ಮೇ 5ರಿಂದ ಐಪಿಎಲ್‌ನ ವಿದೇಶಿ ಆಟಗಾರರು ತವರಿಗೆ ವಾಪಸ್

ನವದೆಹಲಿ: ಕ್ರಿಕೆಟ್ ಪ್ರೇಮಿಗಳನ್ನು ಸ್ವಲ್ಪ ದಿನಗಳ ಕಾಲ ರಂಜಿಸಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದೂಡಲ್ಪಟ್ಟಿದೆ, ಅಂದರೆ ಸದ್ಯಕ್ಕಂತೂ ಅಮಾನತಾಗಿದೆ. ಹೀಗಾಗಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವಿದೇಶಿ ಆಟಗಾರರು ಮತ್ತೆ ತವರು ದೇಶಕ್ಕೆ ವಾಪಸ್ಸಾಗಲಿದ್ದಾರೆ.
ಐಪಿಎಲ್ ಸಲುವಾಗಿ ಸದ್ಯ ಭಾರತದಲ್ಲಿರುವ ವಿದೇಶಿ ಆಟಗಾರರು ಬುಧವಾರ (ಮೇ 5) ದಿಂದ ಸ್ವದೇಶಗಳಿಗೆ ವಾಪಸ್ಸಾಗಲಿದ್ದಾರೆ. ವಿದೇಶಿ ಆಟಗಾರರನ್ನು ಅವರ ದೇಶಕ್ಕೆ ಕಳುಹಿಸಿಕೊಡುವ ಪ್ರಕ್ರಿಯೆ ಬುಧವಾರದಿಂದಲೇ ಆರಂಭಗೊಳ್ಳಲಿದೆ ಎಂದು ಬೋರ್ಡ್ ಅಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
'ನಾವು ವಿದೇಶಿ ಆಟಗಾರರ ಬೋರ್ಡ್‌ಗಳ ಜೊತೆ ಆಟಗಾರರ ಪ್ರಯಾಣ ಯೋಜನೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಆದ್ದರಿಂದ ಆಟಗಾರರೆಲ್ಲರೂ ಸುರಕ್ಷಿತವಾಗಿ ಸ್ವದೇಶಗಳಿಗೆ ವಾಪಸ್ಸಾಗಲಿದ್ದಾರೆ,' ಎಂದು ಬಿಸಿಸಿಐ ಅಧಿಕಾರಿ ರಾಯ್ಟರ್‌ಗೆ ತಿಳಿಸಿದ್ದಾರೆ.
ಎಲ್ಲಾ ವಿದೇಶಿಗರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಲು ವ್ಯವಸ್ಥೆಯಾಗಲಿದೆ ಎಂದು ಈ ಮೊದಲು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಾಟೆಲ್ ಕೂಡ ಹೇಳಿದ್ದರು. 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಇಯಾನ್ ಮಾರ್ಗನ್, ಜಾನಿ ಬೇರ್ಸ್ಟೋವ್, ಡೇವಿಡ್ ಮಲಾನ್, ಎಬಿ ಡಿ ವಿಲಿಯರ್ಸ್, ಕಾಗಿಸೊ ರಬಾಡಾ ಇಂಥ ಬಹಳಷ್ಟು ವಿದೇಶಿ ಆಟಗಾರರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications