ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಐಕಾನಿಕ್ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಆರ್‌ಸಿಬಿ ಸಹ ಸಜ್ಜಾಗುತ್ತಿದೆ.
ಆರ್‌ಸಿಬಿ ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಹಲವು ಆಟಗಾರರು ತಂಡಕ್ಕೆ ನೆರವಾಗಿದ್ದಾರೆ. ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಗಳನ್ನು ಆಡಿದೆ. ಆರ್‌ಸಿಬಿ ಪರ ಮೈದಾನದಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ ಟಾಪ್ 10 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ಆರ್‌ಸಿಬಿ ಪರ 18 ಆವೃತ್ತಿಗಳನ್ನು ಆಡಿದ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದಾಗಿತ್ತು. ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಪರ 282 ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ 9085 ರನ್ ಕಲೆ ಹಾಕಿದ್ದಾರೆ. ಈ ವೇಳೆ 8 ಶತಕ, 65 ಅರ್ಧಶತಕಗಳು ಸೇರಿವೆ. ವಿರಾಟ್ ಆರ್‌ಸಿಬಿ ಪರ 816 ಬೌಂಡರಿ, 305 ಸಿಕ್ಸರ್ ಬಾರಿಸಿದ್ದಾರೆ.
ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಸಹ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ. ಎಬಿಡಿ 157 ಪಂದ್ಯಗಳಲ್ಲಿ 41ರ ಸರಾಸರಿಯಲ್ಲಿ 4522 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 37 ಅರ್ಧಶತ ಬಾರಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರು ಸಹ ಆರ್‌ಸಿಬಿ ತಂಡದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗೇಲ್ ಆಡಿದ 91 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ 5 ಶತಕ, 21 ಅರ್ಧಶತಕದ ನೆರವಿನಿಂದ 3420 ರನ್ ಚಚ್ಚಿದ್ದಾರೆ.
ದಕ್ಷಿಣ ಆಫ್ರಿಕಾದ ತಂಡದ ಸ್ಟಾರ್ ಆಟಗಾರ ಹಾಗೂ ಆರ್‌ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಸಹ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಆಡಿದ 45 ಪಂದ್ಯಗಳಲ್ಲಿ 15 ಅರ್ಧಶತಕದ ನೆರವಿನಿಂದ 1636 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಆಟಗಾರ ಜಾಕ್ ಕಾಲಿಸ್ ಆರ್‌ಸಿಬಿ ಪರ ಆಡಿರುವ 46 ಪಂದ್ಯಗಳಲ್ಲಿ 1271 ರನ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ, 282 ಪಂದ್ಯ, 9085 ರನ್
ಎಬಿಡಿ ವಿಲಿಯರ್ಸ್, 157 ಪಂದ್ಯ, 4522 ರನ್
ಕ್ರಿಸ್ ಗೇಲ್, 91 ಪಂದ್ಯ, 3420 ರನ್
ಫಾಫು ಡುಪ್ಲೆಸಿಸ್, 45 ಪಂದ್ಯ, 1636 ರನ್
ಜಾಕ್ ಕಾಲಿಸ್, 46 ಪಂದ್ಯ, 1271 ರನ್
ಗ್ಲೆನ್ ಮ್ಯಾಕ್ಸ್‌ವೆಲ್, 52 ಪಂದ್ಯ, 1266 ರನ್
ರಾಹುಲ್ ದ್ರಾವಿಡ್, 52 ಪಂದ್ಯ, 1132 ರನ್
ದೇವದತ್ ಪಡಿಕ್ಕಲ್, 39 ಪಂದ್ಯ, 1131 ರನ್
ರಜತ್ ಪಾಟಿದಾರ್, 42 ಪಂದ್ಯ, 1111 ರನ್
ದಿನೇಶ್ ಕಾರ್ತಿಕ್, 60 ಪಂದ್ಯ, 937 ರನ್