Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs KKR IPL 2025: ಇಂದಿನಿಂದ ಮತ್ತೆ ಐಪಿಎಲ್ ಆರಂಭ: ಆರ್‌ಸಿಬಿ ಸವಾಲು ಎದುರಿಸಲಿದೆ ಕೆಕೆಆರ್‌

ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗ ಒಂದು ವಾರಗಳ ಕಾಲ ರದ್ದಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಶನಿವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುವುದಲ್ಲದೇ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ. ಕೆಕೆಆರ್‌ಗೂ ಈ ಪಂದ್ಯ ಮಹತ್ವದಾಗಿದೆ.

ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಶನಿವಾರ ಮಳೆ ಬೀಳುವ ಸಾಧ್ಯತೆ ಇದ್ದು, ಪಂದ್ಯಕ್ಕೆ ಪೆಟ್ಟು ನೀಡಲಿದೆ. ಇನ್ನು ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದಾಗಿದೆ. ಆರ್‌ಸಿಬಿ ಈ ಪಂದ್ಯವನ್ನು ಗೆದ್ದ ಪ್ಲೇ ಆಫ್‌ಗೆ ಪ್ರವೇಶ ಪಡೆಯುವ ಕನಸಲ್ಲಿದ್ದರೆ, ಕೆಕೆಆರ್‌ ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಸೆಯನ್ನು ಹೊಂದಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ನೆರವಾಗುತ್ತದೆ. ಆದರೆ ಈ ಅಂಗಳದಲ್ಲಿ ಈ ಆವೃತ್ತಿಯಲ್ಲಿ ಒಮ್ಮೆಯೂ 200ಕ್ಕೂ ಹೆಚ್ಚು ರನ್‌ಗಳು ದಾಖಲಾಗಿಲ್ಲ.

IPL Returns with High-Stakes RCB vs KKR Showdown in Bengaluru

ವಿರಾಟ್‌ ಆಕರ್ಷಣೆ

ಇತ್ತೀಚಿಗೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ವಿರಾಟ್‌ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿವೆ. ಇವರು ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು, ವಿಶ್ವಾಸ ಮೂಡಿಸಿದ್ದಾರೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ 6 ರನ್‌ ಬಾರಿಸಿದ್ದೇ ಆದಲ್ಲಿ ಮತ್ತೆ ಆರೆಂಜ್‌ ಕ್ಯಾಪ್‌ ತಮ್ಮ ಮುಡಿಗೇರಿಸಿಕೊಳ್ಳಬಹದು. ವಿರಾಟ್‌ ಅವರ ಬಿಗ್ ಇನಿಂಗ್ಸ್‌ ನೋಡಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ.

ಗಾಯಕ್ಕೆ ತುತ್ತಾಗಿರುವ ದೇವದತ್ ಪಡಿಕ್ಕಲ್ ಬದಲಿಗೆ ಮಯಾಂಕ್‌ ಅಗರ್‌ವಾಲ್‌ ತಂಡವನ್ನು ಸೇರಿಕೊಂಡಿದ್ದಾರೆ. ಐಪಿಎಲ್‌ ರದ್ದಾಗಿದ್ದರಿಂದ ಮನೆ ಹಾದಿ ಹಿಡಿದಿದ್ದ ವಿದೇಶಿ ಆಟಗಾರರು ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಆರ್‌ಸಿಬಿ ಪರ ಫಿಲ್‌ ಸಾಲ್ಟ್‌ ಮತ್ತೆ ಕಣಕ್ಕೆ ಇಳಿಯುವ ವಿಶ್ವಾಸದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದಾರ್, ಜಿತೇಶ್ ಶರ್ಮಾ ರನ್‌ ಕಲೆ ಹಾಕಬೇಕಿದೆ. ಇನ್ನು ಟೀಮ್ ಡೇವಿಡ್‌, ರೋಮಾರಿಯೊ ಶೆಫರಡ್‌ ರನ್‌ ವೇಗಕ್ಕೆ ಚುರುಕು ಮುಟ್ಟಿಸುವ ಆಟಗಾರರು.

IPL Returns with High-Stakes RCB vs KKR Showdown in Bengaluru

ವೇಗಿಗಳೇ ಆಧಾರ

ಆರ್‌ಸಿಬಿ ತಂಡದ ಜೋಶ್‌ ಹ್ಯಾಜಲ್‌ವುಡ್, ಭುವನೇಶ್ವರ್‌ ಕುಮಾರ್‌, ಯಶ್ ದಯಾಳ್‌ ಉತ್ತಮ ಲಯದಲ್ಲಿದ್ದು ತಂಡಕ್ಕೆ ಆಧಾರವಾಗಿದ್ದಾರೆ. ಇನ್ನು ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ ಜೋಡಿ ಸ್ಪಿನ್ ಮೋಡಿ ನಡೆಸಬೇಕಿದೆ. ಅಂದಾಗ ಗೆಲುವು ಹತ್ತಿರವಾಗುತ್ತದೆ.

ಗೆಲುವೊಂದೆ ಟಾರ್ಗೆಟ್‌

ಕೆಕೆಆರ್‌ 12 ಪಂದ್ಯಗಳಲ್ಲಿ 11 ಅಂಕಗಳನ್ನು ಕಲೆ ಹಾಕಿದ್ದು, ಮುಂದಿನ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪ್ಲೇ ಆಫ್‌ ಆಎ ಜೀವಂತವಾಗುತ್ತದೆ. ಆದರೆ ಈ ವೇಳೆ ಕೆಕೆಆರ್‌ ಉಳಿದ ತಂಡಗಳ ಫಲಿತಾಂಶದ ಮೇಲೆ ಚಿತ್ತ ನೆಡಬೇಕಾಗುತ್ತದೆ. ಕೆಕೆಆರ್ ತಂಡದ ಅಜಿಂಕ್ಯ ರಹಾನೆ ಉತ್ತಮ ಲಯದಲ್ಲಿದ್ದಾರೆ. ಇವರಿಗೆ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ. ಇನ್ನು ಬೌಲರ್‌ಗಳು ಬಿಗುವಿನ ದಾಳಿ ನಡೆಸಿದರೆ 2 ಅಂಕ ಕಲೆ ಹಾಕುವ ಆಸೆ ಫಲಿಸುತ್ತದೆ.

Story first published: Saturday, May 17, 2025, 9:00 [IST]
Other articles published on May 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+