ದ.ಆಫ್ರಿಕಾ ಟಿ20 ಲೀಗ್‌ನಲ್ಲಿ ತಂಡ ಖರೀದಿಸಿದ ಚೆನ್ನೈ, ಮುಂಬೈ & ಇತರೆ 4 ಐಪಿಎಲ್ ತಂಡಗಳ ಮಾಲೀಕರು

ಕ್ರಿಕೆಟ್ ಜಗತ್ತಿನಲ್ಲಿ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2007ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಯಶಸ್ವಿಯಾದ ಬೆನ್ನಲ್ಲೇ 2008ರಲ್ಲಿ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಯಿತು. ಹೀಗೆ ಅದೇ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಫ್ರಾಂಚೈಸಿ ಲೀಗ್ ಪ್ರವೃತ್ತಿ ಶುರುವಾಗಿತ್ತು ಹಾಗೂ ಆ ಪ್ರವೃತ್ತಿ ನಂತರದ ದಿನಗಳಲ್ಲಿ ಇತರೆ ದೇಶಗಳ ಕ್ರಿಕೆಟ್ ಬೋರ್ಡ್‌ಗಳಿಗೆ ಮಾದರಿ ಕೂಡ ಮಾದರಿಯಾಯಿತು.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಪ್ರೇರೇಪಿತರಾಗಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್, ವೆಸ್ಟ್ ಇಂಡೀಸ್‌ನ ಕೆರೆಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನದ ಪಾಕಿಸ್ತಾನ ಸೂಪರ್ ಲೀಗ್ ಹಾಗೂ ಇತರೆ ದೇಶಗಳ ಹಲವು ಲೀಗ್‌ಗಳು ಆರಂಭವಾದ ಉದಾಹರಣೆಗಳು ನಮ್ಮೆಲ್ಲರ ಮುಂದೆಯೇ ಇವೆ. ಈ ಸಾಲಿಗೆ ಇದೀಗ ದಕ್ಷಿಣ ಆಫ್ರಿಕಾ ಆರಂಭಿಸಲಿರುವ ನೂತನ ಟಿ ಟ್ವೆಂಟಿ ಲೀಗ್ ಕೂಡ ಸೇರ್ಪಡೆಯಾಗುತ್ತಿದ್ದು, ಮುಂದಿನ ವರ್ಷ ಈ ಟೂರ್ನಿ ಶುರುವಾಗಲಿದೆ.
ದಕ್ಷಿಣ ಆಫ್ರಿಕಾದ ಈ ನೂತನ ಟಿ ಟ್ವೆಂಟಿ ಲೀಗ್ ಕುರಿತಾಗಿ ಈಗಾಗಲೇ ತಂಡಗಳ ಹರಾಜು ಕಳೆದ ಬುಧವಾರ ( ಜುಲೈ 13 ) ನಡೆದಿದೆ ಎಂದು ವರದಿಯಾಗಿದೆ. ಈ ತಂಡಗಳ ಹರಾಜಿನಲ್ಲಿ ಒಂಬತ್ತು ತಂಡಗಳು ಹರಾಜಾಗಿದ್ದು, ಈ ಪೈಕಿ ಆರು ತಂಡಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡಗಳನ್ನು ಖರೀದಿಸಿರುವ ಮಾಲೀಕರೇ ಖರೀದಿಸಿವೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಹಾಗಿದ್ದರೆ ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಲೀಗ್‌ನ ತಂಡಗಳ ಹರಾಜಿನಲ್ಲಿ ತಂಡಗಳನ್ನು ಖರೀದಿಸಿರುವ ಐಪಿಎಲ್ ಫ್ರಾಂಚೈಸಿಗಳ ಆ ಆರು ಮಾಲೀಕರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ.

ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್
ವರದಿಯ ಪ್ರಕಾರ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿದೊಡ್ಡ ಮಟ್ಟದ ಯಶಸ್ಸು ಸಾಧಿಸಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಾಲೀಕರು ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ತಂಡಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಮಾಲೀಕರು ಕೇಪ್ ಟೌನ್ ಫ್ರಾಂಚೈಸಿಯನ್ನು ಖರೀದಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಜೋಹಾನ್ಸ್‌ಬರ್ಗ್ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಅಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್
ಇಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯನ್ನು ಖರೀದಿಸಿರುವ ಜಿಂದಾಲ್ ಸಂಸ್ಥೆಯ ಮಾಲೀಕರು ದಕ್ಷಿಣ ಆಫ್ರಿಕಾದ ಟಿ ಟ್ವೆಂಟಿ ಲೀಗ್‌ನಲ್ಲಿ ಸೆಂಚುರಿಯನ್ ತಂಡವನ್ನು ಖರೀದಿಸಿದ್ದು, ಆ ತಂಡಕ್ಕೆ ಪ್ರಿಟೋರಿಯಾ ಕ್ಯಾಪಿಟಲ್ಸ್ ಎಂದು ಹೆಸರಿಡಲಾಗುತ್ತದೆ ಎಂದು ವರದಿ ತಿಳಿಸಿವೆ.

ಉಳಿದ ಮೂರು ತಂಡಗಳು ಯಾವುವು?
ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಸನ್ ನೆಟ್‌ವರ್ಕ್ ಗ್ರೂಪ್ಸ್ ಪೋರ್ಟ್ ಎಲಿಜಬೆತ್ ಫ್ರಾಂಚೈಸಿಯನ್ನು ಖರೀದಿಸಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯಾಂಕ ಡರ್ಬನ್ ತಂಡವನ್ನು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರು ಪಾರ್ಲ್ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ ಎಂದು ಕ್ರಿಕ್‌ಬಜ್‌ನ ವರದಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications