ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು ಎಲ್ಲ 10 ತಂಡಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಈ ವೇಳೆ ಎಲ್ಲ ಅಭಿಮಾನಿಗಳ ಕಣ್ಣು ಅವರ ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿದೆ. ಬ್ಯಾಟರ್‌ಗಳು ಸಹ ಈಗಾಗಲೇ ಮೈದಾನದಲ್ಲಿ ಕಸರತ್ತು ಆರಂಭಿಸಿದ್ದಾರೆ. ಮೈದಾನದಲ್ಲಿ ರನ್ ಚಿತ್ತಾರ ಮೂಡಿಸಲು ಬೇಕಿದ್ದ ತಯಾರಿಗಳನ್ನು ಬ್ಯಾಟರ್‌ಗಳು ಮಾಡಿಕೊಂಡಿದ್ದಾರೆ.
ಟಿ20 ಕ್ರಿಕೆಟ್ ಅಂದರೆ ಅದು ಬ್ಯಾಟರ್‌ಗಳ ಆಟ. ಈ ಲೀಗ್‌ನಲ್ಲೂ ಬ್ಯಾಟರ್‌ಗಳು ತಮ್ಮ ಆರ್ಭಟ ನಡೆಸಿದ್ದಾರೆ. ಅಬ್ಬರದ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಹಾಗಿದ್ದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳು ಯಾರು ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ಯುನಿವರ್ಸಲ್ ಬೌಸ್ ಖ್ಯಾತಿಯ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಕಮಾಲ್ ಪ್ರದರ್ಶನ ನೀಡಿದ್ದಾರೆ. ಇವರು ಕೆಕೆಆರ್, ಪಂಜಾಬ್, ಆರ್‌ಸಿಬಿ ತಂಡದ ಪರ ಬ್ಯಾಟ್ ಮಾಡಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಇವರ ಮುಗಿಲೆತ್ತರದ ಸಿಕ್ಸರ್‌ಗಳು ಅಭಿಮಾನಿಗಳ ಮನದಲ್ಲಿ ಈಗಲೂ ಶಾಶ್ವತವಾಗಿವೆ. ಈ ವೇಳೆ ಗಿಲ್ 142 ಪಂದ್ಯಗಳಲ್ಲಿ 4965 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ 357 ಸಿಕ್ಸರ್‌ಗಳು ಹರಿದು ಬಂದಿವೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಡೆಕ್ಕನ್ ಚಾರ್ಜಸ್ ಹಾಗೂ ಮುಂಬೈ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ರೋಹಿತ್ ಆಡಿದ 257 ಪಂದ್ಯಗಳಲ್ಲಿ 280 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ಖಾತೆಯಲ್ಲಿ ಒಟ್ಟು 272 ಸಿಕ್ಸರ್‌ಗಳು ಸೇರಿವೆ. ಇವರು ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಸಾಧಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲೆಬು.

ಟೀಮ್ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಸಹ ಸ್ಥಾನ ಪಡೆದಿದ್ದಾರೆ. ಡೆತ್ ಓವರ್‌ಗಳಲ್ಲಿ ತಮ್ಮ ಹ್ಯಾಲಿಕಾಪ್ಟರ್ ಶಾಟ್ ಮೂಲಕ ಗಮನ ಸೆಳೆಯುವ ಧೋನಿ 264 ಪಂದ್ಯಗಳಲ್ಲಿ 252 ಸಿಕ್ಸರ್ ಸಿಡಿಸಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ಹಾಗೂ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಬ್ಯಾಟ್ ಮಾಡಿದ್ದಾರೆ. ಇನ್ನು ಇದೇ ಪಟ್ಟಿಯಲ್ಲಿ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಸಹ ಇದ್ದಾರೆ. ಇವರು ಆಡಿದ 184 ಪಂದ್ಯಗಳಲ್ಲಿ 251 ರನ್ ಸಿಡಿಸಿದ್ದಾರೆ. ಎಬಿಡಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ಪರ ಆಡಿದ್ದಾರೆ. ಆದರೆ ಇವರಿಗೆ ಬೆಂಗಳೂರು ತಂಡದ ಪರ ಆಡುವಾಗ ಇವರ ಆಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.