IPL Records: ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್ ಪಟ್ಟಿ; ಆರ್‌ಸಿಬಿ ಆಟಗಾರರ ಅಬ್ಬರ
ಕ್ರಿಕೆಟ್ ಮೈದಾನದಲ್ಲಿ ಬ್ಯಾಟರ್ ಒಬ್ಬ ಸ್ಫೋಟಕ ರೂಪವನ್ನು ತಾಳಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕೆಲವು ಪಂದ್ಯಗಳು ಸಾಕ್ಷಿಯಾಗುತ್ತವೆ. ಬೌಲರ್ ಯಾರೇ ಇದ್ದರೂ ಸಹ ಚೆಂಡನ್ನು ಪ್ರೇಕ್ಷಕರ ಗ್ಯಾಲರಿ ದರ್ಶನ ಮಾಡಿಸುವ ಬ್ಯಾಟರಗಳು ಇಲ್ಲಿ ಸ್ಟಾರ್‌ಗಿರಿ ಪಡೆಯುತ್ತಾರೆ. ಟಿ20 ಕ್ರಿಕೆಟ್ ಬಂದ ಬಳಿಕ ಬ್ಯಾಟರ್‌ಗಳ ಬ್ಯಾಟಿಂಗ್ ಧಾಟಿ ಸಂಪೂರ್ಣ ಬದಲಾಗಿದೆ. ಅದರಲ್ಲೂ ಐಪಿಎಲ್ ನಲ್ಲಂತೂ ಬೌಂಡರಿಗಿಂತ ಸಿಕ್ಸರ್‌ಗಳ ಮೂಲಕವೇ ಬ್ಯಾಟರ್‌ಗಳು ಚುರುಕು ಮುಟ್ಟಿಸುತ್ತಾರೆ.
ಮಗಿಲೆತ್ತರದ ಸಿಕ್ಸರ್‌ಗಳನ್ನು ಬಾರಿಸಿ ಬೌಲರ್‌ಗಳ ಲಯವನ್ನು ಹಾಳು ಮಾಡಬಲ್ಲ ಸಾಕಷ್ಟು ಬ್ಯಾಟರ್‌ಗಳು ಐಪಿಎಲ್ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಸಿಗುತ್ತಾರೆ. ಐಪಿಎಲ್‌ನ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಆರ್‌ಸಿಬಿ ಬ್ಯಾಟರ್ ಹವಾ
ಐಪಿಎಲ್‌ನಲ್ಲಿ ಸಿಕ್ಸರ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ ಕೀರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಅವರಿಗೆ ಸಲ್ಲುತ್ತದೆ. ಇವರು ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಇದರಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕೀರ್ತಿ ಸಹ ಹೊಂದಿದ್ದಾರೆ. ಇವರು 2013ರ ಐಪಿಎಲ್‌ನಲ್ಲಿ ಪುಣೇ ವಾರಿಯರ್ಸ್ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ 17 ಸಿಕ್ಸರ್ ಬಾರಿಸಿ ಮಿಂಚಿದ್ದಾರೆ.
ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಕೆಕೆಆರ್ ತಂಡದ ಸ್ಟಾರ್ ಆಟಗಾರ ಬ್ರೆಂಡನ್ ಮೆಕಲಂ ಸ್ಫೋಟಕ ಬ್ಯಾಟಿಂಗ್ ನಡೆಸಿ ಹೆಸರುವಾಸಿಯಾಗಿದ್ದಾರೆ. ಇವರು ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 13 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಈ ಪಟ್ಟಿಯಲ್ಲಿ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕಾಣಿಸಿಕೊಳ್ಳುತ್ತಾರೆ. ಇವರು ಐಪಿಎಲ್ 2012ರಲ್ಲಿ ಡೆಲ್ಲಿ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ 13 ಸಿಕ್ಸರ್‌ಗಳನ್ನು ಬಾರಿಸಿದ ಹಿರಿಮೆ ಹೊಂದಿದ್ದಾರೆ. ಗೇಲ್ 2015ರ ಐಪಿಎಲ್‌ನಲ್ಲೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಕಿಂಗ್ಸ್ ಇಲೆವೆನ್ ವಿರುದ್ಧ ಒಂದೇ ಇನಿಂಗ್ಸ್‌ನಲ್ಲಿ 12 ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಮಾಜಿ ಆಟಗಾರ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಕಾಣಿಸಿಕೊಳ್ಳುತ್ತಾರೆ. ಇವರು ಗುಜರಾತ್ ಲಯನ್ಸ್ ವಿರುದ್ಧ 2016ರ ಐಪಿಎಲ್‌ನಲ್ಲಿ 12 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.
ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿ ನೀಡಿ
- 1- ಕ್ರಿಸ್ ಗೇಲ್ (ಆರ್‌ಸಿಬಿ) - 17 ಸಿಕ್ಸರ್
- 2- ಬ್ರೆಂಡನ್ ಮೆಕಲಮ್ (ಕೆಕೆಆರ್) - 13 ಸಿಕ್ಸರ್
- 3- ಕ್ರಿಸ್ ಗೇಲ್ (ಆರ್‌ಸಿಬಿ) - 13 ಸಿಕ್ಸರ್
- 4- ಕ್ರಿಸ್ ಗೇಲ್ (ಆರ್‌ಸಿಬಿ) - 12 ಸಿಕ್ಸರ್
- 5- ಎಬಿ ಡಿವಿಲಿಯರ್ಸ್ (ಆರ್‌ಸಿಬಿ) - 12 ಸಿಕ್ಸರ್
- 6- ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) - 12 ಸಿಕ್ಸರ್
- 7- ಸನತ್ ಜಯಸೂರ್ಯ (ಮುಂಬೈ ಇಂಡಿಯನ್ಸ್) - 11 ಸಿಕ್ಸರ್
- 8- ಮುರಳಿ ವಿಜಯ್ (ಸಿಎಸ್‌ಕೆ) - 11 ಸಿಕ್ಸರ್
- 9- ಆಂಡ್ರೆ ರಸೆಲ್ (ಕೆಕೆಆರ್) - 11 ಸಿಕ್ಸರ್
- 10- ಕ್ರಿಸ್ ಗೇಲ್ (ಕಿಂಗ್ಸ್ XI ಪಂಜಾಬ್) - 11 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications