Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಆರಂಭದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ ಐಪಿಎಲ್ ಚೇರ್‌ಮನ್

Ipl To Begin On September 19, Final On November 8: Chairman Brijesh Patel

ಸಾಕಷ್ಟು ಕಾತರದಿಂದ ಕಾಯುತ್ತಿದ್ದ 13ನೇ ಆವೃತ್ತಿಯ ಐಪಿಎಲ್ ಆರಂಭದ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಬಿಸಿಸಿಐ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈ ವರ್ಷದ ಐಪಿಎಲ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಪಿಟಿಐಗೆ ಬ್ರಿಜೇಶ್ ಪಟೇಲ್ ಮಾಹಿತಿಯನ್ನು ನೀಡಿದ್ದಾರೆ.

ಐಪಿಎಲ್ ಆಡಳಿತ ಮಂಡಳಿ ಸದ್ಯದಲ್ಲೇ ಸಭೆ ಸೇರಲಿದ್ದು ಈ ಬಗ್ಗೆ ಚರ್ಚೆಯನ್ನು ನಡೆಸಲಾಗುತ್ತದೆ. ಆದರೆ ನಾವು ಐಪಿಎಲ್ ಆರಂಭ ಹಾಗೂ ಅಂತ್ಯದ ದಿನಾಂಕವನ್ನು ಅಂತಿಮಗೊಳಿಸಿದ್ದೇವೆ ಎಂದು ಬ್ರಿಜೇಶ್ ಪಟೇಲ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19 ರಿಂದ ನವೆಂಬರ್ 9ರವರೆಗೆ ನಡೆಯಲಿದೆ. ಈ ಬಗ್ಗೆ ಸರ್ಕಾರದಿಂದ ಅನುಮೋದನೆಯನ್ನು ಪಡೆಯಲಿದ್ದೇವೆ. ಇದು 51 ದಿನಗಳ ಐಪಿಎಲ್ ಎಂದು ಬೃಜೇಶ್ ಪಟೇಲ್ ಖಚಿತಪಡಿಸಿದ್ದಾರೆ. ಪಿಟಿಐ ಈ ಬಗ್ಗೆ ವರದಿಪ್ರಕಟಿಸಿದ ಮರುದಿನವೇ ಬ್ರಿಜೇಶ್ ಪಟೇಲ್ ಇದನ್ನು ಖಚಿತಪಡಿಸಿದ್ದಾರೆ.

ಐಪಿಎಲ್ ನಡೆಸಲು ಐಸಿಸಿ ವಿಶ್ವಕಪ್ ಆಯೋಜನೆ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾದು ಕುಳಿತಿತ್ತು. ಕಳೆದೆರಡು ದಿನಗಳ ಹಿಂದೆಯಷ್ಟೇ ಐಸಿಸಿ ವಿಶ್ವಕಪ್ ಮುಂಡೂಡಿರುವುದನ್ನು ಖಚಿತಪಡಿಸಿತ್ತು. ಅದಾದ ಬಳಿಕ ಬಿಸಿಸಿಐ ಐಪಿಎಲ್ ಆಯೋಜನೆಯ ಬಗ್ಗೆ ತನ್ನ ಕೆಲಸವನ್ನು ಚುರುಕುಗೊಳಿಸಿದೆ.

ಕೊರೊನಾ ವೈರಸ್ ಬೆದರಿಕೆಯನ್ನು ಎದುರಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಸಿದ್ಧಪಡಿಸಲಾಗುತ್ತಿದ್ದು, ಬಿಸಿಸಿಐ ಔಪಚಾರಿಕವಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಪತ್ರ ಬರೆಯಲಿದೆ ಎಂದು ಪಟೇಲ್ ಹೇಳಿದ್ದಾರೆ. ಪ್ರೇಕ್ಷಕರಿಗೆ ಅವಕಾಶವನ್ನು ನೀಡುವುದು ಯುಎಇ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದರು

Story first published: Friday, July 24, 2020, 15:15 [IST]
Other articles published on Jul 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+