For Quick Alerts
ALLOW NOTIFICATIONS  
For Daily Alerts
 

IPL Retention Shocker: ಹರಾಜು ಅಂಗಳ ಪ್ರವೇಶಿಸಿರುವ ಟಾಪ್‌ 10 ಸ್ಟಾರ್ ಪ್ಲೇಯರ್ಸ್‌

ಬಹು ನಿರೀಕ್ಷಿತ ಐಪಿಎಲ್‌ ರಿಟೆನ್ಷನ್‌ ಲೀಸ್‌ನ್ನು ಮಾಲೀಕರು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಸ್ಟಾರ್ ಆಟಗಾರರನ್ನು ಸಹ ಮಾಲೀಕರು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಲವು ವರ್ಷಗಳಿಂದ ಒಂದೇ ಫ್ರಾಂಚೈಸಿ ಪರ ಆಡುತ್ತಿದ್ದ, ಪ್ರತಿಭಾನ್ವಿತ ಆಟಗಾರರು ಈ ಬಾರಿ ನೂತನ ಫ್ರಾಂಚೈಸಿ ಹುಡುಕಾಟ ನಡೆಸಲಿದ್ದಾರೆ. ಈ ಬಾರಿಯೂ ಅಚ್ಚರಿ ಆಟಗಾರರ ಹೆಸರುಗಳು ಐಪಿಎಲ್‌ ಮಿನಿ ಹರಾಜಿನಲ್ಲಿ ಕೇಳಿ ಬರಲಿವೆ. ಹಾಗಿದ್ದರೆ ಮಾಲೀಕರ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿರುವ 10 ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಪರ ಕಳೆದ ಕೆಲವು ವರ್ಷಗಳಿಂದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ತುಂಬಿದ್ದ ವಿಂಡೀಸ್ ತಂಡದ ಸ್ಟೋಟಕ ಬ್ಯಾಟರ್ ಆಂಡ್ರಿ ರಸೆಲ್‌ (Andre Russell) ಅವರನ್ನು ಕೆಕೆಆರ್‌ ಮಿನಿ ಹರಾಜಿಗೆ ಬಿಟ್ಟಿದೆ. ರಸೆಲ್‌ ಮಧ್ಯಮ ಕ್ರಮಾಂಕದಲ್ಲಿ ಪಂದ್ಯದ ಗತಿಯನ್ನೇ ಬುಡಮೇಲು ಮಾಡುವ ಆಟಗಾರ. ಕಳೆದ ಆವೃತ್ತಿಯಲ್ಲಿ ರಸೆಲ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಫ್ರಾಂಚೈಸಿ ಇವರನ್ನು ಕೈ ಬಿಟ್ಟಿದೆ.

IPL Retention Shocker Russell Maxwell Conway Among 10 Big Players Released for Mini-Auction

ಕೆಕೆಆರ್‌ ತಂಡ ತನ್ನ ಮತ್ತೊಬ್ಬ ಸ್ಟಾರ್ ಆಟಗಾರ ವೆಂಕಟೇಶ್‌ ಅಯ್ಯರ್ (Venkatesh Iyer) ಅವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿದೆ. ಇವರಿಗೆ ಕಳೆದ ಬಾರಿಗೆ ಮೆಗಾ ಹರಾಜಿನಲ್ಲಿ 23.75 ಕೋಟಿ ರೂ. ನೀಡಿ ತಂಡಕ್ಕೆ ಬರಮಾಡಿಕೊಂಡಿತ್ತು. ಆದರೆ ಅಯ್ಯರ್‌ ಕಳೆದ ಆವೃತ್ತಿಯಲ್ಲಿ ಚೇತೋರಿ ಪ್ರದರ್ಶನ ನೀಡುವಲ್ಲಿ ಎಡವಿದ್ದರು. 2024ರ ಐಪಿಎಲ್‌ನಲ್ಲಿ ವೆಂಕಟೇಶ್‌ ಅಯ್ಯರ್‌ ಅಮೋಘ ಆಟ ಆಡಿದ್ದರಿಂದ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇದೇ ಆಟಕ್ಕೆ ಮನಸೋತು ಫ್ರಾಂಚೈಸಿ ದೊಡ್ಡ ಮೊತ್ತವನ್ನು ನೀಡಿ ಇವರಿಗೆ ಮಣೆ ಹಾಕಿತ್ತು. ಆದರೆ ವೆಂಕಟೇಶ್‌ ಅಯ್ಯರ್ ಬ್ಯಾಟ್ ಕಳೆದ ಆವೃತ್ತಿಯಲ್ಲಿ ಮೌನಕ್ಕೆ ಜಾರಿತ್ತು.

ಕ್ವಿಂಟನ್ ಡಿಕಾಕ್

ಅನ್ರಿಚ್ ನಾರ್ಟ್ಜೆ (Anrich Nortje) ಅವರನ್ನು ಕೆಕೆಆರ್‌ ಕಳೆದ ಬಾರಿಯ ಮೆಗಾ ಹರಾಜಿನಲ್ಲಿ 6.50 ಕೋಟಿ ನೀಡಿ ಖರೀದಿ ಮಾಡಿತ್ತು. ಇವರು ತಮ್ಮ ಬಿಗುವಿನ ದಾಳಿಗೆ ಹೆಸರುವಾಸಿಯಾದ ಆಟಗಾರ. ಆದರೆ ಇವರು ಸಹ ಈ ಬಾರಿ ಮತ್ತೊಮ್ಮೆ ಹರಾಜು ಅಂಗಳದಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇದೇ ತಂಡ ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರನ್ನು ಕೈ ಬಿಟ್ಟಿದೆ.

ನ್ಯೂಜಿಲೆಂಡ್ ಆಟಗಾರರಿಗೆ ಗೇಟ್ ಪಾಸ್

ಸೌದಿಯಲ್ಲಿ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಸಹ ನ್ಯೂಜಿಲೆಂಡ್ ತಂಡದ ಟಾಪ್‌ ಆರ್ಡರ್ ಬ್ಯಾಟರ್ ಡೇನ್ ಕಾನ್ವೆ (Devon Conway) ಅವರಿಗೆ 6.25 ಕೋಟಿ ರೂ. ನೀಡಿ ತಂಡಕ್ಕೆ ಬರ ಮಾಡಿಕೊಂಡಿತ್ತು. ಆದರೆ ಇವರು ಕಳೆದ ಆವೃತ್ತಿಯಲ್ಲಿ ಕೇವಲ 6 ಪಂದ್ಯಗಳನ್ನು ಆಡಿ 26ರ ಸರಾಸರಿಯಲ್ಲಿ 156 ರನ್‌ ಕಲೆ ಹಾಕಿದರು. ಇದರಲ್ಲಿ 2 ಅರ್ಧಶತಕ ಸೇರಿವೆ. ತಂಡ ಇವರಿಗೆ ನೀಡಿದ ಜವಾಬ್ದಾರಿಯನ್ನು ಮರೆತಿದ್ದರಿಂದ ಇವರನ್ನು ತಂಡ ರಿಲೀಸ್ ಮಾಡಿದೆ.

ಕಳೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (Rachin Ravindra) ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದವು. ಆದರೆ ಇವರಿಗೆ ಚೆನ್ನೈ 4 ಕೋಟಿ ನೀಡಿ ಖರೀದಿಸಿತ್ತು. ಆದರೆ ಇವರೂ ಸಹ ಸ್ಥಿರ ಆಟವನ್ನು ಆಡದೇ ಇದ್ದಾಗ ತಂಡ ಇವರನ್ನು ಹರಾಜು ಅಂಗಳಕ್ಕೆ ಬಿಟ್ಟಿದೆ.

ಚೆನ್ನೈ ತಂಡ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಮಹೇಶ್ ಪತಿರಾಣಾ (Matheesa Pathirana) ಹೆಸರು ಸಹ ಸೇರಿದೆ. ಇವರನ್ನು ಧೋನಿ ತಂಡದಲ್ಲಿ ಇರಿಸಿಕೊಂಡಿದ್ದರು. ಆದರೆ ಇವರು ಸಹ ವಿಕೆಟ್‌ ಬೇಟೆಯಲ್ಲಿ ಹಿಂದೆ ಬಿದ್ದಿದ್ದರು.

ಹೊಸ ಮಾಲೀಕರ ಹುಡುಕಾಟದಲ್ಲಿ ಸ್ಟಾರ್ಸ್‌

ಪಂಜಾಬ್ ಕಿಂಗ್ಸ್ ತಂಡ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಈ ತಂಡದ ಸ್ಟಾರ್ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಮಾತ್ರ ಮಂಕಾಗಿದ್ದರು. ಅಲ್ಲದೆ ಐಪಿಎಲ್‌ ಮಧ್ಯದಲ್ಲಿ ಇವರು ತಾವು ಅಲಭ್ಯರಾಗಿರುವುದಾಗಿ ತಿಳಿಸಿದ್ದರಿಂದ ತಂಡಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಅಲ್ಲದೆ ಇವರ ಫಾರ್ಮ್‌ ಹೇಳಿಕೊಳ್ಳುವಂತೆ ಇರಲಿಲ್ಲವಾಗಿದ್ದರಿಂದ ತಂಡ ಕೈ ಬಿಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಕಳೆದ ಬಾರಿಯ ಮೆಗಾ ಹರಾಜಿಗೆ ರಿಟೇನ್‌ ಮಾಡಿದ ಆಟಗಾರರ ಪಟ್ಟಿಯಲ್ಲಿ ಜೇಕ್ ಫ್ರೇಸರ್-ಮೆಕ್‌ಗುರ್ಕ್ (Jake Fraser-McGurk) ಪ್ರಮುಖರು. ಆದರೆ ಇವರು ಕಳೆದ ಆವೃತ್ತಿಯಲ್ಲಿ ಧಮಾಕೆದಾರ್ ಪ್ರದರ್ಶನ ನೀಡುವಲ್ಲಿ ಎಡವಿದ್ದರು.

ಮೆಗಾ ಹರಾಜಿನಲ್ಲಿ ಆರ್‌ಸಿಬಿ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರಿಗೂ ಸಹ ದೊಡ್ಡ ಮೊತ್ತವನ್ನು ನೀಡಿ ತಂಡಕ್ಕೆ ಬರ ಮಾಡಿಕೊಂಡಿತ್ತು. ಆದರೆ ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮಯೋಚಿತ ಆಟದ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಇವರನ್ನು ರಿಲೀಸ್ ಮಾಡಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಅದರಂತೆ ಈ ಬಾರಿ ಇವರು ಹರಾಜು ಅಂಗಳಕ್ಕೆ ನೂತನ ಮಾಲೀಕರ ಹುಡುಕಾಟ ನಡೆಸಲು ಇಳಿಯಲಿದ್ದಾರೆ.

Story first published: Saturday, November 15, 2025, 22:54 [IST]
Other articles published on Nov 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+