ಮ್ಯಾಚ್ ಫಿಕ್ಸಿಂಗ್ ಬಗ್ಗೆ ಪ್ರೀತಿ ಜಿಂಟಾ ಗುಡುಗಿದ್ದೇಕೆ?
ಬೆಂಗಳೂರು, ಆಗಸ್ಟ್ 19: ಕಿಂಗ್ಸ್ Xi ಪಂಜಾಬ್ ತಂಡದ ಸಹ ಮಾಲೀಕತ್ವ ಹೊಂದಿರುವ ಪ್ರೀತಿ ಜಿಂಟಾ ಅವರು ಮಾಧ್ಯಮವೊಂದರ ವಿರುದ್ಧ ಕಿಡಿ ಕಾರಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಕುರಿತಂತೆ ಬಿಸಿಸಿಐಗೆ ಪ್ರೀತಿ ಅವರು ಮಹತ್ವದ ದಾಖಲೆ ನೀಡಿದ್ದಾರೆ ಎಂದು ಬಂದಿದ್ದ ವರದಿಯನ್ನು ಪ್ರೀತಿ ಅಲ್ಲಗೆಳೆದಿದ್ದಾರೆ.
ಸರಿಯಾದ ಸಾಕ್ಷಿ ಆಧಾರವಿಲ್ಲದೆ ಸುಳ್ಳು ಸುದ್ದಿ ಹರಡಬೇಡಿ, ನಾನು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಪ್ರೀತಿ ಗುಡುಗಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಆಗಸ್ಟ್ 19ರಂದು ಪ್ರಕಟವಾದ ಲೇಖನವನ್ನು ಉಲ್ಲೇಖಿಸಿರುವ ಪ್ರೀತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಿಂಗ್ಸ್ XI ತಂಡದ ಆಟಗಾರರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪ್ರೀತಿ ಅವರು ಬಿಸಿಸಿಐ ಜೊತೆ ಹಂಚಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಬರೆಯಲಾಗಿತ್ತು.
ಪತ್ರಿಕೆಯವರು ನನ್ನನ್ನು ಈ ಬಗ್ಗೆ ಪ್ರಶ್ನಿಸದೆ ಅಸಂಬದ್ಧವಾಗಿ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ಇದೇ ಸುದ್ದಿಯನ್ನು ಎಲ್ಲರು ಹಂಚಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಿಎಸ್ ಕೆ ಹಾಗೂ ಆರ್ ಆರ್ ವಿರುದ್ಧ ತೀರ್ಪು
ಇತ್ತೀಚೆಗೆ ಆರ್ ಎಂ ಲೋಧಾ ಸಮಿತಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಮಾಲೀಕರು ಅಪರಾಧಿಗಳು ಎಂದು ಪರಿಗಣಿಸಿ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂಡಿಯನ್ ಎಕ್ಸ್ ಪ್ರೆಸ್ ವಿರುದ್ಧ ಪ್ರೀತಿ
ಇಂಡಿಯನ್ ಎಕ್ಸ್ ಪ್ರೆಸ್ ವಿರುದ್ಧ ಪ್ರೀತಿ ಟ್ವೀಟ್ ಮಾಡಿ prevention is better than cure.
ಸುಳ್ಳು ಪತ್ತೆ ಪರೀಕ್ಷೆಗೆ ಆಗ್ರಹಿಸಿದ್ದು ನಿಜ
ಸುಳ್ಳು ಪತ್ತೆ ಪರೀಕ್ಷೆಗೆ ಬಿಸಿಸಿಐಗೆ ಆಗ್ರಹಿಸಿದ್ದು ನಿಜ. ಇದರಿಂದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಯೋಚನೆ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ವಿಷಯ ಹಂಚಿಕೊಂಡಿದೆ.
ಸುಳ್ಳು ವರದಿ ಮಾಡುವುದೇಕೆ?
ಸುಳ್ಳು ವರದಿ ಮಾಡುವುದೇಕೆ?, ಈ ವರದಿಯಿಂದ ಏನು ಲಾಭ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಎಬಿಪಿ ನ್ಯೂಸ್ ಬಗ್ಗೆ ಕೂಡಾ ಟ್ವೀಟ್
ಎಬಿಪಿ ನ್ಯೂಸ್ ಬಗ್ಗೆ ಕೂಡಾ ಪ್ರೀತಿ ಜಿಂಟಾ ಟ್ವೀಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications