Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಐಪಿಎಲ್‌ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್: ಜೂನ್‌ 3ರಂದು ಫೈನಲ್‌ ಫೈಟ್‌

ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಮುಂದೂಡಲ್ಪಟ್ಟಿದ್ದ ಇಂಡಿಯನ್ ಪ್ರೀಮಿಯರ್‌ ಲೀಗ್ ಮತ್ತೆ ಆರಂಭವಾಗಲು ಮೂಹುರ್ತ ಫಿಕ್ಸ್ ಆಗಿದೆ. ಮೇ 8 ರಂದು ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್‌ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯದ ಬಳಿಕ ಐಪಿಎಲ್ ಟೂರ್ನಿಯನ್ನು ಒಂದು ವಾರಗಳ ವರೆಗೆ ಮುಂದೂಡಲಾಯಿತು. ಈಗ ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಆಗಿದೆ. ಐಪಿಎಲ್‌ ಮೇ 17 ರಂದು ಆರಂಭವಾಗಿ, ಜೂನ್‌ 3 ರವರೆಗೆ ನಡೆಯಲಿದೆ.

ಐಪಿಎಲ್‌ನ ಉಳಿದ ಪಂದ್ಯಗಳನ್ನು ಬೆಂಗಳೂರು, ಜೈಪುರ್, ಅಹಮದಾಬಾದ್, ಮುಂಬೈ, ಡೆಲ್ಲಿ, ಲಕ್ನೋ ಆರು ಸ್ಥಳಗಳಲ್ಲಿ ಆಡಿಸಲು ನಿರ್ಧರಿಸಲಾಗಿದೆ. ಒಟ್ಟಾರೆ 17 ಪಂದ್ಯಗಳು ನಡೆಯಲಿದ್ದು, ಇದರಲ್ಲಿ 2 ಡಬಲ್‌ ಹೆಡರ್ ಪಂದ್ಯಗಳು ಸಹ ನಡೆಯಲಿವೆ. ಡಬಲ್‌ ಹೆಡರ್‌ ಪಂದ್ಯಗಳು ಭಾನುವಾರ ನಡೆಯಲಿವೆ. ಇನ್ನು ಕ್ವಾಲಿಫೈಯರ್‌ 1 ಮೇ 29 ರಂದು, ಎಲಿಮಿನೇಟರ್‌ ಮೇ 30 ರಂದು, ಕ್ವಾಲಿಫೈಯರ್‌ 2 ಜೂನ್‌ 1 ರಂದು ನಡೆಸಲು ನಿರ್ಧರಿಸಲಾಗಿದ್ದು, ಫೈನಲ್‌ ಪಂದ್ಯ ಜೂನ್‌ 3 ರಂದು ನಡೆಯಲಿದೆ.

IPL Resumes on May 17 After Postponement Final to Be Held on June 3

ಒಟ್ಟು 17 ಪಂದ್ಯಗಳು

ಒಟ್ಟಾರೆ 17 ಪಂದ್ಯಗಳು ನಡೆಯಲಿವೆ. ಇದರಲ್ಲಿ 13 ಲೀಗ್‌ ಹಂತದ ಪಂದ್ಯಗಳು ಇನ್ನು ನಾಲ್ಕು ಪ್ಲೇ ಆಫ್‌ ಪಂದ್ಯಗಳು ಸೇರಿವೆ. ಇನ್ನು ಮೇ 8 ರಂದು ರದ್ದಾಗಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮೇ 24 ರಂದು ಜೈಪುರ್‌ದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈಗಿನ ವೇಳಾಪಟ್ಟಿಯಂತೆ ಮೇ 17 ರಂದು ಆರ್‌ಸಿಬಿ ಹಾಗೂ ಕೆಕೆಆರ್‌ ನಡುವೆ ಫೈಟ್‌ ಬೆಂಗಳೂರಿನಲ್ಲಿ ನಡೆಯಲಿದೆ.

2 ಡಬಲ್ ಡೆಕ್ಕರ್ ಪಂದ್ಯ

ಇನ್ನು ಟೂರ್ನಿಯ ಮೊದಲ ಡಬಲ್‌ ಡೆಕ್ಕರ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಮೇ 18 ರಂದು ಮಧ್ಯಾಹ್ನ ನಡೆಯಲಿದೆ. ಇದೇ ದಿನ ಡೆಲ್ಲಿ ಹಾಗೂ ಗುಜರಾತ್ ತಂಡಗಳ ನಡುವೆ ಕಾದಾಟ ಸಂಜೆ ನಡೆಯಲಿದೆ. ಇನ್ನು ಮೇ 25 ರಂದು ಗುಜರಾತ್ ಹಾಗೂ ಚೆನ್ನೈ ನಡುವಣ ಮಧ್ಯಾಹ್ನ 3.30ಕ್ಕೆ ಪಂದ್ಯಗಳು ನಡೆದರೆ, ಇದೇ ದಿನ ಎಸ್‌ಆರ್‌ಎಚ್‌ ಹಾಗೂ ಕೆಕೆಆರ್ ನಡುವೆ ಸಂಜೆ ಪಂದ್ಯ ನಡೆಯಲಿದೆ. ಐಪಿಎಲ್‌ನ ಕೊನೆಯ ಲೀಗ್‌ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ತಂಡಗಳು ಮೇ 27 ರಂದು ಕಾದಾಟ ನಡೆಸಲಿವೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಬದಲಾದ ವೇಳಾಪಟ್ಟಿಯ ಬಳಿಕ ಐಪಿಎಲ್‌ ಫೈನಲ್‌ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಒಂದು ವಾರದ ಅಂತರ ಇರಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ.

ಐಪಿಎಲ್‌ ವೇಳಾ ಪಟ್ಟಿ

ಕ್ರಮ
ಸಂಖ್ಯೆ
ದಿನಾಂಕ ಪಂದ್ಯ ಸಮಯ ಸ್ಥಳ
1 ಮೇ 17 ಆರ್‌ಸಿಬಿ vs ಕೆಕೆಆರ್‌ ಸಂಜೆ 7.30ಕ್ಕೆ ಬೆಂಗಳೂರು
2 ಮೇ 18 ಆರ್‌ಆರ್ vs ಪಂಜಾಬ್‌ ಮಧ್ಯಾಹ್ನ 3.30ಕ್ಕೆ ಜೈಪುರ್‌
3 ಮೇ 18 ಡೆಲ್ಲಿ vs ಗುಜರಾತ್ ಸಂಜೆ 7.30ಕ್ಕೆ ದೆಹಲಿ
4 ಮೇ 19 ಎಲ್‌ಎಸ್‌ಜಿ vs ಎಸ್‌ಆರ್‌ಎಚ್‌ ಸಂಜೆ 7.30ಕ್ಕೆ ಲಕ್ನೋ
5 ಮೇ 20 ಸಿಎಸ್‌ಕೆ vs ಆರ್‌ಆರ್‌ ಸಂಜೆ 7.30ಕ್ಕೆ ನವದೆಹಲಿ
6 ಮೇ 21 ಮುಂಬೈ vs ಡೆಲ್ಲಿ ಸಂಜೆ 7.30ಕ್ಕೆ ಮುಂಬೈ
7 ಮೇ 22 ಗುಜರಾತ್‌ vs ಎಲ್‌ಎಸ್‌ಜಿ ಸಂಜೆ 7.30ಕ್ಕೆ ಅಹಮದಾಬಾದ್
8 ಮೇ 23 ಆರ್‌ಸಿಬಿ vs ಎಸ್‌ಆರ್‌ಎಚ್‌ ಸಂಜೆ 7.30ಕ್ಕೆ ಬೆಂಗಳೂರು
9 ಮೇ 24 ಪಂಜಾಬ್‌ vs ಡೆಲ್ಲಿ ಸಂಜೆ 7.30ಕ್ಕೆ ಜೈಪುರ್‌
10 ಮೇ 25 ಗುಜರಾತ್‌ vs ಸಿಎಸ್‌ಕೆ ಮಧ್ಯಾಹ್ನ 3.30ಕ್ಕೆ ಅಹಮದಾಬಾದ್
11 ಮೇ 25 ಎಸ್ಆರ್‌ಎಚ್‌ vs ಕೆಕೆಆರ್‌ ಸಂಜೆ 7.30ಕ್ಕೆ ದೆಹಲಿ
12 ಮೇ 26 ಪಂಜಾಬ್‌ vs ಮುಂಬೈ ಸಂಜೆ 7.30ಕ್ಕೆ ಜೈಪುರ್‌
13 ಮೇ 27 ಎಲ್‌ಎಸ್‌ಜಿ vs ಕೆಕೆಆರ್ ಸಂಜೆ 7.30ಕ್ಕೆ ಲಕ್ನೋ
14 ಮೇ 29 ಕ್ವಾಲಿಫೈಯರ್‌ 1 ಸಂಜೆ 7.30ಕ್ಕೆ TBD
15 ಮೇ 30 ಎಲಿಮಿನೇಟರ್‌ ಸಂಜೆ 7.30ಕ್ಕೆ TBD
16 ಜೂ.1 ಕ್ವಾಲಿಫೈಯರ್‌ 2 ಸಂಜೆ 7.30ಕ್ಕೆ TBD
17 ಜೂ.3 ಫೈನಲ್‌ ಸಂಜೆ 7.30ಕ್ಕೆ TBD

Story first published: Monday, May 12, 2025, 23:35 [IST]
Other articles published on May 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+