2016ರ ಐಪಿಎಲ್ ನಲ್ಲೂ 8 ತಂಡ ಆಡಲಿದೆ: ಐಪಿಎಲ್ ಆಯುಕ್ತ
ಕೋಲ್ಕತ್ತಾ, ಜು.16: ಹಗರಣಕ್ಕೆ ತುತ್ತಾಗಿ ಕಪ್ಪುಮಸಿ ಹಚ್ಚಿಕೊಂಡಿರುವ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಮುಂದಿನ ಅವೃತ್ತಿಯಲ್ಲಿ ಶುಭ್ರವಾಗಿ ಇನ್ನಷ್ಟು ಪವರ್ ಫುಲ್ ಆಗಿ ಕಣಕ್ಕಿಳಿಯಲಿದೆ. 6 ತಂಡಗಳೊಂದಿಗೆ ಟೂರ್ನಿ ಎಂದಿಗೂ ನಡೆಸುವುದಿಲ್ಲ, 8 ತಂಡಗಳು ಆಡಲಿವೆ ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹೇಳಿದ್ದಾರೆ.
ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಲೋಧಾ ಅವರ ಸಮಿತಿ ಚೆನ್ನೈ ಹಾಗೂ ರಾಜಸ್ಥಾನ ತಂಡಗಳಿಗೆ 2 ವರ್ಷ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಹತ್ವ ಟೂರ್ನಿ ಎನಿಸಿರುವ ಐಪಿಎಲ್ ನ ಆಯುಕ್ತರಾದ ರಾಜೀವ್ ಶುಕ್ಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಐಪಿಎಲ್ ಕುರಿತು ಚಿಂತಿಸುತ್ತಿದ್ದೇವೆ. ಮುಂದಿನ ಆವೃತ್ತಿಯ ಐಪಿಎಲ್ ಭರ್ಜರಿ ಯಶಸ್ಸು ಸಾಧಿಸಲಿದೆ. ಐಪಿಎಲ್ ಒಂದು ಉತ್ತಮ ಉತ್ಪನ್ನವಾಗಿದೆ. ಈ ತೀರ್ಪು (ತಂಡಗಳ ನಿಷೇಧ) ಐಪಿಎಲ್‌ಗೆ ಯಾವುದೇ ಪರಿಣಾಮ ಬೀರದು. ಕೊಚ್ಚಿ ಫ್ರಾಂಚೈಸಿಗೆ 550 ಕೋಟಿ ರೂ. ನೀಡಬೇಕು ಎನ್ನುವ ಲೋಹಟಿ ವರದಿಯ ಕುರಿತಾಗಿ ಕಾನೂನು ಸಲಹೆ ಪಡೆದ ಬಳಿಕ ಮೇಲ್ಮನವಿ ಸಲ್ಲಿಸಲಿದ್ದೇವೆ ಅಲ್ಲದೆ ಕೊಚ್ಚಿ ಟಸ್ಕರ್ಸ್ ಕೇರಳ ಮುಂದಿನ ಐಪಿಎಲ್ ಆವೃತ್ತಿ ಯಲ್ಲಿ ತಲೆ ಎತ್ತುವ ಸಾಧ್ಯತೆ ಇಲ್ಲ ಎಂದು ಶುಕ್ಲಾ ಸ್ಪಷ್ಟಪಡಿಸಿದರು.
ಮುಂಬೈನಲ್ಲಿ ಭಾನುವಾರ ನಡೆಯಲಿರುವ ಆಡಳಿತ ಮಂಡಳಿಯ ಸಭೆಯಲ್ಲಿ ಐಪಿಎಲ್ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಬಿಸಿಸಿಐ ಎರಡೂ ತಂಡಗಳನ್ನು ಮುನ್ನಡೆಸಿ, ಒಬ್ಬ ವ್ಯಕ್ತಿಗೆ ಜವಾಬ್ದಾರಿ ವಹಿಸಿಕೊಡುವ ಯೋಜನೆ ಹೊಂದಿದೆ. ಆಟಗಾರರ ಹರಾಜು ಹಾಗೂ ತಂಡಗಳ ನಿರ್ವಹಣೆ ಹೊಣೆ ಎರಡು ಪ್ರಮುಖ ವಿಷಯಗಳು ಬಿಸಿಸಿಐ ಮುಂದಿದೆ ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications