ಕ್ರಿಕೆಟ್ ಒಂದು ಟೀಮ್ ಗೇಮ್. ಈ ಆಟ ಒಬ್ಬನೇ ಆಟಗಾರನಿಂದ ಗೆಲ್ಲಲು ಸಾಧ್ಯವೇ ಆಗುವುದಿಲ್ಲ. ಎಲ್ಲರೂ ಶ್ರಮಪಟ್ಟಾಗ ಮಾತ್ರ ಗೆಲುವು ತಂಡಕ್ಕೆ ಲಭಿಸುತ್ತದೆ. ಆಟಗಾರರು ಈ ವೇಳೆ ತಂಡದ ಗೆಲುವಿನಲ್ಲಿ ಮಿಂಚಲು ನಾನಾ ಅವಕಾಶಗಳು ಇರುತ್ತವೆ. ಬ್ಯಾಟಿಂಗ್‌ನಲ್ಲಿ ರನ್ ಬಾರಿಸಿ ತಂಡಕ್ಕೆ ಆಧಾರವಾದ್ರೆ, ಬೌಲಿಂಗ್‌ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿ ತಂಡಕ್ಕೆ ನೆರವಾಗಬಹುದು. ಇನ್ನು ಕ್ಷೇತ್ರರಕ್ಷಕನಾಗಿ ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ಬಳಸಿಕೊಂಡು ಮಿಂಚುತ್ತಾನೆ. ಇನ್ನು ವಿಕೆಟ್ ಕೀಪರ್‌ಗಳು ವಿಕೆಟ್ ಹಿಂದೆ ಹದ್ದಿನ ಕಣ್ಣನ್ನು ನೆಟ್ಟಿರುತ್ತಾರೆ.
ವಿಕೆಟ್ ಕೀಪರ್‌ಗಳ ಪಾತ್ರವೂ ಟಿ20 ಕ್ರಿಕೆಟ್‌ನಲ್ಲಿ ದೊಡ್ಡದು. ಬ್ಯಾಟರ್‌ಗಳ ಚಲನ ವಲನವನ್ನು ಗುರುತಿಸಿ ಬೌಲರ್‌ಗೆ ಸಲಹ ಸೂಚನೆ ನಿಡುತ್ತಾ ತಂಡಕ್ಕೆ ನೆರವಾಗಬೇಕು. ಈ ವೇಳೆ ವಿಕೆಟ್ ಕೀಪರ್‌ಗಳು ಸಹ ಹಲವು ದಾಖಲೆಗಳನ್ನು ನಿರ್ಮಿಸುತ್ತಾರೆ. ಇಂದಿನ ವರದಿಯಲ್ಲಿ ವಿಕೆಟ್ ಕೀಪರ್‌ಗಳಾಗಿ ತಂಡದ ಪರ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕೀಳಲು ಸಹಾಯಕವಾದ ವಿಕೆಟ್ ಕೀಪರ್‌ಗಳ ಬಗ್ಗೆ ಮಾಹಿತಿ ಇದೆ.

ಐಪಿಎಲ್‌ನಲ್ಲಿ ಅದೆಷ್ಟೋ ಸ್ಟಾರ್ ವಿಕೆಟ್ ಕೀಪರ್‌ಗಳು ಆಡಿದ್ದಾರೆ. ಈ ವಿಕೆಟ್ ಕೀಪರ್‌ಗಳು ತಮ್ಮ ಅಮೋಘ ಸ್ಕಿಲ್‌ಗಳಿಂದಲೇ ಹೆಸರುವಾಸಿ. ಈ ವೇಳೆ ವಿಕೆಟ್ ಕೀಪರ್‌ಗಳು ಸಹ ತಂಡದ ಗೆಲುವಿನಲ್ಲಿ ಮಹತ್ವದ ಕಾಣಿಕೆ ನೀಡುತ್ತಾರೆ. ಒಂದೇ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಕೆಟ್ ಕೀಪರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
| 1 | ವಿಕೆಟ್ ಕೀಪರ್ | ತಂಡ | ವಿಕೆಟ್ | ವಿರುದ್ಧ | ಕ್ಯಾಚ್ | ಸ್ಟಂಪ್ಸ್ |
|---|---|---|---|---|---|---|
| 2 | ಕುಮಾರ್ ಸಂಗಕ್ಕಾರ | ಡಿಸಿಎಚ್ | 5 | ಆರ್‌ಸಿಬಿ | 5 | 0 |
| 3 | ಯೋಗೇಶ್ ಟಕವಾಲೆ | ಮುಂಬೈ | 4 | ಆರ್ಆರ್ | 3 | 1 |
| 4 | ಮೋರ್ನೆ ವ್ಯಾನ್ ವೈಕ್ | ಕೆಕೆಆರ್ | 4 | ಆರ್‌ಸಿಬಿ | 4 | 0 |
| 5 | ದಿನೇಶ್ ಕಾರ್ತಿಕ್ | ಡಿಡಿ | 4 | ಆರ್‌ಆರ್ | 2 | 2 |
| 6 | ರಾಬಿನ್ ಉತ್ತಪ್ಪ | ಪುಣೆ | 4 | ಮುಂಬೈ | 2 | 2 |
| 7 | ಆಡಂ ಗಿಲ್ ಕ್ರಿಸ್ಟ್ | ಪಂಜಾಬ್ | 4 | ಸಿಎಸ್‌ಕೆ | 4 | 0 |
| 8 | ಬ್ರೆಡಂ ಮೆಕಲಂ | ಕೆಕೆಆರ್ | 4 | ಡಿಡಿ | 2 | 2 |
| 9 | ಎಂಎಸ್ ಧೋನಿ | ಸಿಎಸ್‌ಕೆ | 4 | ಆರ್‌ಸಿಬಿ | 3 | 1 |
| 10 | ಪಾರ್ಥಿವ್ ಪಟೇಲ್ | ಮುಂಬೈ | 4 | ಜಿಎಲ್ | 4 | 0 |
| 11 | ನಮನ್ ಓಜಾ | ಎಸ್‌ಆರ್‌ಎಚ್ | 4 | ಮುಂಬೈ | 4 | 0 |
ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಬಲಿ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಡೆಕ್ಕನ್ ಚಾರ್ಜಸ್ ಪರ ಆಡುವಾಗ 5 ವಿಕೆಟ್ ಉರುಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಆರ್‌ಸಿಬಿ ವಿರುದ್ಧ ಆಡುವಾಗ ಇವರು ಈ ಸಾಧನೆ ಮಾಡಿದ್ದಾರೆ.

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೆರಡು ಹೆಸರುಗಳೆಂದ್ರೆ ಭಾರತದ ಯೋಗೇಶ್ ಟಕವಾಲೆ ಹಾಗೂ ದಕ್ಷಿಣ ಆಫ್ರಿಕಾದ ಮೋರ್ನೆ ವ್ಯಾನ್ ವೈಕ್ ಇವರಿಬ್ಬರೂ ಸಹ ಐಪಿಎಲ್‌ನ ಒಂದೇ ಇನಿಂಗ್ಸ್‌ನಲ್ಲಿ 4 ಬಲಿ ಪಡೆಯುವಲ್ಲಿ ಸಫಲರಾಗಿದ್ದಾರೆ.
ಭಾರತದ ಪರ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಆಟಗಾರ ದಿನೇಶ್ ಕಾರ್ತಿಕ್. ಇವರು ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವಾಗ ರಾಜಸ್ಥಾನ ವಿರುದ್ಧ 4 ವಿಕೆಟ್ ಉರುಳಿಸಿದ್ದಾರೆ. ಇದರಲ್ಲಿ 2 ಕ್ಯಾಚ್ ಹಾಗೂ 2 ಸ್ಟಂಪ್ಸ್ ಆಗಿವೆ. ರಾಬಿನ್ ಉತ್ತಪ್ಪ ಸಹ ಪುಣೆ ವಾರಿಯರ್ಸ್ ಪರ ಆಡುವ ಇಂತಹದ್ದೇ ಸಾಧನೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಆರ್‌ಸಿಬಿ ಪರ ಕಾಣಿಸಿಕೊಳ್ಳುವ ಆಟಗಾರ ಅನುಜ್ ರಾವತ್. ಇವರು 2024ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಕ್ಯಾಚ್‌ಗಳನ್ನು ಪಡೆದು ಅಬ್ಬರಿಸಿದ್ದರು.