Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹಗರಣ: ಚಂಡೀಲಗೆ ಆಜೀವ, ಹಿಕೇನ್ ಗೆ ಐದು ವರ್ಷ ನಿಷೇಧ

ಮುಂಬೈ, ಜ. 18: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದ ಆಟಗಾರ ಅಜಿತ್ ಚಂಡೀಲ ಅವರಿಗೆ ಕ್ರಿಕೆಟ್ ನಿಂದ ಆಜೀವ ನಿಷೇಧ ಹೇರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಆದೇಶ ಹೊರಡಿಸಿದೆ.

ಐಪಿಎಲ್ ಕಳ್ಳಾಟದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿರುವ ಅಜಿತ್ ಚಂಡೀಲ ಜೊತೆಗೆ ಹಿಕೇನ್ ಶಾ ಅವರಿಗೂ ಶಿಕ್ಷೆ ವಿಧಿಸಲಾಗಿದೆ. ಬಿಸಿಸಿಐ ಶಿಸ್ತು ಪಾಲನಾ ಸಮಿತಿ ಶಾ ಅವರಿಗೆ 5 ವರ್ಷ ನಿಷೇಧ ಹೇರಿದೆ.[ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 6ನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಕುರಿತಂತೆ ದೆಹಲಿ ಹೈಕೋರ್ಟ್ 2015ರ ಜುಲೈ ತಿಂಗಳಿನಲ್ಲಿ ಮಹತ್ವದ ತೀರ್ಪು ನೀಡಿತ್ತು. ವೇಗಿ ಶ್ರೀಶಾಂತ್, ಅಜಿತ್ ಚಂಡೀಲಾ, ಅಂಕಿತ್ ಚೌಹಾಣ್ ಅವರು ದೋಷಮುಕ್ತರಾಗಿದ್ದರು.

ಈ ಮೂವರು ಕ್ರಿಕೆಟರ್ಸ್ ವಿರುದ್ಧ ಮಹಾರಾಷ್ಟ್ರದ MCOCA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅದರೆ, ಸರಿಯಾದ ಸಾಕ್ಷಿ ಆಧಾರ ಇಲ್ಲದ ಕಾರಣ ಬಂಧನಕ್ಕೊಳಗಾದರೂ ಎಲ್ಲಾ ಮೂವರು ಕ್ರಿಕೆಟರ್ಸ್ ಗಳು ಜಾಮೀನು ಪಡೆದು ಹೊರ ಬಂದಿದ್ದಾರೆ.

ಬಿಸಿಸಿಐನಿಂದ ಶ್ರೀಶಾಂತ್ ಗೆ ಸಿಹಿ ಸುದ್ದಿ ಸಿಕ್ಕಿಲ್ಲ

ಬಿಸಿಸಿಐನಿಂದ ಶ್ರೀಶಾಂತ್ ಗೆ ಸಿಹಿ ಸುದ್ದಿ ಸಿಕ್ಕಿಲ್ಲ

ಐಪಿಎಲ್ ಆರೋಪಿಗಳು ನಿರ್ದೋಷಿಗಳು ಕೋರ್ಟ್ ಎಂದು ಹೇಳಿದ್ದರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹಿಂಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಮೂವರು ಕ್ರಿಕೆಟಿಗರಾದ ಎಸ್. ಶ್ರೀಶಾಂತ್, ಅಂಕಿತ್ ಚೌಹಾಣ್ ಹಾಗೂ ಅಜಿತ್ ಚಾಂಡಿಲಾ ಕ್ರಿಕೆಟ್ ಭವಿಷ್ಯ ಮುಗಿದಂತೆ ಎಂದು ವಿಶ್ಲೇಷಣೆ ಮಾಡಲಾಗಿದೆ

ಜಸ್ಟೀಸ್ ಮುದ್ಗಲ್ ಪ್ರತಿಕ್ರಿಯೆ

ಅಜಿತ್ ಚಂಡೀಲಗೆ ನಿಷೇಧ ಹೇರಿರುವ ಬಿಸಿಸಿಐ ಕ್ರಮವನ್ನು ಸಮರ್ಥಿಸಿದ ಜಸ್ಟೀಸ್ ಮುದ್ಗಲ್.

ದಾವೂದ್ ಜೊತೆಗೂ ಲಿಂಕ್ ಕಲ್ಪಿಸಲಾಗಿತ್ತು

ದಾವೂದ್ ಜೊತೆಗೂ ಲಿಂಕ್ ಕಲ್ಪಿಸಲಾಗಿತ್ತು

ಪಾಕಿಸ್ತಾನ, ದುಬೈ ಹಾಗೂ ಇಂಗ್ಲೆಂಡ್ ನಿಂದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸುತ್ತಿದ್ದರು. ಪಾಕಿಸ್ತಾನ ಬುಕ್ಕಿ ಸಲ್ಮಾನ್, ದುಬೈ ಬುಕ್ಕಿ ಜಾವೇದ್ aka ಡಾಕ್ಟರ್ aka ಜಾವೇದ್ ಛೂಟನಿ ಅವರು ಭಾರತದ ಬುಕ್ಕಿಗಳಾದ ರಮೇಶ್ ವ್ಯಾಸ್ ಹಾಗೂ ಟಿಂಕು ಮಂಡಿ ಮೂಲಕ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಅರೋಪಪಟ್ಟಿಯಲ್ಲಿ ಹೇಳಲಾಗಿತ್ತು.

ನ್ಯಾ. ಆರ್.ಎಂ. ಲೋಧಾ ಸಮಿತಿ ನೀಡಿದ ತೀರ್ಪು

ನ್ಯಾ. ಆರ್.ಎಂ. ಲೋಧಾ ಸಮಿತಿ ನೀಡಿದ ತೀರ್ಪು

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠ ಜುಲೈ 14ರಂದು ತೀರ್ಪು ನೀಡಿ ಚೆನೈ ಸೂಪರ್ ಕಿಂಗ್ಸ್ , ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್ ನಿಂದ 2 ವರ್ಷ ನಿಷೇಧ ಹೇರಿದ್ದಲ್ಲದೆ, ರಾಜ್ ಕುಂದ್ರಾ ಹಾಗೂ ಗುರುನಾಥ್ ಮೇಯಪ್ಪನ್ ಅವರಿಗೆ ಅಜೀವ ನಿಷೇಧ ಹಾಕಲಾಗಿದೆ. [ವಿವರ ಇಲ್ಲಿದೆ]

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+