
ಬೆಂಗಳೂರು, ಜನವರಿ 04: ಟೀಂ ಇಂಡಿಯಾದ ಮಾಜಿ ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಾರಾ? ರೋಹಿತ್ ಮತ್ತೊಮ್ಮೆ ಮುಂಬೈ ಕ್ಯಾಪ್ಟನ್ ಆಗಿ ಕಣಕ್ಕಿಳಿಯುತ್ತಾರಾ? ಯಾವ ಆಟಗಾರರು ಯಾವ ತಂಡದಲ್ಲಿ ಉಳಿಯುತ್ತಾರೆ? ಎಂಬ ಪ್ರಶ್ನೆಗೆ ಇಂದು ರಾತ್ರಿ ವೇಳೆಗೆ ಉತ್ತರ ಸಿಗಲಿದೆ.
ಚೆನ್ನೈ ಪರ ಧೋನಿ ಆಡಬಹುದು, ಥ್ರಿಲ್ ಆದ ಫ್ಯಾನ್ಸ್
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ ಹೊಸ ನಿಯಮಾವಳಿಗಳ ಪ್ರಕಾರ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಇಂದು ನಡೆಯಲಿದ್ದು, ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಸಂಜೆ 7ರ ನಂತರ ನೇರ ಪ್ರಸಾರವಿರುತ್ತದೆ.
ತಂಡದ ಬಳಿ ಇರಿಸಿಕೊಳ್ಳಬಹುದಾದ ಮೊತ್ತ, ಅಮಾನತುಗೊಂಡಿದ್ದ ತಂಡಗಳ ಮರು ಸೇರ್ಪಡೆ, ಆಟಗಾರರ ಸಂಬಳ ಇನ್ನಿತರ ವಿಷಯಗಳಲ್ಲಿ ಭಾರಿ ಬದಲಾವಣೆಯಾಗಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ತುತ್ತಾಗಿ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ಹೊರಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳು ಮತ್ತೊಮ್ಮೆ ಐಪಿಎಲ್ ಕಣಕ್ಕಿಳಿಯಲಿವೆ.
2018ರ ಐಪಿಎಲ್ ಯಲ್ಲಿ ಎರಡು ತಂಡಗಳು ಆಡಲಿದ್ದು, ಹಳೆ ತಂಡದಲ್ಲಿದ್ದ 5 ಆಟಗಾರರನ್ನು ಖರೀದಿ ಮಾಡಬಹುದು ಹಾಗೂ ಕೆಲ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ಮತ್ತೊಮ್ಮೆ ಬ್ಯಾಟ್ ಬೀಸಬಹುದಾಗಿದೆ.
* ಮೂರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
* ಹರಾಜಿಗೂ ಮೊದಲು 3 ಆಟಗಾರರು ಹಾಗೂ ನಂತರ ಹರಾಜಿನ ಸಮಯದಲ್ಲಿ ಉಳಿಸಿಕೊಳ್ಳಬಹುದಾಗಿದೆ.
* ಐಪಿಎಲ್ ನಲ್ಲಿ ಪ್ರತಿಯೊಂದು ತಂಡ 25 ಆಟಗಾರರನ್ನು ಖರೀದಿ ಮಾಡಬಹುದಾಗಿದೆ.
* ಈ ಪೈಕಿ 17 ಭಾರತೀಯರಾದರೆ 8 ವಿದೇಶಿ ಆಟಗಾರರಿಗೆ ಅವಕಾಶವಿರುತ್ತದೆ.
* ತಂಡದಲ್ಲಿ ಆಟಗಾರರ ಸಂಖ್ಯೆ: 25 ಆಟಗಾರರು (8 ಗರಿಷ್ಠ ವಿದೇಶಿ ಆಟಗಾರರು), ಕನಿಷ್ಟ 18 ಆಟಗಾರರು.ಆಟಗಾರರ
ಉಳಿಸಿಕೊಳ್ಳುವ ದರ ಪಟ್ಟಿ
ಆಯ್ಕೆ 1
3 ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ
ಸಂಬಳ ಮಿತಿ
ಆಟಗಾರ 1: 15 ಕೋಟಿ ರು
ಆಟಗಾರ 2 : 11 ಕೋಟಿ ರು
ಆಟಗಾರ 3: 7 ಕೋಟಿ ರು
ಆಯ್ಕೆ 2
2 ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ
ಸಂಬಳ ಮಿತಿ
ಆಟಗಾರ 1: 12.5 ಕೋಟಿ ರು
ಆಟಗಾರ 2 : 8.5 ಕೋಟಿ ರು
ಆಯ್ಕೆ 3
1 ಆಟಗಾರರನ್ನು ಹರಾಜಿಗೂ ಮುನ್ನ ಉಳಿಸಿಕೊಂಡರೆ
ಸಂಬಳ ಮಿತಿ
ಆಟಗಾರ 1: 12.5 ಕೋಟಿ ರು
ಮೊದಲ ಬಾರಿಗೆ ಆಡುವ ಆಟಗಾರರಿಗೆ 3 ಕೋಟಿ ಪ್ರತಿ ಆಟಗಾರರಂತೆ ನೀಡಬಹುದು.