Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಭಾರತದ ಡರ್ಬಿಗಾಗಿ ಕಾತುರ, ಕೊಹ್ಲಿ, ಧೋನಿ ಫೋಟೋ ವೈರಲ್

ಬೆಂಗಳೂರು, ಆಗಸ್ಟ್ 16: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ವಾಪಸ್ ಬರುತ್ತಿರುವುದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಅರ್ ಸಿಬಿ) ತಂಡ ಸಕತ್ತಾಗಿ ಸ್ವಾಗತಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಗೆ ಸ್ಟೈಲಾಗಿ ಮರುಸ್ವಾಗತ ಕೋರಿದ ಧೋನಿ

ದಕ್ಷಿಣ ಭಾರತದ ಡರ್ಬಿಗೆ ಕಾತುರದಿಂದ ಕಾದಿದ್ದು, ಪರಸ್ಪರ ಮುಖಾಮುಖಿಯಾಗಬೇಕಿದೆ ಎಂದು ಆರ್ ಸಿಬಿ ಟ್ವೀಟ್ ಮಾಡಿದೆ.

IPL South Indian derby Virat Kohli-MS Dhoni photo goes viral

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಸಿಎಸ್ ಕೆ ನಾಯಕ ಎಂಎಸ್ ಧೋನಿ ಅವರ ಚಿತ್ರವನ್ನು ಹಂಚಿಕೊಂಡಿದ್ದು, ಫೋಟೋ ವೈರಲ್ ಆಗಿದೆ.


ಬೆಂಗಳೂರು ತಂಡದ ಟ್ವೀಟ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಪ್ರತಿಕ್ರಿಯಿಸಿದೆ. ಆದಷ್ಟು ಬೇಗ ಜೊತೆಯಾಗಿ ಆಡೋಣ, ವಿಷಲ್ ಹೊಡಿರಿ ಅಂತಾ ಟ್ವೀಟ್ ಮಾಡಿದೆ.

ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಕ್ಕೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ಹಾಗಾಗಿ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ಹಾಗೂ ಪುಣೆ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದವು. ಚೆನ್ನೈ ತಂಡದ ನಾಯಕ ಧೋನಿ ಅವರು ಪುಣೆ ಪರ ಆಡಿದ್ದರು.

ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ 2010 ಹಾಗೂ 2011ರಲ್ಲಿ ಕಪ್ ಎತ್ತಿತ್ತು. 6 ಬಾರಿ ಫೈನಲ್ ಪ್ರವೇಶಿಸಿತು (2008, 2010,2011,2012,2013,2015). ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಹಲವು ಪ್ರತಿಭೆಗಳಿಗೆ ಅವಕಾಶ ಸಿಕ್ಕಿತು. ತಮಿಳರ ಪಾಲಿಗೆ ಧೋನಿ ಅವರು 'ತಲೈವಾ' ಆಗಿ ಕಾಣಿಸಿಕೊಂಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+