Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಎಸ್‌ಜಿಯಿಂದ ದುಬಾರಿ ಆಟಗಾರ ಡೆಲ್ಲಿಗೆ; ಡಿಸಿಯಿಂದ ಸ್ಟಾರ್ ಸ್ಪಿನ್ನರ್ ಲಕ್ನೋಗೆ

ಇತ್ತೀಚಿಗಷ್ಟೇ 19ನೇ ಆವೃತ್ತಿಯ ಐಪಿಎಲ್‌ ಮುಕ್ತಾಯವಾಗಿದೆ. ಈ ಬಾರಿಯೂ ಆರ್‌ಸಿಬಿ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿದ್ದ ಅದೆಷ್ಟೋ ತಂಡಗಳಿಗೆ ನಿರಾಸೆ ಆಗಿದೆ. ಅದರಲ್ಲಿ ಮುಖ್ಯವಾಗಿ ಲಕ್ನೋ ಸೂಪರ್ ಜೈಂಟ್ಸ್‌ ತಂಡ ಕಾಣಿಸಿಕೊಳ್ಳುತ್ತದೆ. ಇನ್ನು ಇದೇ ಸಾಲಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಹ ಇದೆ. ಈ ಎರಡೂ ತಂಡಗಳು ಈ ಬಾರಿಯ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿವೆ. ಈಗ ಒಂದು ಸುದ್ದಿ ಹೊರ ಬರುತ್ತಿದೆ. ಇದರ ಪ್ರಕಾರ ಎಲ್‌ಎಸ್‌ಜಿ ಹಾಗೂ ಡಿಸಿ ತಂಡಗಳು ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲಿವೆ ಎಂಬ ಚರ್ಚೆಗಳು ಆರಂಭವಾಗಿವೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಳೆದ ಎರಡು ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ್ದ ರಿಷಭ್ ಪಂತ್‌, ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ ಎಂಬ ಮಾತುಗಳು ಕೇಳಲಾರಂಭಿಸಿವೆ. ಈ ಎರಡೂ ತಂಡಗಳ ನಡುವೆ ಆಟಗಾರರ ಟ್ರೇಡ್ ನಡೆಯುವ ಸಾಧ್ಯತೆ ಇದ್ದು, ಎಲ್‌ಎಸ್‌ಜಿ ತಂಡವನ್ನು ಸ್ಪಿನ್ ಬೌಲರ್‌ ಕುಲ್‌ದೀಪ್ ಯಾದವ್ ಸೇರುವ ಸಾಧ್ಯತೆ ಇದೆ.

IPL Trade Rumors

ಮರಳಿ ತವರಿಗೆ ರಿಷಭ್ ಪಂತ್!

ಐಪಿಎಲ್‌ 2025ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಭ್ ಪಂತ್ ಅವರನ್ನು 27 ಕೋಟಿ ನೀಡಿ ಖರೀದಿಸಿತ್ತು. ಕ್ರಿಕ್‌ಬಜ್ ವರದಿಯ ಪ್ರಕಾರ, ಈ ವ್ಯಾಪಾರ ಒಪ್ಪಂದದಲ್ಲಿ ರಿಷಭ್ ಪಂತ್ ಅವರ ಸಂಬಳ ಸವಾಲಾಗಿತ್ತು. ಫ್ರಾಂಚೈಸಿಗಳಿಗೆ ಇಷ್ಟೊಂದು ಹಣವನ್ನು ನೀಡುವುದು ಕಷ್ಟವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಪಂತ್ ಒಪ್ಪಂದವನ್ನು ಸಮಗೊಳಿಸಲು ತಮ್ಮ ಸಂಬಳವನ್ನು ಕಡಿಮೆ ಮಾಡಿಕೊಳ್ಳಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಪಂತ್‌ 15 ಕೋಟಿ ರೂ. ಪಡೆಯಬಹುದು ಎಂದು ತಿಳಿದು ಬರುತ್ತಿದೆ. ಇನ್ನು ಕುಲ್‌ದೀಪ್‌ 13.25 ಕೋಟಿ ರೂಪಾಯಿಗಳಿಗೆ ಲಕ್ನೋ ಸೇರುವ ಸಾಧ್ಯತೆ ಇದೆ.

IPL Trade Rumors

ರಿಷಭ್‌ ಪಂತ್ ದೆಹಲಿಯ ಆಟಗಾರ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಪಂಥ್ 9 ಆವೃತ್ತಿಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ನೊಂದಿಗೆ ಇದ್ದರು. ಐಪಿಎಲ್‌ 2025ರ ಮೆಗಾ ಹರಾಜಿಗೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಇವರನ್ನು ಬಿಡುಗಡೆ ಮಾಡಿತು. ಇನ್ನು ಉತ್ತರ ಪ್ರದೇಶದ ಪರ ದೇಶೀಯ ಟೂರ್ನಿಗಳನ್ನು ಆಡುವ ಕುಲ್‌ದೀಪ್ ಯಾದವ್ ತಮ್ಮ ತವರು ತಂಡಕ್ಕೆ ಸೇರುವ ಸಾಧ್ಯತೆ ಇದೆ.

ಈ ಐಪಿಎಲ್‌ನಲ್ಲಿ ಸಾಧನೆ

ಎಲ್‌ಎಸ್‌ಜಿ ಪರ 14 ಪಂದ್ಯಗಳನ್ನು ಆಡಿರುವ ಪಂತ್ 28ರ ಸರಾಸರಿಯಲ್ಲಿ 226 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ ಕೇವಲ 1 ಅರ್ಧಶತಕ ಸೇರಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಕುಲ್‌ದೀಪ್ ಯಾದವ್ ಆಡಿದ 12 ಪಂದ್ಯಗಳಲ್ಲಿ 10 ವಿಕೆಟ್‌ ಪಡೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಕುಲ್‌ದೀಪ್ ಯಾದವ್ ಹಾಗೂ ಎಲ್‌ಎಸ್‌ಜಿ ಪರ ರಿಷಭ್ ಪಂತ್ ನೀರಸ ಪ್ರದರ್ಶನ ನೀಡಿದ್ದಾರೆ. ಇನ್ನು ಮುಂದೆ ನಡೆಯುವ ವ್ಯಾಪಾರ ಯಾವ ಫ್ರಾಂಚೈಸಿಗೆ ವರವಾಗುತ್ತದೆ ಕಾದು ನೋಡಬೇಕಿದೆ.

Story first published: Sunday, June 21, 2026, 0:33 [IST]
Other articles published on Jun 21, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+