Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Record ಭುವಿ 2 ವಿಕೆಟ್‌ ಪಡೆಯುತ್ತಲೇ ದಾಖಲೆ: ಈ ಸಾಧನೆ ಮಾಡಿದ ಎರಡನೇ ಬೌಲರ್

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಬ್ಯಾಟರ್‌ಗಳ ರನ್‌ ದಾಹಕ್ಕೆ ಬೌಲರ್‌ಗಳು ಕಡಿವಾಣ ಹಾಕಿ ಅಬ್ಬರಿಸಿದ್ದಾರೆ. ಇನ್ನು ಈ ಲೀಗ್‌ನಲ್ಲಿ ಬೌಲರ್‌ಗಳು ಸಹ ಆರ್ಭಟಿಸಿದ್ದಾರೆ. ಈ ಸಾಲಿನಲ್ಲಿ ಆರ್‌ಸಿಬಿ ತಂಡದ ವೇಗದ ಬೌಲರ್‌ ಭುವನೇಶ್ವರ್ ಕುಮಾರ್ ಸೇರುತ್ತಾರೆ.

ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾದ ಭರವಸೆಯ ಸ್ವಿಂಗ್ ಬೌಲರ್‌. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಶಿಸ್ತುಬದ್ಧ ದಾಳಿ ಸಂಘಟಿಸ ಬಲ್ಲರು. ಭುವಿ ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಬೌಲರ್‌. ಇವರ ಕೈಗೆ ನಾಯಕ ಚೆಂಡನ್ನು ನೀಡಿದರೆ ರನ್‌ಗಳಿಗೆ ಕಡಿವಾಣ ಬೀಳುತ್ತದೆ. ಮಿಡ್ಲ್‌ ಓವರ್‌ಗಳಲ್ಲೂ ಭುವಿ ಸ್ವಿಂಗ್ ಮೂಲಕ ಕಾಟ ನೀಡಬಲ್ಲರು. ಈ ಬಾರಿಯ ಐಪಿಎಲ್‌ನಲ್ಲಿ ಭುವನೇಶ್ವರ್ ಕುಮಾರ್ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

IPL Record

ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭುವಿಗೆ ಎರಡನೇ ಸ್ಥಾನ. ಇವರು ಪರ್ಫೆಕ್ಟ್‌ ಲೈನ್ ಹಾಗೂ ಲೆಂಥ್ ಮೂಲಕ ದಾಳಿ ಸಂಘಟಿಸ ಬಲ್ಲರು. ಮುಂಬರುವ ಐಪಿಎಲ್‌ನಲ್ಲಿ ಭುವಿ ಎರಡು ವಿಕೆಟ್‌ ಪಡೆಯುತ್ತಲೇ ದೊಡ್ಡ ದಾಖಲೆಯನ್ನು ಬರೆಯಲಿದ್ದಾರೆ. ಈ ಮೂಲಕ ಈ ದಾಖಲೆಯನ್ನು ಮಾಡಿದ ಎರಡನೇ ಬೌಲರ್‌ ಎಂಬ ಶ್ರೇಯ ತಮ್ಮದಾಗಿಸಿಕೊಳ್ಳಲಿದ್ದಾರೆ.

2 ವಿಕೆಟ್‌ ಪಡೆಯುತ್ತಲೇ ದಾಖಲೆ

ಸದ್ಯ ಆರ್‌ಸಿಬಿ ಪರ ವೇಗದ ಬೌಲಿಂಗ್ ನೊಗವನ್ನು ಹೊತ್ತಿರುವ ಭುವಿ, ಪುಣೆ ವಾರಿಯರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವೂ ಆಡಿ ಸೈ ಎನಿಸಿಕೊಂಡಿದ್ದಾರೆ. ಈ ವರೆಗೆ ಭುವಿ ಆಡಿದ 190 ಐಪಿಎಲ್‌ ಪಂದ್ಯಗಳಲ್ಲಿ 198 ವಿಕೆಟ್‌ ಕಬಳಿಸಿದ್ದಾರೆ. ಈ ಲೀಗ್‌ನಲ್ಲಿ 2 ವಿಕೆಟ್‌ ಪಡೆಯುತ್ತಲೇ ಇವರು 200 ವಿಕೆಟ್‌ ಪಡೆದ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಭುವನೇಶ್ವರ್ ಕುಮಾರ್ ಲೀಗ್‌ನಲ್ಲಿ 7.69ರ ಎಕಾನಮಿಯಲ್ಲಿ ದಾಳಿ ನಡೆಸಿದ್ದು, 2 ಬಾರಿ ನಾಲ್ಕು ವಿಕೆಟ್‌, 2 ಬಾರಿ ಐದು ವಿಕೆಟ್‌ ಪಡೆದಿದ್ದಾರೆ.

IPL Record

ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಯುಜುವೇಂದ್ರ ಚಾಹಲ್, 174 ಪಂದ್ಯ, 221 ವಿಕೆಟ್‌

ಭುವನೇಶ್ವರ್ ಕುಮಾರ್, 190 ಪಂದ್ಯ, 198 ವಿಕೆಟ್‌

ಸುನಿಲ್ ನರೈನ್, 189 ಪಂದ್ಯ, 192 ವಿಕೆಟ್‌

ಪಿಯೂಷ್ ಚಾವ್ಲಾ, 192 ಪಂದ್ಯ, 192 ವಿಕೆಟ್

ಆರ್‌.ಅಶ್ವಿನ್, 221 ಪಂದ್ಯ, 187 ವಿಕೆಟ್‌

ಭುವನೇಶ್ವರ್ ಕುಮಾರ್ ಈ ಬಾರಿಯ ಐಪಿಎಲ್‌ನಲ್ಲಿ ಬಿಗುವಿನ ದಾಳಿ ನಡೆಸಿ ಆರ್‌ಸಿಬಿ ಗೆಲುವಿನಲ್ಲಿ ಮಿಂಚಲು ಯೋಜನೆ ರೂಪಿಸಿಕೊಂಡಿದ್ದಾರೆ.

Story first published: Wednesday, March 25, 2026, 8:07 [IST]
Other articles published on Mar 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+