ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಕತ್ತರಿ: ಐಪಿಎಲ್ ಟಿಕೆಟ್ ದರ ದುಬಾರಿ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಕು ಮತ್ತು ಸೇವಾ ತೆರಿಗೆ (GST)ಯ ಹೊಸ ದರಗಳನ್ನು ಘೋಷಿಸಿದೆ. ಈ ಬಾರಿ ಬದಲಾವಣೆ ಮಾಡಲಾಗಿರುವ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ. ಇದರ ಅಡಿಯಲ್ಲಿ ಇನ್ನು ಕ್ರಿಕೆಟ್ ಪ್ರೇಮಿಗಳ ಜೇಬಿಗೂ ಕತ್ತರಿ ಬೀಳುವ ಸಾಧ್ಯತೆ ಇದೆ. ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ, ಐಪಿಎಲ್ ಟಿಕೆಟ್‌ಗಳ ಮೇಲಿನ ಜಿಎಸ್‌ಟಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಜೇಬಿಗೆ ಹೆಚ್ಚುವರಿ ಹೊರ ಬೀಳಲಿದೆ.
ಬುಧವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಮಾಡಲಾಗಿದೆ. ಮೊದಲಿಗಿಂತಲೂ 12 ಪ್ರತಿಷತ ಜಿಎಸ್‌ಟಿಯನ್ನು ಏರಿಸಲು ನಿರ್ಧರಿಸಲಾಗಿದೆ. ಅಂದರೆ ಈ ಹಿಂದೆ ಇದ್ದ ಶೇಕಡಾ 28 ರಷ್ಟಿದ್ದ ಜಿಎಸ್‌ಟಿ ತೆರಿಗೆ ಈಗ, 40ಕ್ಕೆ ಏರಿಕದಸಲಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳ ಜೇಬಿನ ಮೇಲೆ ಪರಿಣಾಮ ಬೀರುತ್ತದೆ.

ಅಂದರೆ ನೀವು ಈ ಹಿಂದೆ 1000 ರೂಪಾಯಿಗಳ ಟಿಕೆಟ್‌ಗಳನ್ನು ಖರೀದಿಸಿದಾಗ ಜಿಎಸ್‌ಟಿ 28 ರಷ್ಟಿತ್ತು. ಆಗ ನೀವು 1280 ರೂ.ಗಳನ್ನು ಪಾವತಿಸಬೇಕಿತ್ತು. ಆದರೆ ಈಗ ಹೊಸ ದರಗಳ ಪ್ರಕಾರ ನೀವು ಅದಕ್ಕೆ 1400 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದರರ್ಥ ಈಗ ಅಭಿಮಾನಿಗಳು 120 ರೂ.ಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ. ಇನ್ನು 2000 ರೂಗಳಾಗಿದ್ದರೆ ಅದರ ಮೇಲೆ 800 ರೂ.ಗಳ ಜಿಎಸ್‌ಟಿ ವಿಧಿಸಲಾಗುತ್ತದೆ.
2026ರ ಐಪಿಎಲ್ ಸಮಯದಲ್ಲಿ ಈ ಟಿಕೆಟ್‌ಗಳ ದರ ಜಾರಿಗೆ ಬರಲಿದೆ. ಸಂಘಟಕರು ಟಿಕೆಟ್ ಬೆಲೆಯಲ್ಲಿ ಹೆಚ್ಚಿಳ ಮಾಡಿದರೆ, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕೊರತೆ ಉಂಟಾಗಬಹುದು. ಭಾರತದಲ್ಲಿ ಐಪಿಎಲ್ ಟ್ರೋಫಿಯನ್ನು ಅಭಿಮಾನಿಗಳು ಹಬ್ಬದ ರೀತಿ ನೋಡುತ್ತಾರೆ. ಈ ಲೀಗ್‌ನ ಪ್ರತಿ ಪಂದ್ಯದ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಇರುತ್ತದೆ. ಮಾನ್ಯತೆ ಪಡೆದ ಪಂದ್ಯಾವಳಿಗಳ ಟಿಕೆಟ್‌ಗಳ ಮೇಲೆ ಜಿಎಸ್‌ಟಿ ಹೆಚ್ಚಿಸಲಾಗಿಲ್ಲ. ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ 500 ರೂ.ಗಳ ಟಿಕೆಟ್‌ಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದಿಲ್ಲ. ಆದರೆ 500ಕ್ಕಿಂತಲೂ ಹೆಚ್ಚಿನ ಬೆಲೆಯ ಟಿಕೆಟ್‌ಗಳ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications