಮೆಯ ತಂಡವನ್ನು ಬೇರೆಯವರಿಗೆ ಒಪ್ಪಿಸಲು ತಯಾರಿಲ್ಲ. ಏನಾಗುತ್ತೋ ಕಾದು ನೋಡಬೇಕಿದೆ.ಆರ್ ಸಿಬಿ ಖರೀದಿಸಲು ಸಜ್ಜನ್ ಜಿಂದಾಲ್ ಪುತ್ರ ಹಾಗೂ ಜೆಎಸ್ಡಬ್ಲ್ಯು ಸ್ಪೋರ್ಟ್ಸ್ ಮತ್ತು ಬಿಎಫ್ಸಿ ಸಿಇಒ ಪಾರ್ಥ್ ಜಿಂದಾಲ್ ಅವರಂತೂ ತುದಿಗಾಲಲ್ಲಿ ನಿಂತಿದ್ದಾರೆ. ಆರ್ಸಿಬಿ ತಂಡದ ಮಾಲೀಕತ್ವ ಹೊಂದಿರುವ ಯುಬಿ ಸಮೂಹದಲ್ಲಿ ಬ್ರಿಟನ್ನ ‘ಡಿಯಾಜಿಯೋ' ಅತ್ಯಧಿಕ ಷೇರು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications