Highest Batting Averages in IPL: ಐಪಿಎಲ್‌ನಲ್ಲಿ ಉತ್ತಮ ಸರಾಸರಿಯೊಂದಿಗೆ ರನ್ ಕಲೆ ಹಾಕಿದ ಆಟಗಾರರು: ಕನ್ನಡಿಗನಿಗೂ ಸ್ಥಾನ
ಐಪಿಎಲ್ ಟಿ20 ಕ್ರಿಕೆಟ್ ಪಂದ್ಯ ಎಂದ್ರೆ ಬ್ಯಾಟರ್‌ಗಳ ಆರ್ಭಟ. ಒಂದು ರೀತಿಯಲ್ಲಿ ಈ ಮೆಗಾ ಹರಾಜಿನಲ್ಲಿ ರಾಜನಂತೆ ಮೆರೆಯುವರೇ ಬ್ಯಾಟರ್‌ಗಳು. ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಗೈಯುವ ಬ್ಯಾಟರ್ಸ್, ತಂಡದ ಗೆಲುವಿನಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಾರೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡುವ ಬ್ಯಾಟರ್ಸ್‌ಗಳು ರನ್ ಮಹಲ್ ಕಟ್ಟುತ್ತಾರೆ. ಐಪಿಎಲ್‌ನಲ್ಲಿ ಅದೆಷ್ಟೋ ಬ್ಯಾಟರ್‌ಗಳು ಭರ್ಜರಿ ಸರಾಸರಿಯನ್ನು ಹೊಂದಿರುತ್ತಾರೆ. ಈ ವರದಿಯಲ್ಲಿ ಐಪಿಎಲ್‌ನಲ್ಲಿ ಬೆಸ್ಟ್ ಎವರೆಜ್ ಹೊಂದಿರುವ ಬ್ಯಾಟರ್‌ಗಳ ಬಗ್ಗೆ ವರದಿ ಇಲ್ಲಿದೆ.
ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕ ಪ್ರತಿ ಬ್ಯಾಟರ್ ತನ್ನ ತಂಡಕ್ಕೆ ಉತ್ತಮ ಪ್ರದರ್ಶನ ನೀಡುವ ಲೆಕ್ಕಾಚಾರವನ್ನೇ ಹಾಕಿಕೊಂಡಿರುತ್ತಾನೆ. ಆದರೆ ಆತನಿಗೆ ಅವಕಾಶಗಳು ಹೆಚ್ಚಾಗಿ ಸಿಕ್ಕಿರುವುದಿಲ್ಲ. ಈ ವರದಿಯಲ್ಲಿ 20 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿ ಒಳ್ಳೆಯ ಸರಾಸರಿಯನ್ನು ಹೊಂದಿರುವ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಡ್ವೇನ್ ಕಾನ್ವೆ ಅವರ ಹೆಸರು ಎದ್ದು ಕಾಣುತ್ತದೆ. ಇವರು ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬೆಸ್ಟ್ ಬ್ಯಾಟಿಂಗ್ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಇವರು ಆಡಿರುವ 22 ಪಂದ್ಯಗಳಲ್ಲಿ 48.63ರ ಸರಾಸರಿಯೊಂದಿಗೆ 924 ರನ್ ಕಲೆ ಹಾಕಿದ್ದಾರೆ.
| ಆಟಗಾರ | ತಂಡ | ಇನಿಂಗ್ಸ್ | ರನ್ಸ್ | ಸರಾಸರಿ | |
| ಡ್ವೇನ್ ಕಾನ್ವೆ | ಸಿಎಸ್‌ಕೆ | 22 | 924 | 48.63 | |
| ಬಿ ಸಾಯಿ ಸುದರ್ಶನ್ | ಜಿಟಿ | 25 | 1034 | 47 | |
| ಕೆಎಲ್ ರಾಹುಲ್ | ಪಂಜಾಬ್, ಲಕ್ನೋ, ಆರ್‌ಸಿಬಿ, ಎಸ್‌ಆರ್‌ಎಚ್ | 123 | 4683 | 45.46 | |
| ರುತುರಾಜ್ ಗಾಯಕ್ವಾಡ್ | ಸಿಎಸ್‌ಕೆ | 65 | 2380 | 41.46 | |
| ಕ್ಯಾಮ್ರೂನ್ ಗ್ರೀನ್ | ಮುಂಬೈ, ಆರ್‌ಸಿಬಿ | 28 | 707 | 41.58 | |
| ಡೇವಿಡ್ ವಾರ್ನರ್ | ಡೆಲ್ಲಿ, ಎಸ್‌ಆರ್‌ಎಚ್ | 184 | 6565 | 40.52 | |
| ಲೆಂಡ್ಲ್ ಸಿಮ್ಮನ್ಸ್ | ಮುಂಬೈ | 29 | 1079 | 39.96 | |
| ಶಾನ್ ಮಾರ್ಷ | ಪಂಜಾಬ್ | 69 | 2477 | 39.95 | |
| ತಿಲಕ್ ವರ್ಮಾ | ಮುಂಬೈ | 38 | 1156 | 39.86 | |
| ಜೆಪಿ ಡುಮಿನಿ | ಡೆಲ್ಲಿ, ಡಿಸಿಎಸ್, ಮುಂಬೈ | 77 | 2029 | 39.78 | |
| ಕ್ರಿಸ್ ಗೇಲ್ | ಕೆಕೆಆರ್, ಪಂಜಾಬ್, ಆರ್‌ಸಿಬಿ | 141 | 4965 | 39.72 | |
| ಎಬಿಡಿ ವಿಲಿಯರ್ಸ್ | ಡಿಸಿ, ಆರ್‌ಸಿಬಿ | 179 | 5162 | 39.7 | |
| ಎಂಎಸ್ ಧೋನಿ | ಸಿಎಸ್‌ಕೆ, ಪುಣೆ | 229 | 5243 | 39.12 | |
| ಮೈಕೆಲ್ ಹಸ್ಸಿ | ಸಿಎಸ್‌ಕೆ, ಮುಂಬೈ | 58 | 1977 | 38.76 | |
| ವಿರಾಟ್ ಕೊಹ್ಲಿ | ಆರ್‌ಸಿಬಿ | 244 | 8004 | 38.66 |
ಅತಿ ಹೆಚ್ಚು ಸರಾಸರಿಯಲ್ಲಿ ರನ್ ಕಲೆ ಹಾಕುವ ಆಟಗಾರರ ಪಟ್ಟಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಯುವ ಆಟಗಾರ ಸಾಯಿ ಸುದರ್ಶನ್ ಅವರ ಹೆಸರು ಕಾಣಿಸಿಕೊಳ್ಳುತ್ತದೆ. ಇವರು ಸಹ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ್ದಾರೆ. ಇವರು ಆಡಿರುವ 25 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 1034 ರನ್ ಕಲೆ ಹಾಕಿದ್ದಾರೆ.
ಕೆಎಲ್ ರಾಹುಲ್ ಸೂಪರ್ ಆಟ
ಕನ್ನಡಿಗ ಕೆಎಲ್ ರಾಹುಲ್ ಸಹ ಉತ್ತಮ ಸರಾಸರಿಯಲ್ಲಿ ರನ್ ಕಲೆ ಹಾಕುವ ಬ್ಯಾಟರ್. ಇವರು ಪಂಜಾಬ್, ಲಕ್ನೋ, ಆರ್‌ಸಿಬಿ, ಎಸ್‌ಆರ್‌ಎಚ್ ತಂಡವನ್ನು ಪ್ರತಿನಿಧಿಸಿದ್ದು, 123 ಪಂದ್ಯಗಳಲ್ಲಿ 4683 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 45.46 ಆಗಿದೆ.
ಯಾವೆಲ್ಲಾ ಆರ್‌ಸಿಬಿ ಬ್ಯಾಟರ್‌ಗಳು ಟಾಪ್ 15ರಲ್ಲಿ ಇದ್ದಾರೆ?
ಅತಿ ಹೆಚ್ಚು ಸರಾಸರಿಯನ್ನು ಹೊಂದಿರುವ ಆರ್‌ಸಿಬಿ ಪರ ಆಡಿದ ಆಟಗಾರರ ಪಟ್ಟಿಯಲ್ಲಿ ಕ್ಯಾಮ್ರೂನ್ ಗ್ರೀನ್‌ಗೂ ಸ್ಥಾನ. ಇವರು 41.58ರ ಸರಾಸರಿಯಲ್ಲಿ 707 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಬೆಂಗಳೂರು ತಂಡದ ಪರ ಆಡಿರುವ ಕ್ರಿಸ್ ಗೇಲ್. ಇವರು ಒಟ್ಟಾರೆ ಆಡಿದ 141 ಪಂದ್ಯಗಳಲ್ಲಿ 4965 ರನ್ ಸಿಡಿಸಿದ್ದು, 39.72 ಸರಾಸರಿ ಹೊಂದಿದ್ದಾರೆ. ಇನ್ನು ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿಡಿ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರ. ಇವರು ಆಡಿದ 170 ಪಂದ್ಯಗಳಲ್ಲಿ 5162 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 39.70 ಆಗಿದೆ. ಇನ್ನು ವಿರಾಟ್ ಕೊಹ್ಲಿ ಸಹ 38.66ರ ಸರಾಸರಿಯಲ್ಲಿ 244 ಪಂದ್ಯಗಳಲ್ಲಿ 8004 ರನ್ ಕಲೆ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications