ಎಬಿಡಿ ದಾಖಲೆಯ ಮೇಲೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣ್ಣು
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಲೀಗ್‌ನಲ್ಲಿ ಅಬ್ಬರಿಸೋಕೆ ಅನುಭವಿ ಆಟಗಾರರು ಸಿದ್ಧತೆ ನಡೆಸಿದ್ದಾರೆ. ಯುವಕರಿಗೆ ಸವಾಲು ಒಡ್ಡಲು ಟೀಮ್ ಇಂಡಿಯಾದ ಅನುಭವಿ ಆಟಗಾರರು ತಯಾರಿ ನಡೆಸಿದ್ದಾರೆ. ಭಾರತ ತಂಡವನ್ನು ದಶಕಗಳ ಕಾಲ ಪ್ರತಿನಿಧಿಸಿರುವ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ತಮ್ಮ ತಮ್ಮ ಫ್ರಾಂಚೈಸಿಗಳ ಪರ ಅಖಾಡಕ್ಕೆ ಇಳಿಯಲಿದ್ದಾರೆ. ಈ ವೇಳೆ ಈ ಮೂವರ ಆಟಗಾರರ ಕಣ್ಣು ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ಅವರ ದಾಖಲೆ ಮೇಲೆ ನೆಟ್ಟಿವೆ.
ಹಲವು ವರ್ಷಗಳಿಂದ ಈ ದಾಖಲೆ ಸೇಫ್ ಆಗಿತ್ತು. ಆದರೆ ಈ ಬಾರಿ ಎಬಿಡಿ ಅವರ ದಾಖಲೆಗೆ ಅಪಾಯ ಕಾದಿದೆ. ಐಪಿಎಲ್‌ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಹೆಸರುವಾಸಿಯಾಗಿರುವ ಎಬಿಡಿ, ಆರ್‌ಸಿಬಿ ಪರ ಮಿಂಚಿರುವ ಆಟಗಾರ. ಇವರ ಆಟವನ್ನು ಕಂಡು ಅಭಿಮಾನಿಗಳು ಮನಸೋತಿದ್ದರು. ಇವರು ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಈ ಬಾರಿಯ ಲೀಗ್‌ನಲ್ಲಿ ಅವರ ದೊಡ್ಡ ದಾಖಲೆಯ ಮೇಲೆ ಮೂವರು ಆಟಗಾರರು ಕಣ್ಣು ನೆಟ್ಟಿದ್ದಾರೆ. ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಎಬಿಡಿ ಈಗಾಗಲೇ ಐಪಿಎಲ್‌ಗೆ ಗುಡ್‌ಬೈ ಹೇಳಿದ್ದಾರೆ. ಇವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಆಟಗಾರ. ಇವರು ಒಟ್ಟು 184 ಪಂದ್ಯಗಳಲ್ಲಿ 25 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ನಿವೃತ್ತರಾಗಿ ಐದು ವರ್ಷಗಳೇ ಕಳೆದಿವೆ. ಆದರೂ ಸಹ ಈ ದಾಖಲೆ ಅಳಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಈ ದಾಖಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಇನ್ನು ಲೀಗ್‌ನಲ್ಲಿ 25ಕ್ಕೂ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎಂಬ ಹೆಗ್ಗಳಿಕೆ ಎಬಿಡಿ ಹೆಸರಿನಲ್ಲಿದೆ.
ಎಬಿಡಿ ಹೆಸರಿನಲ್ಲಿದೆ ದೊಡ್ಡ ದಾಖಲೆ
ಐಪಿಎಲ್ 2026 ರಲ್ಲಿ ಈ ದಾಖಲೆಯನ್ನು ಮುರಿಯಬಹುದು. ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಸಹ 22 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರೂ, ಅವರು ಈಗಾಗಲೇ ಆಟದಿಂದ ನಿವೃತ್ತಿ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಒಟ್ಟು 21, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ 19 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಆಟಗಾರರು ಈ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಈ ದಾಖಲೆಯನ್ನು ಅಳಿಸಬಹುದು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರರು
ಎಬಿ ಡಿವಿಲಿಯರ್ಸ್, 25
ಕ್ರಿಸ್ ಗೇಲ್, 22
ರೋಹಿತ್ ಶರ್ಮಾ, 21
ವಿರಾಟ್ ಕೊಹ್ಲಿ, 19
ಡೇವಿಡ್ ವಾರ್ನರ್, 18
ಎಂಎಸ್ ಧೋನಿ, 19
ವಿರಾಟ್, ರೋಹಿತ್‌ಗೆ ಬೆಸ್ಟ್ ಚಾನ್ಸ್
ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇನ್ನು ಐಪಿಎಲ್ ಆಡುತ್ತಿದ್ದು, ಮುಂದಿನ ಆವೃತ್ತಿಯಲ್ಲೂ ಈ ಆಟಗಾರರು ಆಡಬಹುದಾಗಿದೆ. ಅಲ್ಲದೆ ಇದೇ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿದಲ್ಲಿ ಈ ದಾಖಲೆಯನ್ನು ಅಳಿಸಿ ಹಾಕಬಹುದು. ಎಬಿಡಿ ದಾಖಲೆಯನ್ನು ಯಾರು ಅಳಿಸಿ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
19ನೇ ಆವೃತ್ತಿಯ ಐಪಿಎಲ್ ಮಾರ್ಚ್ 28 ರಿಂದ ಆರಂಭವಾಗುತ್ತದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ತಂಡಗಳು ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications