Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಐಪಿಎಲ್ 2020' ಆರಂಭ-ಅಂತ್ಯದ ನಿಜವಾದ ದಿನಾಂಕ ಪ್ರಕಟ

IPL set to start on September 19, final on November 8: BCCI sources

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುವ ಮತ್ತು ಅಂತ್ಯಗೊಳ್ಳುವ ಅಸಲಿ ದಿನಾಂಕ ಪ್ರಕಟಗೊಂಡಿದೆ. ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಇನ್ ಇಂಡಿಯಾದ ಬಲ್ಲ ಮೂಲವೊಂದರ ಪ್ರಕಾರ ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭಗೊಂಡು ನವೆಂಬರ್ 8ರಂದು ಅಂತ್ಯಗೊಳ್ಳಲಿದೆ ಎಂದು ತಿಳಿದುಬಂದಿದೆ. ಹಾಗಂತ ಬಿಸಿಸಿಐ ಇನ್ನೂ ಅಧಿಕೃತವಾಗಿ ಇದನ್ನು ಘೋಷಿಸಿಲ್ಲ.

13ನೇ ಆವೃತ್ತಿಯ ಐಪಿಎಲ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯೋದು ಬಹುತೇಕ ಪಕ್ಕಾ ಆಗಿತ್ತು. ಆದರೆ ಐಪಿಎಲ್ ಆರಂಭದ ದಿನಾಂಕವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿಲ್ಲ. ಮುಂದಿನ ವಾರ ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಮೀಟಿಂಗ್ ನಡೆಯಲಿದ್ದು, ಮೀಟಿಂಗ್ ಬಳಿಕ ಐಪಿಎಲ್ ಸ್ಪಷ್ಟ ಚಿತ್ರಣ ಲಭಿಸಲಿದೆ.

'ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19ರಂದು (ಶನಿವಾರ) ಆರಂಭಗೊಳ್ಳೋದು ಬಹುತೇಕ ಪಕ್ಕಾ ಆಗಿದೆ. ಫೈನಲ್ ಪಂದ್ಯ ನವೆಂಬರ್ 8ರಂದು (ಭಾನುವಾರ) ನಡೆಯಲಿದೆ. ಒಟ್ಟು 51 ದಿನಗಳ ಕಾಲ ಟೂರ್ನಿ ನಡೆಯಲಿದ್ದು, ಇದು ಫ್ರಾಂಚೈಸಿಗಳಿಗೆ, ಪ್ರಸಾರಕರಿಗೆ ಮತ್ತು ಮಧ್ಯಸ್ಥಗಾರರಿಗೆ ಹೊಂದಿಕೆಯಾಗಿದೆ,' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.

ಐಸಿಸಿ ಈ ಬಾರಿ ನಡೆಯಲಿದ್ದ ಟಿ20 ವಿಶ್ವಕಪ್ ಅನ್ನು ಮುಂದೂಡಿದ ಬೆನ್ನಲ್ಲೇ ಐಪಿಎಲ್ ಯೋಜನೆಗಳು ಚುರುಕುಗೊಂಡಿದ್ದವು. ಯಾಕೆಂದರೆ ಟಿ20 ವಿಶ್ವಕಪ್ ವೇಳಾಪಟ್ಟಿ ಐಪಿಎಲ್‌ಗೆ ಅಡ್ಡಿಯಾಗಿತ್ತು. ಈಗ ಬಿಸಿಸಿಐಗೆ ಐಪಿಎಲ್ ಎಡೆಗಿನ ತಯಾರಿ ಸುಲಭವೆನಿಸಿದೆ. ಅಂದ್ಹಾಗೆ, ಐಪಿಎಲ್ ಸಲುವಾಗಿ ತಂಡಗಳು ಆಗಸ್ಟ್ 20ರಂದು ಯುಎಗೆ ಪ್ರಯಾಣಿಸಲಿದೆ ಎಂದು ತಿಳಿದುಬಂದಿದೆ.

Story first published: Saturday, July 25, 2020, 17:30 [IST]
Other articles published on Jul 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+