Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮ್ಯಾಚೆಂಸ್ಟರ್‌ನಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ; ಸಚಿನ್‌ ದಾಖಲೆ ಅಳಿಸಿದ 15 ವರ್ಷದ ಬಾಲಕ

ಭಾರತೀಯ ಕ್ರಿಕೆಟ್‌ನಲ್ಲಿ ನವ ಯುಗ ಶನಿವಾರ (ಜು.4) ರಿಂದ ಆರಂಭವಾಗಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ವೇಳೆ ಎಲ್ಲರ ಕಣ್ಣುಗಳು ಮೀಸೆ ಚಿಗುರದ ಯುವ ಆಟಗಾರ ಮೇಲೆ ನೆಟ್ಟಿವೆ. ಮಾರ್ಚ್ 27, 2011 ರಂದು ಬಿಹಾರದ ಸಮಸ್ತಿಪುರದಲ್ಲಿ ಜನಿಸಿದ 15 ವರ್ಷದ ಪೋರ ವೈಭವ್ ಸೂರ್ಯವಂಶಿ ಇಂಗ್ಲೆಂಡ್‌ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ನತ್ತ ಆಕರ್ಷಿತರಾದ ವೈಭವ್ ಕೇವಲ 9ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ ತರಬೇತಿಯನ್ನು ಆರಂಭಿಸಿದರು. ಅವರ ಅಪ್ರತಿಮ ಬ್ಯಾಟಿಂಗ್ ಪ್ರತಿಭೆಯಿಂದಾಗಿ ಅವರಿಗೆ ಅವಕಾಶಗಳು ಸಿಗಲು ಆರಂಭವಾದವು. 2024ರ ಆರಂಭದಲ್ಲಿ ಕೇವಲ 12 ವರ್ಷ 284 ದಿನಗಳ ಪ್ರಾಯದಲ್ಲೇ ಬಿಹಾರ ತಂಡದ ಪರವಾಗಿ ರಣಜಿ ಟ್ರೋಫಿ ಆಡುವ ಮೂಲಕ ವೈಭವ್ ಈ ಮೊದಲೇ ಇತಿಹಾಸ ನಿರ್ಮಿಸಿದ್ದಾರೆ. ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಹರಾಜಾದ ಆಟಗಾರ ಎಂಬ ಹೆಗ್ಗಳಿಕೆ ಸಹ ಇವರ ಹೆಸರಿನಲ್ಲಿಯೇ ಇದೆ. ಈಗ ಇವರ ಮುಕುಟಕ್ಕೆ ಮತ್ತೊಂದು ಗರಿ ಸಂದಿದೆ.

vaibhav sooryavanshi

ವೈಭವ್ ಸೂರ್ಯವಂಶಿ ಅವರ ಪಾಲಿಗೆ ಶನಿವಾರ ಶುಭ ಸುದ್ದಿಯನ್ನು ನೀಡಿದೆ. ಚಿಕ್ಕವರಿದ್ದಾಗ ಬ್ಯಾಟ್ ಹಿಡಿದ ಕಂಡ ಕನಸು ಇಂದು ದೂರದ ಮ್ಯಾಂಚೆಸ್ಟರ್‌ನಲ್ಲಿ ಸಕಾರವಾಗಲಿದೆ. ವೈಭವ್ ಸೂರ್ಯವಂಶಿ ಈಗ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಸಚಿನ್ ದಾಖಲೆ ಅಳಿಸಿದ ವೈಭವ್

ಸಚಿನ್ ತೆಂಡೂಲ್ಕರ್ 1989 ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಆಗ ಅವರಿಗೆ ಕೇವಲ 16 ವರ್ಷ 205 ದಿನಗಳು. ಈಗ ಈ ದಾಖಲೆ ವೈಭವ್ ಸೂರ್ಯವಂಶಿ ಅವರ ಪಾಲಾಗಿದೆ. ವೈಭವ್ ಸೂರ್ಯವಂಶಿ 15 ವರ್ಷ 90 ದಿನಗಳಲ್ಲಿ ಬ್ಲ್ಯೂ ಜೆರ್ಸಿಯನ್ನು ತೊಟ್ಟು ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆಧಾರವಾಗಿದ್ದ ವೈಭವ್, ಇನ್ನು ಬ್ಲ್ಯೂ ಜೆರ್ಸಿಯಲ್ಲೂ ಮಿಂಚಲು ಸಿದ್ಧರಾಗಿದ್ದಾರೆ. ವೈಭವ್ ಸೂರ್ಯವಂಶಿ 19ನೇ ಆವೃತ್ತಿಯ ಐಪಿಎಲ್‌ ಅತಿ ಹೆಚ್ಚು ರನ್‌ ಬಾರಿಸಿದ ದಾಖಲೆಯನ್ನು ಸಹ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

19ನೇ ಆವೃತ್ತಿಯ ಐಪಿಎಲ್‌ನಲ್ಲಿ ವೈಭವ್ ಆಡಿದ 16 ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ 776 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ವೈಭವ್ ಸೂರ್ಯವಂಶಿ 1 ಶತಕ, 5 ಅರ್ಧಶತಕ ಸಹ ಸಿಡಿಸಿದ್ದಾರೆ. ಅಲ್ಲದೆ ಒಂದೇ ಐಪಿಎಲ್‌ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಸಹ ಇವರ ಹೆಸರಿನಲ್ಲಿಯೇ ಇದೆ. ಇವರು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 72 ಸಿಕ್ಸರ್ ಬಾರಿಸಿ, ಕ್ರಿಸ್‌ ಗೇಲ್‌ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಕ್ರಿಸ್‌ ಗೇಲ್‌ 2013ರಲ್ಲಿ 59 ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದರು. ಈಗ ಈ ದಾಖಲೆ ವೈಭವ್ ಪಾಲಾಗಿದೆ.

Story first published: Saturday, July 4, 2026, 18:37 [IST]
Other articles published on Jul 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+