ಐಪಿಎಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಹೆಸರಿಸಿದ ಜಾಫರ್: ರೋಹಿತ್‌ಗಿಲ್ಲ ಸ್ಥಾನ, ಧೋನಿ ನಾಯಕ

15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯಗೊಂಡಿದ್ದು ಈ ಆವೃತ್ತಿಯ ಹೊಸ ತಂಡಗಳಲ್ಲಿ ಒಂದಾದ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಿ ಮೆರೆದಿದೆ. ಟೂರ್ನಿಯುದ್ದಕ್ಕೂ ತಂಡ ಸರ್ವಾಂಗೀಣ ಪ್ರದರ್ಶನ ನೀಡಲು ಯಶಸ್ವಿಯಾಗಿರುವ ಕಾರಣ ಅರ್ಹವಾಗಿಯೇ ಟ್ರೋಫಿ ಎತ್ತಿ ಹಿಡಿಯಲು ಯಶಸ್ವಿಯಾಗಿದೆ. ಈ ಸಂದರ್ಭಗಳಲ್ಲಿ ತಂಡಗಳ ಪ್ರದರ್ಶನಗಳ ಬಗ್ಗೆ ಮಿಮರ್ಶೆಗಳು ಜೋರಾಗಿ ನಡೆಯುತ್ತಿದ್ದು ಹೆಚ್ಚಿನ ಕ್ರಿಕೆಟಿಗರು ಈ ಬಾರಿಯ ಆವೃತ್ತಿಯ ಬಲಿಷ್ಠ ಆಟಗಾರರ ಆಡುವ ಬಳಗವನ್ನು ಹೆಸರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಐಪಿಎಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಹೆಸರಿಸಿದ್ದಾರೆ.
ಕಳೆದ 15 ಆವೃತ್ತಿಗಳಲ್ಲಿ ಆಟಗಾರರರು ನೀಡಿದ ಪ್ರದರ್ಶನ ಹಾಗೂ ಸ್ಥಿರತೆಯ ಆಧಾರದಲ್ಲಿ ಈ ಬಳಗವನ್ನು ಜಾಫರ್ ಆಯ್ಕೆ ಮಾಡಿದ್ದು ಈ ತಮಡದಲ್ಲಿ ಕೆಲ ಪ್ರಮುಖ ಆಟಗಾರರು ಸ್ಥಾನ ಪಡೆಯದೆ ಅಚ್ಚರಿ ಹುಟ್ಟಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ಗೆ ಅತಿ ಹೆಚ್ಚಿನ ಟ್ರೋಫಿ ಗೆದ್ದುಕೊಟ್ಟಿರುವ ನಾಯಕ ರೋಹಿತ್ ಶರ್ಮಾ, ಎಬಿ ಡಿವಿಲಿಯರ್ಸ್ ಮುಂತಾದ ಆಟಗಾರರು ಈ ಸಾರ್ವಕಾಲಿಕ ಶ್ರೇಷ್ಠ ಆಡುವ ಬಳಗದಿಂದ ಹೊರಗುಳಿದಿದ್ದಾರೆ.

ಆರಂಭಿಕರಾಗಿ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್
ಭಾರತದ ಮಾಜಿ ಆಟಗಾರ ವಾಸಿಂ ಜಾಫರ್ ಐಪಿಎಲ್ ಕಂಡ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಹಾಗೂ ಕೆಎಲ್ ರಾಹುಲ್ ಅವರನ್ನು ಆರಂಭಿಕ ಜೋಡಿಯಾಗಿ ಹೆಸರಿದಿದ್ದಾರೆ. ಈ ಇಬ್ಬರು ಕೂಡ ಐಪಿಎಲ್ ಇತಿಹಾಸದ ಅದ್ಭುತ ಆರಂಭಿಕ ಆಟಗಾರರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕ್ರಿಸ್ ಗೇಲ್ 142 ಐಪಿಎಲ್ ಪಂದ್ಯಗಳನ್ನು ಆಡಿದ್ದರೆ ಕೆಎಲ್ ರಾಹುಲ್ 109 ಪಂದ್ಯಗಳನ್ನಾಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಕೆಎಲ್ ರಾಹುಲ್ 500ಕ್ಕೂ ಅಧಿಕ ರನ್‌ಗಳಿಸುವ ಸತತ ಐದು ಆವೃತ್ತಿಗಳಲ್ಲಿ 500ಕ್ಕೂ ಅಧಿಕ ರನ್‌ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡೊದ್ದಾರೆ.

ರೋಹಿತ್ ಬದಲು ಧೋನಿಗೆ ನಾಯಕತ್ವ, ಮಧ್ಯಮ ಕ್ರಮಾಂಕ ಬಲಿಷ್ಠ
ಇನ್ನು ಮಧ್ಯಮ ಕ್ರಮಾಂಕಕ್ಕೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮತ್ತು ಎಂಎಸ್ ಧೋನಿಯನ್ನು ಆಯ್ಕೆ ಮಾಡಿದ್ದಾರೆ. ಎಂಎಸ್ ಧೋನಿಯನ್ನು ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ಆಯ್ಕೆಮಾಡಿದ್ದಾರೆ ಜಾಫರ್. ಐಪಿಎಲ್‌ನಲ್ಲಿ ಅತಿ ಹೆಚ್ಚು ಟ್ರೋಫಿ ಪಡೆದ ನಾಯಕ ಎಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಹೆಸರಿನಲ್ಲಿದ್ದರೂ ಜಾಫರ್ ಧೋನಿ ಅತ್ಯುತ್ತಮ ನಾಯಕ ಎಂದು ಆಯ್ಕೆಮಾಡಿದ್ದು ರೋಹಿತ್ ಶರ್ಮಾ ಈ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಆಲ್‌ರೌಂಡರ್‌ಗಳಾಗಿ ಆಂಡ್ರೆ ರಸೆಲ್ ಹಾಗೈ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ ಜಾಫರ್.

ಅದ್ಭುತವಾಗಿದೆ ಬೌಲಿಂಗ್ ವಿಭಾಗ
ಇನ್ನು ವಾಸಿಂ ಜಾಫರ್ ಆಯ್ಕೆ ಮಾಡಿರುವ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಸ್ಪಿನ್ನರ್ ರಶೀದ್ ಖಾನ್, ಜಸ್ಪ್ರೀತ್ ಬೂಮ್ರ, ಹಾಗು ಶ್ರೀಲಂಕಾದ ದಿಗ್ಗಜ ವೇಗಿ ಲಸಿತ್ ಮಲಿಂಗಾ ಪ್ರಮುಖ ಬೌಲರ್‌ಗಳಾಗಿ ತಂಡದಲ್ಲಿದ್ದಾರೆ. ಇನ್ನು ಎರಡನೇ ಸ್ಪಿನ್ನರ್‌ಆಗಿ ರವಿಚಂದ್ರನ್ ಅಶ್ವಿನ್ ಹಾಗೂ ಯುಜುವೇಂದ್ರ ಚಾಹಲ್ ಮಧ್ಯೆ ಒಬ್ಬರನ್ನು ಆಯ್ಕೆ ಮಾಡುವುದಾಗಿ ಹೆಸರಿಸಿದ್ದಾರೆ. ರೋಹಿತ್ ಶರ್ಮಾ ಜೊತೆಗೆ ಐಪಿಎಲ್‌ನಲ್ಲಿ ದಿಗ್ಗಜರು ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್, ಡೇವಿಡ್ ವಾರ್ನರ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಜಾಫರ್ ಹೆಸರಿಸಿದ ಬಲಿಷ್ಠ ಪ್ಲೇಯಿಂಗ್ XI ಹೀಗಿದೆ
ಕ್ರಿಸ್ ಗೇಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಆಂಡ್ರೆ ರಸೆಲ್, ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ರವಿಚಂದ್ರನ್ ಅಶ್ವಿನ್ / ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications