IPL Schedule 2026: RCB ತಂಡದ ಸಂಪೂರ್ಣ ವೇಳಾ ಪಟ್ಟಿ, ಸಮಯ, ಸ್ಥಳದ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯ ಮಾರ್ಚ್ 28 ರಂದು ಆರಂಭವಾಗಲಿದೆ. ಐಪಿಎಲ್ ಎರಡನೇ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಬಿಡುಗಡೆ ಮಾಡಿದೆ. ಬಿಸಿಸಿಐ ಬರೀ ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದ್ದು, ಫೈನಲ್ ಹಾಗೂ ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿದ್ದು, ಭಾರತದ 12 ನಗರಗಳು ಈ ಪಂದ್ಯಕ್ಕೆ ಆತಿಥ್ಯ ವಹಿಸಲಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈ ಬಾರಿ ತನ್ನ ತವರಿನ ಪಂದ್ಯಗಳನ್ನು ಬೆಂಗಳೂರು ಹಾಗೂ ರಾಯ್‌ಪುರದಲ್ಲಿ ಆಡಲಿದೆ. ಬೆಂಗಳೂರಿನಲ್ಲಿ 5 ಹಾಗೂ ರಾಯ್‌ಪುರದಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಆರ್‌ಸಿಬಿ ಲೀಗ್ ಹಂತದ ಕೊನೆಯ ಪಂದ್ಯವನ್ನು ಮೇ 26 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ಯಾವ ಯಾವ ಪಂದ್ಯಗಳು ನಡೆಯಲಿವೆ?
ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಉದ್ಘಾಟನಾ ಪಂದ್ಯ ಸೇರಿದಂತೆ ಒಟ್ಟು 5 ಪಂದ್ಯಗಳು ನಡೆಯಲಿವೆ. ಇದರಲ್ಲಿ 4 ಪಂದ್ಯಗಳು ಸಂಜೆ 7.30ಕ್ಕೆ ನಡೆದರೆ, ಒಂದು ಪಂದ್ಯ ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಲೀಗ್ ಹಂತದ ಎರಡು ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿದೆ. ಮೇ 10 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಹಾಗೂ ಮೇ 13 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ತಂಡ ಅಖಾಡ ಪ್ರವೇಶಿಸಲಿದೆ.
ಯಾವ ತಂಡದ ವಿರುದ್ಧ ಒಂದೇ ಪಂದ್ಯವನ್ನು ಆಡಲಿದೆ ಆರ್‌ಸಿಬಿ?
ಆರ್‌ಸಿಬಿ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಒಂದು ಪಂದ್ಯವನ್ನು ಆಡಲಿದೆ. ಉಳಿದ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಲೀಗ್ ಹಂತದಲ್ಲಿ ಆಡಲಿದೆ.
ಮಧ್ಯಾಹ್ನ 3.30ಕ್ಕೆ ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಯಾವ ತಂಡವನ್ನು ಎದುರಿಸಲಿದೆ?
ಬೆಂಗಳೂರು ತಂಡ ಒಟ್ಟು ಎರಡು ಮಧ್ಯಾಹ್ನ ಪಂದ್ಯಗಳನ್ನು ಆಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 18 ರಂದು ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಆಡಲಿದೆ. ಇನ್ನೊಂದು ಮಧ್ಯಾಹ್ನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಧರ್ಮಶಾಲಾದಲ್ಲಿ ಆಡಲಿದೆ.
ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ
- 1- ಮಾರ್ಚ್ 28, ಸನ್‌ರೈಸರ್ಸ್ ಹೈದರಾಬಾದ್, ಬೆಂಗಳೂರು, ಸಂಜೆ 7.30ಕ್ಕೆ
- 2- ಏಪ್ರಿಲ್ 5, ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು, ಸಂಜೆ 7.30ಕ್ಕೆ
- 3- ಏಪ್ರಿಲ್ 10, ರಾಜಸ್ಥಾನ ರಾಯಲ್ಸ್, ಗುವಾಹಟಿ, ಸಂಜೆ 7.30ಕ್ಕೆ
- 4- ಏಪ್ರಿಲ್ 12, ಮುಂಬೈ ಇಂಡಿಯನ್ಸ್, ಮುಂಬೈ, ಸಂಜೆ 7.30ಕ್ಕೆ
- 5- ಏಪ್ರಿಲ್ 15, ಲಕ್ನೋ ಸೂಪರ್ ಜೈಂಟ್ಸ್, ಬೆಂಗಳೂರು, ಸಂಜೆ 7.30ಕ್ಕೆ
- 6- ಏಪ್ರಿಲ್ 18, ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು, ಮಧ್ಯಾಹ್ನ 3.30ಕ್ಕೆ
- 7- ಏಪ್ರಿಲ್ 24, ಗುಜರಾತ್ ಟೈಟಾನ್ಸ್, ಬೆಂಗಳೂರು, ಸಂಜೆ 7.30ಕ್ಕೆ
- 8- ಏಪ್ರಿಲ್ 27, ಡೆಲ್ಲಿ ಕ್ಯಾಪಿಟಲ್ಸ್, ನವದೆಹಲಿ, ಸಂಜೆ 7.30ಕ್ಕೆ
- 9- ಏಪ್ರಿಲ್ 30, ಗುಜರಾತ್ ಟೈಟಾನ್ಸ್, ಅಹಮದಾಬಾದ್, ಸಂಜೆ 7.30ಕ್ಕೆ
- 10- ಮೇ 7, ಲಕ್ನೋ ಸೂಪರ್ ಜೈಂಟ್ಸ್, ಲಕ್ನೋ, ಸಂಜೆ 7.30ಕ್ಕೆ
- 11- ಮೇ 10, ಮುಂಬೈ ಇಂಡಿಯನ್ಸ್, ರಾಯ್‌ಪುರ, ಸಂಜೆ 7.30ಕ್ಕೆ
- 12- ಮೇ 13, ಕೋಲ್ಕತ್ತಾ ನೈಟ್ ರೈಡರ್ಸ್, ರಾಯ್‌ಪುರ, ಸಂಜೆ 7.30ಕ್ಕೆ
- 13- ಮೇ 17, ಪಂಜಾಬ್ ಕಿಂಗ್ಸ್, ಧರ್ಮಶಾಲಾ, ಮಧ್ಯಾಹ್ನ 3.30ಕ್ಕೆ
- 14- ಮೇ 26, ಸನ್‌ರೈಸರ್ಸ್ ಹೈದರಾಬಾದ್, ಹೈದರಾಬಾದ್, ಸಂಜೆ 7.30ಕ್ಕೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications