Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Best Economy: ಬ್ಯಾಟರ್‌ಗಳಿಗೆ ರನ್‌ ನೀಡದೆ ಸತಾಯಿಸಿದ ಬೌಲರ್‌ಗಳು ಇವರೆ: ಎಕನಾಮಿ ಹೇಗಿದೆ ಗೊತ್ತಾ?

ಇಂಡಿಯನ್ ಪ್ರೀಮಿಯರ್‌ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮೆಗಾ ಲೀಗ್‌ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆದಿವೆ. ಈ ಲೀಗ್‌ನ ಆರಂಭದಿಂದಲೂ ಬ್ಯಾಟರ್‌ ಆರ್ಭಟ ಜೋರಾಗಿರುತ್ತದೆ. ಈ ವೇಳೆ ಬೌಲರ್‌ಗಳು ಸಹ ತಮ್ಮ ತಾಕತ್ತು ಪ್ರದರ್ಶಿಸುತ್ತಾರೆ. ತಮ್ಮ ಪರ್ಫೆಕ್ಟ್‌ ಲೈನ್ ಹಾಗೂ ಲೆಂಥ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಬೌಲರ್‌ಗಳು ಪಂದ್ಯದ ಗತಿಯನ್ನೇ ಬದಲಿಸುತ್ತಾರೆ. ಐಪಿಎಲ್‌ ಇತಿಹಾಸದಲ್ಲಿ ರನ್‌ ನೀಡಲು ಹಿಂದೇಟು ಹಾಕಿದ ಹಲವು ಬೌಲರ್‌ಗಳು ಕಾಣಿಸಿಕೊಳ್ಳುತ್ತಾರೆ. ಈ ಬೌಲರ್‌ಗಳಲ್ಲಿ ಅಗ್ರ 10 ಬೆಸ್ಟ್ ಎಕನಾಮಿ ಹೊಂದಿರುವ ಬೌಲರ್‌ಗಳ ವಿವರ ಇಲ್ಲಿದೆ.

ಅಂದಹಾಗೆ ಎಕನಾಮಿ ರೇಟ್‌ ಅಂದರೆ ಏನು ಎಂಬ ಚಿಂತೆ ನಿಮ್ಮಲ್ಲಿ ಕಾಡುತ್ತ ಇರಬಹುದು. ಪ್ರತಿ ಓವರ್‌ಗೆ ಬೌಲರ್ ಒಬ್ಬ ಬಿಟ್ಟುಕೊಟ್ಟ ರನ್‌ಗಳ ಸರಾಸರಿಯಾಗಿದೆ. ಇದು ಎದುರಾಳಿ ರನ್‌ ವೇಗಕ್ಕೆ ಕಡಿವಾಣ ಹಾಕುವ ಬೌಲರ್‌ಗಳ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಇದರಿಂದಾಗಿ ಪಂದ್ಯದ ಚಿತ್ರಣವೇ ಬದಲಾಗುತ್ತಾ ಸಾಗುತ್ತದೆ.

IPL s Most Economical Bowlers Masters of Restricting Runs

17 ಆವೃತ್ತಿಗಳಲ್ಲಿ ಹಲವು ಬೌಲರ್‌ಗಳು ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಅಲ್ಲದೆ ರನ್‌ ನೀಡಲು ಕಂಜೂಸ್ ಮಾಡಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನ್‌ ಅಪ್‌ ವಿರುದ್ಧವೂ ಇವರು ರನ್‌ ಗಳಿಗೆ ಅಂಕುಶ ಹಾಕಿದ್ದಾರೆ. ನಾವು ಇಲ್ಲಿ ಐಪಿಎಲ್‌ ಇತಿಹಾಸದಲ್ಲಿ ಎಕನಾಮಿ ಬೌಲರ್‌ಗಳ ಪಟ್ಟಿಯನ್ನು ನೀಡಿದ್ದೇವೆ. ಇವರು 50 ಪಂದ್ಯಗಳನ್ನು ಆಡಿರಬೇಕಾಗುತ್ತದೆ.

ಆಟಗಾರ ತಂಡ ಓವರ್ ರನ್ಸ್‌ ಎಕನಾಮಿ
ಅನಿಲ್‌ ಕುಂಬ್ಳೆ ಆರ್‌ಸಿಬಿ 160.5 1058 6.57
ಗ್ಲೇನ್‌ ಮೆಕ್‌ಗ್ರಾತ್‌ ಡೆಲ್ಲಿ 54 357 6.61
ಮುತ್ತಯ್ಯಾ ಮುರಳಿಧರನ್ ಸಿಎಸ್‌ಕೆ, ಕೆಟಿಕೆ, ಆರ್‌ಸಿಬಿ, 254 1696 6.67
ಸುನಿಲ್ ನರೈನ್‌ ಕೆಕೆಆರ್‌ 679.1 4571 6.73
ರೋಯೆಲೊಫ್ ವ್ಯಾನ್ ಡೆರ್ ಮೆರ್ವೆ ಡೆೆಲ್ಲಿ, ಆರ್‌ಸಿಬಿ 73.5 498 6.74
ಡೇನಿಯಲ್ ವೆಟ್ಟೋರಿ ಡೆಲ್ಲಿ, ಆರ್‌ಸಿಬಿ 129.3 879 6.78
ರಶೀದ್ ಖಾನ್‌ ಎಸ್‌ಆರ್‌ಎಚ್‌, ಜಿಟಿ 476.3 3252 6.82
ಜಯದೇವ್ ಉನಾದ್ಕಟ್‌ ಡೆಲ್ಲಿ, ಮುಂಬೈ 65 445 6.84
ಡೇೇಲ್ ಸ್ಟೇಯ್ನ್ ಡಿಸಿಎಚ್, ಆರ್‌ಸಿಬಿ, ಎಸ್‌ಆರ್‌ಎಚ್‌, ಜಿಲ್ 362.4 2508 6.91
ಜೋಹಾನ್ ಬೋಥಾ ಆರ್‌ಆರ್, ಕೆಕೆಆರ್, ಡಿಸಿ 115.4 800 6.91

ಅನಿಲ್‌ ಕುಂಬ್ಳೆ

ಐಪಿಎಲ್‌ ಇತಿಹಾಸದಲ್ಲಿ ಬ್ಯಾಟರ್‌ಗಳಿಗೆ ಸುಲಭವಾಗಿ ರನ್‌ ಬಿಟ್ಟುಕೊಡದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆಗೆ ಮೊದಲ ಸ್ಥಾನ. ಇವಗರು ಆರ್‌ಸಿಬಿ ಪರ 160.5 ಓವರ್‌ಗಳನ್ನು ಬೌಲ್‌ ಮಾಡಿದ್ದು 1058 ರನ್‌ ಬಿಟ್ಟುಕೊಟ್ಟಿದ್ದಾರೆ. ಈ ವೇಳೆ ಇವರ ಎಕನಾಮಿ 6.57 ಆಗಿದೆ. ಇವರು ರಾಜಸ್ಥಾನ ರಾಯಲ್ಸ್ ವಿರುದ್ಧ 5 ರನ್‌ ನೀಡಿ 5 ವಿಕೆಟ್ ಪಡೆದಿರುವುದು ಬೆಸ್ಟ್ ಸಾಧನೆ ಆಗಿದೆ. ಇವರ ಟರ್ನ್‌ ಹಾಗೂ ಬೌನ್ಸ್‌ ಅರ್ಥ ಮಾಡಿಕೊಳ್ಳುವಲ್ಲಿ ಬ್ಯಾಟರ್‌ಗಳು ಹೆಣಗಾಟ ನಡೆಸಿದ್ದಾರೆ.

ಗ್ಲೇನ್ ಮೆಕ್‌ಗ್ರಾತ್‌

ವಿಶ್ವ ಕ್ರಿಕೆಟ್‌ನ ದಿಗ್ಗಜ ವೇಗದ ಬೌಲರ್‌ಗಳಲ್ಲಿ ಗ್ಲೇನ್ ಮೆಕ್‌ಗ್ರಾತ್‌ ಇವರಿಗೆ ಸ್ಥಾನ. ಇವರು ಸಹ ಐಪಿಎಲ್‌ನಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 54 ಓವರ್ ಬೌಲಿಂಗ್ ಮಾಡಿ 6.61ರ ಸರಾಸರಿಯಲ್ಲಿ 357 ರನ್‌ ಬಿಟ್ಟುಕೊಟ್ಟಿದ್ದಾರೆ.

ಸ್ಪಿನ್ ಮಾಂತ್ರಿಕನಿಗೂ ಸ್ಥಾನ

ಶ್ರೀಲಂಕಾ ತಂಡದ ದಿಗ್ಗಜ ಆಟಗಾರ ಮುತ್ತಯ್ಯ ಮುರುಳಿಧರನ್‌ ಸಹ ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಚೆನ್ನೈ ಸೂಪರ್ ಕಿಂಗ್ಸ್, ಕೊಚ್ಚಿ ಟಸ್ಕರ್ಸ್‌, ಆರ್‌ಸಿಬಿ ಪರ ಬೌಲಿಂಗ್ ಮಾಡಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಇವರು ಐಪಿಎಲ್‌ನಲ್ಲಿ 254 ಓವರ್ ಬೌಲಿಂಗ್ ನಡೆಸಿದ್ದು, 1696 ರನ್‌ ನೀಡಿದ್ದಾರೆ. ಈ ವೇಳೆ ಇವರ ಎಕನಾಮಿ 6.67 ಆಗಿದೆ.

Story first published: Monday, March 17, 2025, 7:04 [IST]
Other articles published on Mar 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+