Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಳಸಂತೆಯಲ್ಲಿ IPL ಟಿಕೆಟ್‌ ಮಾರಾಟ: ಕ್ಯಾಂಟಿನ್‌ ಸಿಬ್ಬಂದಿ ಬಂಧನ

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತವರು ಪಂದ್ಯಗಳನ್ನು ಆಡಲಿದೆ. ಈ ಮೈದಾನದಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಆರ್‌ಸಿಬಿ ಪಂದ್ಯಗಳ ಟಿಕೆಟ್‌ಗಳಿಗೆ ಭರ್ಜರಿ ಬೇಡಿಕೆ. ಅಭಿಮಾನಿಗಳ ಟಿಕೆಟ್‌ ಪಡೆಯಲು ಹರಸಾಹಸ ಪಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಜಾಲವನ್ನು ಬೇಧಿಸುವಲ್ಲಿ ಬೆಂಗಳೂರು ಸೆಂಟ್ರಲ್‌ ಕ್ರೈಮ್‌ ಬ್ರ್ಯಾಂಚ್ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾಳಸಂತೆಯಲ್ಲಿ ಟಿಕೆಟ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಪೊಲೀಸರು ಬಲೆ ಬೀಸಿದ್ದಾರೆ. ವಿಶೇಷವೆಂದರೆ ಕ್ರೀಡಾಂಗಣದ ಒಳಗಡೆ ಕೆಲಸ ಮಾಡುತ್ತಿದ್ದ ಕ್ಯಾಂಟಿನ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಟಿಕೆಟ್‌ ಮಾರಾಟವಾದ ಜಾಲ ತಾಣದಲ್ಲಿ ಕ್ರೀಡಾಂಗಣದ ಸಿಬ್ಬಂದಿಗಳು ಸಹ ಕೈವಾಡವಿದೆ ಎಂದು ಬಯಲಾಗಿದೆ.

IPL

ಕ್ರೀಡಾಂಗಣದಲ್ಲಿ ಶ್ರೀ ಲಕ್ಷ್ಮಿ ಕ್ಯಾಂಟಿನ್‌ ಎಂಬ ಹೆಸರಿನಲ್ಲಿ ಕ್ಯಾಂಟಿನ್ ನಡೆಯುತ್ತಿತ್ತು. ಈ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಏಪ್ರಿಲ್‌ 15ರ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವಣ 180 ಟಿಕೆಟ್‌ ವಶಪಡಿಸಿಕೊಂಡಿದ್ದಾರೆ. ಚಂದ್ರಶೇಖರ್‌ ಒಂದು ಟಿಕೆಟ್‌ಗೆ 15 ಸಾವಿರ ದಿಂದ 19 ಸಾವಿರ ವರೆಗೆ ಮಾರಾಟಮಾಡಲಾಗುತ್ತಿತ್ತು. ಈ ಟಿಕೆಟ್‌ಗಳ ಮೂಲ ಬೆಲೆ 1200 ಆಗಿತ್ತು. ಈ ಟಿಕೆಟ್‌ಗಳನನ್ಉ ಮೂಲ ಬೆಲೆಗಿಂತ 15 ಪಟ್ಟಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟಮಾಡಲಾಗುತ್ತಿದ್ದ ಎಂಬುದು ಪೊಲೀಸರ ತನಿಖೆಯ ವೇಳೆ ಬಯಲಾಗಿದೆ.

ವಿಚಾರಣೆ ವೇಳೆ ಸತ್ಯ ಬಹಿರಂಗ

ಸಿಸಿಬಿ ಬಲೆಗೆ ಬಿದ್ದಿರುವ ಚಂದ್ರಶೇಖರ್ ಅವರನ್ನು ವಿಚಾರಣೆಯನ್ನು ಮಾಡುವ ವೇಳೆ ಹಲವು ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಕೆಎಸ್‌ಸಿಎ ಎಂದು ಹೇಳಲಾದ ಗಣೇಶ್ ಹರಿಕೇಶ್ ಎಂಬುವವರು ತನಗೆ ಈ ಟಿಕೆಟ್‌ಗಳನ್ನು ನೀಡಿ, ದುಬಾರಿಗೆ ಬೆಲೆಗೆ ಮಾರಾಟ ಮಾಡುವಂತೆ ಸೂಚನೆ ನೀಡಿದ್ದರು ಎಂದು ಸತ್ಯ ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಐಪಿಎಲ್‌ ಟಿಕೆಟ್‌ ದಂಧೆಯ ಜಾಡು ಆಳವಾಗಿ ಹಬ್ಬಿದಂತೆ ಕಾಣುತ್ತಿದೆ.

ಪ್ರಕರಣ ಬಯಲು ಬಂದಿದ್ದು ಹೇಗೆ?

ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಮತ್ತು ಇಂಡಸ್ಟ್ರಿಯಲ್ ಆಟೊಮೇಷನ್ ಕನ್ಸಲ್ಟೆಂಟ್ ಕಂಪನಿಯ ಹೆಸರಿನಲ್ಲಿ ಬಲ್ಕ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಬಳಿಕ ಈ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಟವಾಗುತ್ತಿದ್ದವು ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.ಈ ಟಿಕೆಟ್‌ಗಳನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಾರ್ಚ್‌ 28 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ನಡುವಣ ಪಂದ್ಯದ ಟಿಕೆಟ್‌ಗಳು ಸಹ ಬ್ಲ್ಯಾಕ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ, ವಿವಿಧ ವರ್ಗದ ₹17,52,600 ಮೌಲ್ಯದ 181 ಟಿಕೆಟ್‌ಗಳ ವಿವರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Story first published: Friday, April 17, 2026, 22:22 [IST]
Other articles published on Apr 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+