Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL: ಇಲ್ಲದ ರನ್‌ ಕದಿಯಲು ಹೋಗಿ ಶತಕದ ಅಂಚಿನಲ್ಲಿ ರನೌಟ್ ಆದ ಟಾಪ್ 5 ಬ್ಯಾಟರ್ಸ್‌

ಐಪಿಎಲ್‌ನಲ್ಲಿ ಈ ಬಾರಿ ಯುವ ಆಟಗಾರರು ಹಾಗೂ ಅನುಭವಿ ಆಟಗಾರರು ಅಬ್ಬರಿಸುತ್ತಿದ್ದಾರೆ. ಈ ಮೆಗಾ ಲೀಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಹಲವು ಆಟಗಾರರು ಶತಕ ಬಾರಿಸಿದ್ದಾರೆ. ಆದರೆ ಈ ವರದಿಯಲ್ಲಿ ಶತಕ ಬಾರಿಸುವ ಭರದಲ್ಲಿ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಐಪಿಎಲ್‌ನಲ್ಲಿ ಶತಕ ಬಾರಿಸುವ ಆಸೆ ಅದೆಷ್ಟೋ ಆಟಗಾರರದ್ದಾಗಿರುತ್ತದೆ. ಇನ್ನು ಮೂರಂಕಿಯನ್ನು ಒಬ್ಬ ಬ್ಯಾಟರ್‌ ಪದೇ ಪದೇ ಮಾಡಿದರೆ, ಅದನ್ನು ದೊಡ್ಡ ಸಾಧನೆ ಎಂದು ಪರಿಗಣಿಸಾಗುತ್ತದೆ. 19 ವರ್ಷದ ಲೀಗ್‌ ಇತಿಹಾಸದಲ್ಲಿ ಹಲವು ಬಾರಿ ಬ್ಯಾಟರ್‌ಗಳು ಮೂರಂಕಿ ಮುಟ್ಟುವ ಮುನ್ನವೇ ರನೌಟ್‌ಗೆ ಬಲಿಯಾಗಿದ್ದಾರೆ. ಇನ್ನು ಈ ಲೀಗ್‌ನಲ್ಲಿ ಒಬ್ಬನೇ ಪ್ಲೇಯರ್‌ ಶತಕದ ಅಂಚಿನಲ್ಲಿ ಎರಡು ಬಾರಿ ರನ್‌ಔಟ್‌ಗೂ ಗುರಿಯಾಗಿದ್ದಾರೆ.

IPL

ಮನ್ವಿಂದರ್ ಬಿಸ್ಲಾ

ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವ ಹೆಸರು ಕೆಕೆಆರ್‌ ತಂಡದ ಮನ್ವಿಂದರ್ ಬಿಸ್ಲಾ. ಇವರು 2013ರಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧದ 92 ರನ್‌ ಬಾರಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ರನೌಟ್‌ಗೆ ಬಲಿಯಾಗಿದ್ದರು.

ವಿರಾಟ್ ಕೊಹ್ಲಿ

ಈ ಸಾಲಿನಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸಹ ಕಾಣಿಸಿಕೊಳ್ಳುತ್ತಾರೆ. ಇವರು 2013ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 99 ರನ್‌ ಬಾರಿಸಿ ಔಟ್ ಆಗಿದ್ದರು.

ಕ್ರಿಸ್‌ ಗೇಲ್‌

ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಆಟಗಾರ ಕ್ರಿಸ್‌ ಗೇಲ್‌ ಅವರು ಸಹ ಮೂರಂಕಿ ಮುಟ್ಟುವ ಮುನ್ನವೇ 2015ರಲ್ಲಿ ರನೌಟ್‌ ಆಗಿದ್ದಾರೆ. ಇವರು ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ 96 ರನ್‌ ಬಾರಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ರನ್ ಔಟ್ ಆಗಿದ್ದರು.

ಮಿಚೆಲ್ ಮಾರ್ಷ್

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಮಿಚೆಲ್ ಮಾರ್ಷ್. ಇವರು 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 90 ರನ್‌ ಬಾರಿಸಿ ರನೌಟ್‌ ಆಗಿದ್ದರು. ಈ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿದ್ದರು. 19ನೇ ಆವೃತ್ತಿಯಲ್ಲೇ ಮಿಚೆಲ್‌ ಮಾರ್ಷ್ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 96 ರನ್‌ಗಳಿಗೆ ರನೌಟ್‌ಗೆ ಬಲಿಯಾದರು. ಈ ಮೂಲಕ ಮಿಚೆಲ್ ಮಾರ್ಷ್ ಒಂದೇ ಆವೃತ್ತಿಯಲ್ಲಿ ಶತಕದ ಅಂಚಿನಲ್ಲಿ ಎರಡು ಬಾರಿ ರನೌಟ್ ಆದ ಬೇಡವಾದ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಂಡರು.

Story first published: Thursday, May 21, 2026, 17:28 [IST]
Other articles published on May 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+